ಸಿಂಹ ರಾಶಿಯಲ್ಲಿ ಚತುರ್ಗ್ರಹಿ ಯೋಗ, ಧನದ ಅಧಿದೇವತೆಯ ಕೃಪೆಯಿಂದ ಈ ರಾಶಿಗಳ ಮೇಲೆ ಹಣದ ಸುರಿಮಳೆ!

Chaturgrahi Yog In Leo: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸಿಂಹ ರಾಶಿಯಲ್ಲಿ ಚತುರ್ಗ್ರಹಿ ಯೋಗ ನಿರ್ಮಾಣಗೊಳ್ಳುವುದರಿಂದ 4 ರಾಶಿಗಳ ಜನರ ಮೇಲೆ ಧನದ ಅಧಿದೇವತೆ ಲಕ್ಷ್ಮಿ ತನ್ನ ಕೃಪಾವೃಷ್ಟಿ ಬೀರಲಿದ್ದು, ನೌಕರಿ ಹಾಗೂ ಬಿಸ್ನೆಸ್ ನಲ್ಲಿ ಅಪಾರ ಯಶಸ್ಸಿನ ಜೊತೆಗೆ ಧನಲಾಭ ಉಂಟಾಗುವ ಸಾಧ್ಯತೆ ಇದೆ(Spiritual News In Kannada). 
 

ಬೆಂಗಳೂರು: ವೈದಿಕ ಪಂಚಾಂಗದ ಪ್ರಕಾರ ಸೂರ್ಯ ಇಂದು ತನ್ನ ಸ್ವರಾಶಿಯಾಗಿರುವ ಸಿಂಹ ರಾಶಿಗೆ ಪ್ರವೇಶಿಸಿದ್ದಾನೆ. ಈ ರಾಶಿಯಲ್ಲಿ ಈಗಾಗಲೇ ಮಂಗಳ ಬುಧ ಹಾಗೂ ಚಂದ್ರರು ವಿರಾಜಮಾನರಾಗಿದ್ದಾರೆ. ಹೀಗಿರುವಾಗ ಈ ನಾಲ್ಕು ಗ್ರಹಗಳ ಯುತಿಯಿಂದ ಸಿಂಹ ರಾಶಿಯಲ್ಲಿ ಚತೃಗ್ರಹಿ ಯೋಗ ನಿರ್ಮಾಣಗೊಂಡಿದೆ. ವಿಶೇಷ ಎಂದರೆ ಈ ಯೋಗ ಇಂದು ಮಾತ್ರ ಇರಲಿದೆ (Spiritual News In Kannada). ಏಕೆಂದರೆ ಚಂದ್ರ ಹಾಗೂ ಮಂಗಳ ಇಬ್ಬರೂ ಕೂಡ ತಮ್ಮ ತಮ್ಮ ರಾಶಿಗಳನ್ನು ಪರಿವರ್ತಿಸಲಿದ್ದಾರೆ. ಚಂದ್ರ ಹಾಗೂ ಮಂಗಳ ಇಬ್ಬರೂ ಕೂಡ ಕನ್ಯಾ ರಾಶಿಗೆ ಪ್ರವೇಶಿಸಲಿದ್ದಾರೆ. ಆದರೆ ಪ್ರಸ್ತುತ ನಿರ್ಮಾಣಗೊಂಡಿರುವ ಈ ಚತುರ್ಗ್ರಹಿ ಯೋಗ ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದ್ದು, ವಿಶೇಷವಾಗಿ 4 ರಾಶಿಗಳ ಜನರಿಗೆ ಆಕಸ್ಮಿಕ ಧನಲಾಭದ ಜೊತೆಗೆ ನೌಕರಿ, ಬಿಸ್ನೆಸ್ ನಲ್ಲಿ ಅಪಾರ ಯಶಸ್ಸು ಸಿಗುವ ಏಲ್ಲಾ ಸಾಧ್ಯತೆಗಲಿವೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ 

 

ಇದನ್ನೂ ಓದಿ-

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ವೃಷಭ ರಾಶಿ: ನಿಮ್ಮ ಗೋಚರ ಜಾತಕದ ಚತುರ್ಥ ಭಾವದಲ್ಲಿ ಈ ಯುತಿ ನಿರ್ಮಾಣಗೊಳ್ಳುತ್ತಿದೆ. ಹೀಗಾಗಿ ಇಂದು ನಿಮ್ಮ ದಿನ ಅತ್ಯುತ್ತಮವಾಗಿ ಕಳೆದುಹೋಗಲಿದೆ . ಕುಟುಂಬದ ಸಂಪೂರ್ಣ ಬೆಂಬಲ ನಿಮಗೆ ಸಿಗಲಿದೆ. ಸುಖ-ಸೌಕರ್ಯಗಳ ಜೊತೆಗೆ ನಿಮಗೆ ಅಪಾರ ಧನಸಂಪತ್ತು ಪ್ರಾಪ್ತಿಯಾಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ.   

