ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ಮಕ್ಕಳ ಮದುವೆಗಳಲ್ಲಿ ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ. ಆದರೆ ಮದುವೆ ಎಷ್ಟೇ ಅದ್ಧೂರಿಯಾಗಿ ನಡೆದರೂ, ವಿದಾಯ ಹೇಳುವ ಸಂದರ್ಭ ಬಂದಾಗ ಪ್ರತಿಯೊಬ್ಬರೂ ಕಣ್ಣೀರು ಹಾಕುತ್ತಾರೆ. ಇಂದು ನಾವು ನಿಮಗಾಗಿ ಬಿ-ಟೌನ್ನಲ್ಲಿ ನಡೆದ ಕೆಲವು ಮದುವೆಗಳ ಫೋಟೋಗಳನ್ನು ತೋರಿಸುತ್ತೇವೆ. ಅದು ಬಾಲಿವುಡ್ನ ಅತ್ಯಂತ ದುಬಾರಿ ಮದುವೆಗಳಲ್ಲಿ ಒಂದಾಗಿದೆ. ಆದರೆ ವಿದಾಯ ಹೇಳುವ ಸಮಯದಲ್ಲಿ, ಬಾಲಿವುಡ್ ತಾರೆಯರು ಮತ್ತು ಅವರ ಸ್ಟಾರ್ ಹೆಣ್ಣುಮಕ್ಕಳು ಕಣ್ಣೀರು ಸುರಿಸುವುದು ಎಂಥವರ ಮನಸ್ಸು ಕರಗುವಂತೆ ಮಾಡುತ್ತದೆ.
ಅನುಷ್ಕಾ ಶರ್ಮಾ ಇಟಲಿಯಲ್ಲಿ ವಿರಾಟ್ ಕೊಹ್ಲಿಯನ್ನು ವಿವಾಹವಾದರು. ಅದ್ಧೂರಿ ವಿವಾಹದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಆದರೆ ಅನುಷ್ಕಾ ಅವರು ತಮ್ಮ ಕುಟುಂಬಕ್ಕೆ ವಿದಾಯ ಹೇಳುವಾಗ ತುಂಬಾ ಭಾವುಕರಾಗಿ ಕಾಣಿಸಿಕೊಂಡಿದ್ದರು. ಈ ಫೋಟೋಗಳು ಸಹ ವೈರಲ್ ಆಗಿದ್ದವು.
ಕಳೆದ ವರ್ಷ ನಾಗ ಚೈತನ್ಯ ಅವರಿಂದ ಸಮಂತಾ ವಿಚ್ಛೇದನ ಪಡೆದಿದ್ದರು. ಆದರೆ ಸಮಂತಾ ತಮ್ಮ ಮದುವೆಯ ಸಂದರ್ಭದಲ್ಲಿ ಬಿಕ್ಕಿ ಬಿಕ್ಕಿ ಅತ್ತ ಫೋಟೋ ವೈರಲ್ ಆಗಿದೆ.
ಅಂಗದ್ ಬೇಡಿ ಜೊತೆ ನೇಹಾ ಧೂಪಿಯಾ ಮದುವೆಯಾದರು. ಈ ಬಳಿಕ ತಮ್ಮ ಮದುವೆಯ ಹಲವು ಫೋಟೋಗಳನ್ನು ನೇಹಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಚಿತ್ರಗಳಲ್ಲಿ ಒಂದರಲ್ಲಿ, ನೇಹಾ ತನ್ನ ತಂದೆಯನ್ನು ಅಪ್ಪಿಕೊಂಡು ಅಳುತ್ತಿರುವ ಫೋಟೋ ಕಂಡುಬಂದಿದೆ.
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆ ಇತ್ತೀಚೆಗೆ ನಡೆದಿದೆ. ಈ ಸಂದರ್ಭದಲ್ಲಿ ನಟಿಯ ತಂದೆ ಮಹೇಶ್ ಭಟ್ ತುಂಬಾ ಭಾವುಕರಾಗಿದ್ದಾರೆ. ಮದುವೆಯ ಸಂದರ್ಭದಲ್ಲಿ ರಣಬೀರ್ ಕಪೂರ್ರನ್ನ ಮಹೇಶ್ ಭಟ್ ಅಪ್ಪಿಕೊಂಡು ಭಾವುಕರಾದ ಫೋಟೊಗಳನ್ನು ನೋಡಬಹುದು.
