Solar Eclipse 2022: ಸೂರ್ಯಗ್ರಹಣಕ್ಕೆ ಕೆಲವೇ ದಿನ ಬಾಕಿ : ಈ ರಾಶಿಯವರು ಎಚ್ಚರ!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ 5 ರಾಶಿಯವರು ಸೂರ್ಯಗ್ರಹಣದ ಸಮಯದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಹಾಗಿದ್ರೆ, ಆ ಐದು ರಾಶಿಗಳು ಯಾವವು? ಇಲ್ಲಿದೆ ನೋಡಿ...

Surya Grahan 2022 Date Time in India and Effect : ವರ್ಷದ ಎರಡನೇ ಮತ್ತು ಕೊನೆಯ ಸೂರ್ಯಗ್ರಹಣ ಇದೆ ತಿಂಗಳು ಅಂದರೆ ಅಕ್ಟೋಬರ್ 25, ರಂದು ಸಂಭವಿಸಲಿದೆ. ಇದಕ್ಕೂ ಒಂದು ದಿನ ಮುಂಚಿತ ಅಂದ್ರೆ,  ಅಕ್ಟೋಬರ್ 24 ರಂದು ದೀಪಾವಳಿ ಆಚರಿಸಲಾಗುತ್ತದೆ. ಈ ಹಿಂದೆ, ವರ್ಷದ ಮೊದಲ ಸೂರ್ಯಗ್ರಹಣವು 30 ಏಪ್ರಿಲ್ 2022 ರಂದು ಸಂಭವಿಸಿತು. ಗೋವರ್ಧನ ಪೂಜೆಯ ದಿನದಂದು ಹಿಡಿಯುವ ಈ ಸೂರ್ಯಗ್ರಹಣವು ಎಲ್ಲಾ 12 ರಾಶಿಗಳ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆದ್ರೆ, ವಿಶೇಷವಾಗಿ 5 ರಾಶಿಯವರ ಮೇಲೆ ಸೂರ್ಯಗ್ರಹಣದ ಋಣಾತ್ಮಕ ಪರಿಣಾಮ ಬೀರಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ 5 ರಾಶಿಯವರು ಸೂರ್ಯಗ್ರಹಣದ ಸಮಯದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಹಾಗಿದ್ರೆ, ಆ ಐದು ರಾಶಿಗಳು ಯಾವವು? ಇಲ್ಲಿದೆ ನೋಡಿ...

1 /5

ವೃಷಭ ರಾಶಿ : ಸೂರ್ಯಗ್ರಹಣವು ವೃಷಭ ರಾಶಿಯವರಿಗೆ ಸಮಸ್ಯೆಗಳನ್ನು ನೀಡಬಹುದು. ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗಬಹುದು. ಆದ್ದರಿಂದ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಧನಾತ್ಮಕವಾಗಿ ಯೋಚಿಸುತ್ತಿರಿ, ಇದಕ್ಕಾಗಿ ಪೂಜೆ, ಪ್ರಾರ್ಥನೆ, ಧ್ಯಾನ ಮಾಡಿ. ಸೂರ್ಯಗ್ರಹಣದ ಸಮಯದಲ್ಲಿ ಯಾವುದೇ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.

2 /5

ಮಿಥುನ ರಾಶಿ : ಈ ಸೂರ್ಯಗ್ರಹಣವು ಮಿಥುನ ರಾಶಿಯವರಿಗೆ ಕೂಡ ಮಂಗಳಕರವೆಂದು ಹೇಳಲಾಗುವುದಿಲ್ಲ. ಅವರು ಪ್ರಯಾಣ ಮಾಡುವಾಗ ಜಾಗರೂಕರಾಗಿರಬೇಕು. ಉದ್ಯೋಗ ಅಥವಾ ವ್ಯವಹಾರದಲ್ಲಿ ಸ್ವಲ್ಪ ಬದಲಾವಣೆಯಾಗಬಹುದು, ಆದರೆ ಅದು ಪ್ರಯೋಜನಕಾರಿಯಾಗುವುದಿಲ್ಲ. ಆದ್ದರಿಂದ ಈ ಸಮಯದಲ್ಲಿ ಬುದ್ಧಿವಂತ ನಿರ್ಧಾರ ತೆಗೆದುಕೊಳ್ಳಿ. ಅದೃಷ್ಟ ನಿಮ್ಮೊಂದಿಗೆ ಇರುವುದಿಲ್ಲ. ಆರ್ಥಿಕ ನಷ್ಟ ಉಂಟಾಗಬಹುದು.

3 /5

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಕೂಡ ದೀಪಾವಳಿಯಂದು ವರ್ಷದ ಕೊನೆಯ ಸೂರ್ಯಗ್ರಹಣವು ಹಾನಿಯನ್ನುಂಟುಮಾಡುತ್ತದೆ. ವಿದೇಶಗಳಿಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ವಿದೇಶಗಳಿಗೆ ಸಂಬಂಧಿಸಿದ ವ್ಯವಹಾರ ಹೊಂದಿರುವ ಜನರು ಈ ಅವಧಿಯಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳದಿದ್ದರೆ ಉತ್ತಮ. ಖರ್ಚು ಹೆಚ್ಚಾಗಲಿದೆ. ಹೂಡಿಕೆಯಲ್ಲಿ ಜಾಗರೂಕರಾಗಿರಿ.

4 /5

ತುಲಾ ರಾಶಿ: ಸೂರ್ಯಗ್ರಹಣದ ಸಮಯದಲ್ಲಿ, ಸೂರ್ಯನು ತುಲಾ ರಾಶಿಯಲ್ಲಿ ಉಳಿಯುತ್ತಾನೆ, ಆದ್ದರಿಂದ ಈ ರಾಶಿಚಕ್ರದ ಜನರ ಮೇಲೆ ಗ್ರಹಣವು ಗರಿಷ್ಠ ಪರಿಣಾಮವನ್ನು ಬೀರುತ್ತದೆ. ಅವರು ಆರ್ಥಿಕ ನಷ್ಟವನ್ನು ಅನುಭವಿಸಬಹುದು. ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗಬಹುದು. ಹೃದಯ ರೋಗಿಗಳು ಎಚ್ಚರದಿಂದಿರಿ.

5 /5

ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯವರಿಗೆ ಈ ಸೂರ್ಯಗ್ರಹಣವು ಹಣ ಮತ್ತು ಸಂಬಂಧಗಳ ವಿಷಯದಲ್ಲಿ ಹಾನಿಯನ್ನುಂಟು ಮಾಡುತ್ತದೆ. ಆದಾಯ ಕಡಿಮೆಯಾಗಬಹುದು. ಹಣದ ನಷ್ಟ ಉಂಟಾಗಬಹುದು. ಮಾತು ಸರಿಯಾಗುವುದಿಲ್ಲ. ತಪ್ಪು ಮಾತು ಕೆಡಿಸಬಹುದು. ಕುಟುಂಬದಲ್ಲಿ ಉದ್ವಿಗ್ನತೆ ಉಂಟಾಗಬಹುದು. ಕಹಿಯಾಗಿ ಮಾತನಾಡುವುದನ್ನು ತಪ್ಪಿಸಿ.