2 /5

ಮಿಥುನ ರಾಶಿ:ನಿಮ್ಮ ಗೋಚರ ಜಾತಕದ ತೃತೀಯ ಭಾವದಲ್ಲಿ ಈ ಯುತಿ ನೆರವೇರುತ್ತಿದ್ದು , ನೀವು ಸಾಕಷ್ಟು ಲವಲವಿಕೆಯಿಂದ ತುಂಬಿರುವಿರಿ. ಅಷ್ಟೇ ಅಲ್ಲ ನೀವು ಇಂದು ಸಾಕಷ್ಟು ಆತ್ಮವಿಶ್ವಾಸದಿಂದ ತುಂಬಿರುವಿರಿ. ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ನಿಮ್ಮದಾಗಲಿದೆ. ಕುಟುಂಬ ಸದಸ್ಯರ ಜೊತೆಗೆ ಉತ್ತಮ ಕಾಲ ಕಳೆದುಹೋಗಲಿದೆ. ನೌಕರ ವರ್ಗದ ಜನರಿಗೆ ಭಾರಿ ಧನಲಾಭದ ಸಾಧ್ಯತೆಗಳಿವೆ.   

3 /5

ತುಲಾ ರಾಶಿ: ನಿಮ್ಮ ಗೋಚರ ಜಾತಕದ ಏಕಾದಶ ಭಾವದಲ್ಲಿ ಈ ಯುತಿ ನೆರವೇರುತ್ತಿದೆ. ಹೀಗಿರುವಾಗ ಈ ರಾಶಿಗಳ ಜಾತಕದ ಜನರಿಗೆ ಸಮಾಜದಲ್ಲಿ ಅಪಾರ ಘನತೆ ಗೌರವ ಪಾರ್ಪ್ತಿಯಾಗಲಿದೆ. ಪ್ರತಿಯೊಬ್ಬರು ನಿಮ್ಮ ಕೆಲಸದ ಕುರಿತು ಪ್ರಶಂಸೆ ವ್ಯಕ್ತಪಡಿಸಲಿದ್ದಾರೆ. ನಿಮ್ಮೊಳಗೆ ನೇತೃತ್ವ ವಹಿಸುವ ಅಪಾರ ಕ್ಷಮತೆ ಇದೆ, ಅದು ಮತ್ತಷ್ಟು ಹೆಚ್ಚಾಗಲಿದೆ. ಹೊಸ ಬಿಸ್ನೆಸ್ ಆರಂಭಿಸಲು ಬಯಸುತ್ತಿದ್ದರೆ, ಈ ಅವಧಿಯಲ್ಲಿ ನೀವು ಆರಂಭಿಸಬಹುದು, ಅದರಿಂದ ನಿಮಗೆ ಭವಿಷ್ಯದಲ್ಲಿ ಅಪಾರ ಧನಲಾಭ ಉಂಟಾಗಲಿದೆ. ಆಕಷ್ಮಿಕ   ಧನಲಾಭದ ಎಲ್ಲಾ ಸಾದ್ಯತೆಗಳು ಗೋಚರಿಸುತ್ತಿವೆ.   

4 /5

ವೃಶ್ಚಿಕ ರಾಶಿ: ಚತುರ್ಗ್ರಹಿ ಯೋಗ ನಿಮ್ಮ ಗೋಚರ ಜಾತಕದ ದಶಮ ಭಾವದಲ್ಲಿ ನೆರವೇರುತ್ತಿದೆ. ಇದರಿಂದ ವೃಶ್ಚಿಕ ರಾಶಿಯ ಜನರಿಗೆ ಅಪಾರ ಉನ್ನತಿಯ ಯೋಗವಿದೆ. ಕಾರ್ಯಕ್ಷೇತ್ರದಲ್ಲಿ ಮೇಲಾಧಿಕಾರಿಗಳು ನಿಮ್ಮ ಕೆಲಸದ ಕುರಿತು ಪ್ರಶಂಸೆ ವ್ಯಕ್ತಪಡಿಸಲಿದ್ದಾರೆ. ಇದರಿಂದ ನಿಮಗೆ ಪದೋನ್ನತಿ-ಇಂಕ್ರಿಮೆಂಟ್ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಆದಾಯದ ಹೊಸಹೊಸ ಮೂಲಗಳು ಸೃಷ್ಟಿಯಾಗಲಿವೆ.   

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)