ನಟಿ ಕರೀಷ್ಣಾ ಕಪೂರ್ ಮತ್ತು ಉದ್ಯಮಿ ಸಂಜಯ್ ಕಪೂರ್ ಮದುವೆಯಾಗಿದ್ದರು. ಆದರೆ ಇದೀಗ ವಿಚ್ಚೇದನದ ಬಳಿಕ ಇಬ್ಬರೂ ಒಂಟಿ ಜೀವನ ನಡೆಸುತ್ತಿದ್ದಾರೆ. ಇನ್ನು ಇವರ ಮದುವೆ ಸಂದರ್ಭದಲ್ಲಿ ಕರೀಷ್ಮಾ ತಂದೆ ರಣಧೀರ್ ಕಪೂರ್ ತುಂಬಾ ಭಾವುಕರಾಗಿ ಕಾಣುತ್ತಿದ್ದರು.
ಕಪೂರ್ ಕುಟುಂಬದ ಎರಡನೇ ಮದುವೆ ಬಗ್ಗೆ ಮಾತನಾಡೋದಾದ್ರೆ, ರಿಷಿ ಕಪೂರ್ ಅವರ ಮಗಳು ರಿದ್ಧಿಮಾ ಕಪೂರ್ ವಿವಾಹ. ಈ ಮದುವೆ ಕೂಡ ಅದ್ಧೂರಿಯಾಗಿ ನಡೆದಿದ್ದು, ಈ ಸಂದರ್ಭದಲ್ಲಿ ಮಗಳಿಗೆ ವಿದಾಯ ಹೇಳಿದಾಗ ರಿಷಿ ಕಪೂರ್ ಭಾವುಕರಾಗಿದ್ದರು.
ಸಲೀಮಾ ಖಾನ್ ಅವರ ಪುತ್ರಿ ಅರ್ಪಿತಾ ಖಾನ್, ನಟ ಆಯುಷ್ ಶರ್ಮಾ ಅವರನ್ನು ವಿವಾಹವಾಗಿದ್ದಾರೆ. ಈ ಅದ್ಧೂರಿ ಮದುವೆಗೆ ಸಾಕಷ್ಟು ಹಣ ಖರ್ಚಾಗಿದೆ. ಆದರೆ ಸಲೀಂ ಖಾನ್, ಮಗಳ ವಿದಾಯದ ಸಂದರ್ಭದಲ್ಲಿ ಕಣ್ಣೀರು ಹಾಕಿದ್ದಾರೆ.
ಈ ಪಟ್ಟಿಯಲ್ಲಿ ಮತ್ತೊಂದು ಹೆಸರು ಸೂಪರ್ ಸ್ಟಾರ್ ರಜನಿಕಾಂತ್ ಅವರದ್ದು. ಸೌತ್ ಸೂಪರ್ ಸ್ಟಾರ್ ರಜನಿಕಾಂತ್ ಅವರ ಮಗಳ ಮದುವೆ ಅದ್ಧೂರಿಯಾಗಿ ನಡೆದಿತ್ತು. ಆದರೆ, ಈ ವೇಳೆ ರಜನೀಕಾಂತ್ ಅವರು ತಮ್ಮ ಮಗಳನ್ನು ಭಾವುಕರಾಗಿ ನೋಡುತ್ತಿರುವುದು ಹಲವು ಬಾರಿ ಕಂಡುಬಂದಿತ್ತು. ಆ ಫೋಟೋಗಳ ಸಖತ್ ವೈರಲ್ ಆಗಿದ್ದವು.
ಮಗಳು ಇಶಾ ಡಿಯೋಲ್ ಅವರ ಮದುವೆ ಬಳಿಕ ವಿದಾಯ ಹೇಳುವಾಗ ಬಾಲಿವುಡ್ ನಟ ಧರ್ಮೇಂದ್ರ ಕಣ್ಣೀರು ಹಾಕಿದ್ದಾರೆ.
ತಮ್ಮ ಮುದ್ದಿನ ಮಗಳ ಮದುವೆಯಲ್ಲಿ ಅಮಿತಾಬ್ ಬಚ್ಚನ್ ಆಕೆಯನ್ನು ಅಪ್ಪಿಕೊಂಡು ಭಾವುಕರಾಗಿ ಕಣ್ಣೀರು ಹಾಕಿರುವ ಫೋಟೋಗಳನ್ನು ನೋಡಬಹುದು.