Jupiter Ast 2023: ಬರುವ ಮಾರ್ಚ್ 31 ರಂದು ಗುರು ಗ್ರಹ ಅಸ್ತಮಿಸಲಿದೆ. ಬೃಹಸ್ಪತಿಯ ಈ ಅಸ್ತ ಮಿಥುನ, ಕನ್ಯಾ ಹಾಗೂ ಇತರ ಕೆಲ ರಾಶಿಗಳ ಜೀವನಲ್ಲಿ ಕೆಲ ಅಡೆತಡೆಗಳನ್ನು ತರಲಿದೆ. ಬಿಸ್ನೆಸ್, ನೌಕರಿ ಸೇರಿದಂತೆ ವೈವಾಹಿಕ ಜೀವನದ ಮೇಲೆ ಇದರಿಂದ ಕೆಟ್ಟ ಪ್ರಭಾವ ಉಂಟಾಗಲಿದೆ.
Guru Asta: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹ ಹಾಗೂ ನಕ್ಷತ್ರಗಳ ರಾಶಿ ಪರಿವರ್ತನೆ ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಅದೇ ರೀತಿ ಗ್ರಹಗಳ ಅಸ್ತ ಕೂಡ ಪ್ರಭಾವ ಬೀರುತ್ತದೆ. ಪ್ರಸ್ತುತ ಮಾರ್ಚ್ 31ರಂದು ದೇವಗುರು ಬೃಹಸ್ಪತಿ ಅಸ್ತಮಿಸಲಿದೆ. ಇದಲ್ಲದೆ ಅಸ್ತನಾಗಿಯೇ ಏಪ್ರಿಲ್ 22 ರಂದು ಮಂಗಳನ ರಾಶಿಯಾಯಿರುವ ಮೇಷ ರಾಶಿಗೆ ಪ್ರವೇಶಿಸಲಿದ್ದಾನೆ. ಹೇಗಿರುವಾಗ ಸಂಪೂರ್ಣ ಒಂದು ತಿಂಗಳು ಕಾಲ ಗುರು ಅಸ್ತ ಭಾವದಲ್ಲಿಯೇ ಇರಲಿದ್ದಾನೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಗುರುವಿನ ಅಸ್ತ ಹೆಚ್ಚು ಶುಭ ಎಂದು ಭಾವಿಸಲಾಗುವುದಿಲ್ಲ. ಒಂದೆಡೆ ಶುಭ ಹಾಗೂ ಮಂಗಳ ಕಾರ್ಯಗಳಿಗೆ ಪೂರ್ಣವಿರಾಮ ಬಿದ್ದರೆ, ಇನ್ನೊಂದೆಡೆ ಕೆಲ ರಾಶಿಗಳ ಜಾತಕದವರ ಮೇಲೆ ಇದು ಕೆಟ್ಟ ಪ್ರಭಾವ ಬೀರುತ್ತದೆ. ಗುರುವಿನ ಅಸ್ತದಿಂದ ಕೆಲ ರಾಶಿಗಳ ಜೀವನದಲ್ಲಿ ಏರಿಳಿತಗಳು ಕಂಡುಬರಲಿವೆ. ಹೀಗಾಗಿ ಈ ರಾಶಿಗಳ ಜನರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾಗಲಿದೆ.
ಇದನ್ನೂ ಓದಿ-Ram Navami 2023: ರಾಮ ನವವಮಿಯ ದಿನ ಸರ್ವಾರ್ಥಸಿದ್ಧಿ, ಅಮೃತ ಸಿದ್ಧಿ ಹಾಗೂ ಗುರುಪುಷ್ಯ ನಕ್ಷತ್ರಗಳ ಮಹಾಸಂಯೋಗ!
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಮಿಥುನ ರಾಶಿ: ಮೀನ ರಾಶಿಯಲ್ಲಿ ಗುರುವಿನ ಅಸ್ತ ಮಿಥುನ ರಾಶಿಯ ಜೀವನದಲ್ಲಿ ಕೆಲ ಕಷ್ಟಗಳನ್ನು ತಂದೊಡ್ಡಲಿದೆ. ನೌಕರಿ ಸೇರಿದಂತೆ ಬಿಸ್ನೆಸ್ ನಲ್ಲಿಯೂ ಕೂಡ ಕೆಲ ಸವಾಲುಗಳು ಎದುರಾಗಳಿವೆ. ಪತಿ-ಪತ್ನಿಯರ ನಡುವೆಯೂ ಕೂಡ ಕೆಲ ಸಮಸ್ಯೆಗಳು ಬರಲಿವೆ.
