ಮಧುಮೇಹಿಗಳಿಗೆ ವರದಾನವೇ ಸರಿ ʼಈʼ ಹಣ್ಣು! ನೀರಲ್ಲಿ ನೆನಸಿ ತಿಂದ್ರೆ ಯಾವತ್ತೂ ಹೆಚ್ಚಾಗಲ್ಲ ಬ್ಲಡ್‌ ಶುಗರ್!!‌

Blood Sugar Control Tips: ಅಂಜೂರವು ಒಣ ಹಣ್ಣುಯಾಗಿದ್ದು ಅದು ಕೊಬ್ಬು ಅಥವಾ ಕೊಲೆಸ್ಟ್ರಾಲ್ ಅನ್ನು ಹೊಂದಿರುವುದಿಲ್ಲ. ಪ್ರತಿದಿನ ರಾತ್ರಿ ನೀರಿನಲ್ಲಿ ನೆನೆಸಿದ ಅಂಜೂರದ ಹಣ್ಣುಗಳನ್ನು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಅಲ್ಲದೇ ಮಧುಮೇಹಿಗಳಿಗೆ ಈ ಹಣ್ಣು ವರದಾನವೆಂದರೇ ತಪ್ಪಾಗುವುದಿಲ್ಲ.. 
 

1 /7

ಬಿಡುವಿಲ್ಲದ ದಿನಚರಿಯಲ್ಲಿಯೂ ಮಧುಮೇಹಿಗಳು ತಮ್ಮ ಆಹಾರದ ಬಗ್ಗೆ ಎಚ್ಚರ ವಹಿಸಬೇಕಾಗುತ್ತದೆ.. ಇಲ್ಲವಾದರೇ ಗಂಭೀರ ಸಮಸ್ಯೆಗಳು ಕಾಡುವುದಂತೂ ತಪ್ಪಿದ್ದಲ್ಲ.. ಆದರೆ ಪ್ರಕೃತಿಯಲ್ಲಿ ಸಿಗುವ ಕೆಲವು ಹಣ್ಣು ಮತ್ತು ತರಕಾರಿಗಳು ದೇಹದಲ್ಲಿ ಶುಗರ್‌ ಹೆಚ್ಚಾಗದಂತೆ ತಡೆಯುತ್ತವೆ.. ಅವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿದರೇ ಮಧುಮೇಹವನ್ನು ನಿಯಂತ್ರಿಸಬಹುದು..   

2 /7

ಮಧುಮೇಹಿಗಳಿಗೆ ಕೆಲವು ಹಣ್ಣುಗಳು ಔಷಧದಂತೆ ಕೆಲಸ ಮಾಡುತ್ತವೆ.. ಅಂತವುಗಳಲ್ಲಿ ಅಂಜೂರವೂ ಒಂದು.. ಈ ಹಣ್ಣುದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗದಂತೆ ನೋಡಿಕೊಳ್ಳುತ್ತವೆ.. ಹಾಗಾದ್ರೆ ಇವುಗಳನ್ನು ತಿನ್ನುವುದು ಹೇಗೆ ಎಂದು ಇಲ್ಲಿ ತಿಳಿಯೋಣ..  

3 /7

 ನೆನೆಸಿದ ಅಂಜೂರದ ಹಣ್ಣುಗಳನ್ನು ತಿನ್ನುವುದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು ತುಂಬಾ ಪ್ರಯೋಜನಕಾರಿಯಾಗಿದೆ. ಅಂಜೂರದಲ್ಲಿ ನಾರಿನಂಶ ಅಧಿಕವಾಗಿದ್ದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ.   

4 /7

ಅಂಜೂರದ ಹಣ್ಣುಗಳನ್ನು ನೇರವಾಗಿ ತಿನ್ನುವುದಕ್ಕಿಂತ ರಾತ್ರಿ ನೀರಲ್ಲಿ ನೆನಸಿಟ್ಟು ಬೆಳಗಿನ ಜಾವ ಖಾಲಿ ಹೊಟ್ಟೆಯಲ್ಲಿ ತಿಂದ್ರೆ ಮಧುಮೇಹ ಎಷ್ಟೇ ಇದ್ದೂ ನಿಯಂತ್ರಣಕ್ಕೆ ಬರುತ್ತದೆ..  

5 /7

ನೆನೆಸಿದ ಅಂಜೂರದ ಹಣ್ಣುಗಳನ್ನು ಸೇವಿಸುವುದರಿಂದ, ದೇಹದಲ್ಲಿ ಗ್ಲೂಕೋಸ್ ಮಟ್ಟವು ಕ್ರಮೇಣ ಹೆಚ್ಚಾಗುತ್ತದೆ, ಅದರೊಂದಿಗೆ ರಕ್ತದಲ್ಲಿನ ಸಕ್ಕರೆಯ ಮಟ್ಟವು ನಿಯಂತ್ರಣದಲ್ಲಿರುತ್ತದೆ.   

6 /7

ಅಂಜೂರದಲ್ಲಿ ನಾರಿನಂಶ ಹೆಚ್ಚಿದ್ದು ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಪ್ರಯೋಜನಕಾರಿ. ಅಂಜೂರದ ನಿಯಮಿತ ಸೇವನೆಯು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಬಲವಾಗಿ ಮತ್ತು ಆರೋಗ್ಯಕರವಾಗಿರಿಸುತ್ತದೆ.   

7 /7

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.)