ಧನು ರಾಶಿ: ಗುರು ಅಸ್ತನಾಗುವುದು ಧನು ರಾಶಿಯ ಜಾತಕದವರಿಗೆ ಶಾರೀರಿಕ ಹಾಗೂ ಮಾನಸಿಕ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಈ ರಾಶಿಯ ಜನರು ತಮ್ಮ ಆರೋಗ್ಯದ ವಿಶೇಷ ಕಾಳಜಿವಹಿಸಬೇಕಾದ ಅವಶ್ಯಕತೆ ಇದೆ. ಇದಲ್ಲದೆ ಕುಟುಂಬದಲ್ಲಿ ತಾಯಿ ಅಥವಾ ತಂದೆಯ ಆರೋಗ್ಯದ ಮೇಲೆ ಇದು ವಿಪರೀತ ಪ್ರಭಾವ ಬೀರುವ ಸಾಧ್ಯತೆ ಇದೆ.
ಕನ್ಯಾ ರಾಶಿ: ಗುರು ಅಸ್ತನಾಗುವ ಕಾರಣ ಕನ್ಯಾ ರಾಶಿಗೆ ಸೇರಿದ ಜನರ ಜೀವನದಲ್ಲಿ ಹಲವು ಸಮಸ್ಯೆಗಳು ಎದುರಾಗಲಿವೆ. ಕಾರ್ಯಸ್ಥಳದಲ್ಲಿ ಸಹೋದ್ಯೋಗಿಗಳಿಂದ ಎಚ್ಚರದಿಂದ ಇರಬೇಕಾದ ಅವಶ್ಯಕತೆ ಇದೆ. ಏಕೆಂದರೆ ಅವರು ನಿಮ್ಮ ಪಾಲಿಗೆ ಅಪಾಯದ ಕರೆಗಂಟೆಯಾಗುವ ಸಾಧ್ಯತೆ ಇದೆ. ಇದಲ್ಲದೆ ವೈವಾಹಿಕ ಜೀವನದಲ್ಲಿಯೂ ಕೂಡ ಕೆಲ ಅಡಚನೆಗಳು ಎದುರಾಗಬಹುದು. ಹೀಗಾಗಿ ಯಾವುದೇ ವಿಷಯವನ್ನು ಸುಲಭವಾಗಿ ಕೋಪಿಸಿಕೊಳ್ಳದೆ ನಿರ್ವಹಿಸಲು ಯತ್ನಿಸಿ, ಇಲ್ಲವಾದರೆ ಸಂಬಂಧದಲ್ಲಿ ಹುಳಿ ಬೀಳುವ ಸಾಧ್ಯತೆ ಇದೆ.
ಕುಂಭ ರಾಶಿ: ಗುರುವಿನ ಅಸ್ತ ಕುಂಭ ರಾಶಿಯ ಜನರ ಪಾಲಿಗೆ ಶುಭ ಸಾಬೀತಾಗುವುದಿಲ್ಲ. ಕುಟುಂಬ ಅಥವಾ ಬಂಧು ಮಿತ್ರರ ನಡುವಿನ ಸಂಬಂಧ ಹಾಳಾಗುವ ಸಾಧ್ಯತೆ ಇದೆ. ಮಾತಿನ ಮೇಲೆ ನಿಯಂತ್ರಣವಿರಲಿ. ಯಾವುದೇ ಸಂಗತಿಯನ್ನು ಹೇಳುವಾಗ ಸಾಕಷ್ಟು ಯೋಚಿಸಿ ನಂತರ ಮಾತನಾಡುವುದು ಒಳಿತು. ದಾಂಪತ್ಯ ಜೀವನದಲ್ಲಿ ಸಂಕಷ್ಟಗಳು ತಲೆದೂರುವ ಸಾಧ್ಯತೆ ಇದೆ. ಹೇಗಿರುವಾಗ ಪತಿ-ಪತ್ನಿ ಸೇರಿಕೊಂಡು ಅದರಿಂದ ಹೊರಬರಲು ಯೋಚಿಸುವುದು ಫಲಕಾರಿ ಸಾಬೀತಾಗಲಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)