ಮದುವೆ ಇಲ್ಲ, ನಿಶ್ಚಿತಾರ್ಥ ಆಗಿಲ್ಲ, ಆದರೂ ತಾಯಿಯಾಗಲಿದ್ದಾಳೆ ಈ ಸ್ಟಾರ್‌ ನಟಿ..! ಫ್ಯಾನ್ಸ್‌ ಶಾಕ್‌...

Written ByKrishna N K
Published: Sep 11, 2024, 04:57 PM IST|Updated: Sep 11, 2024, 04:57 PM IST

Taapsee Pannu Gandhari : ಬಹುಭಾಷಾ ನಟಿ ತಾಪ್ಸಿ ಪನ್ನು ಕನ್ನಡದಲ್ಲಿ ಯಾವುದೇ ಸಿನಿಮಾ ಮಾಡಿಲ್ಲವಾದರೂ ಈಕೆ ಪರಿಚಯ ಓಟಿಟಿ ಮೂಲಕ ಆಗಿದೆ.. ಮೊದಲ ಸಿನಿಮಾ ಮೂಲಕ ಹುಡುಗರ ಮನ ಕದ್ದ ತಾಪ್ಸಿ ತನ್ನ ಸೌಂದರ್ಯ, ಮತ್ತು ನಟನೆಯ ಮೂಲಕ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿದ್ದಾಳೆ.. ಸಧ್ಯ ನಟಿ ಕುರಿತ ಶಾಕಿಂಗ್‌ ವಿಚಾರವೊಂದು ಬಯಲಾಗಿದೆ..
 

1/6

ಜುಮ್ಮಂದಿ ನಾದಂ ಸಿನಿಮಾದ ನಂತರ ಈ ಚೆಲುವೆಗೆ ಟಾಲಿವುಡ್‌ ಸೇರಿದಂತೆ ಸೌತ್‌ನಲ್ಲಿ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರತೊಡಗಿದವು. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡಿ ಬಿಜಿ ನಾಯಕಿಯಾಗಿ ಬದಲಾದರು. ಸಧ್ಯ ಬಾಲಿವುಡ್‌ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಿರತರಾಗಿದ್ದಾರೆ..  

2/6

ನಿರ್ದೇಶಕ ರಾಘವೇಂದ್ರ ರಾವ್ ನಿರ್ದೇಶನದ ಜುಮ್ಮಂದಿ ನಾದಂ ಚಿತ್ರದ ಮೂಲಕ ತಾಪ್ಸಿ ಪನ್ನಾ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಅದೇ ಸಮಯದಲ್ಲಿ ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಮಿಸ್ಟರ್ ಪರ್ಫೆಕ್ಟ್ ಚಿತ್ರದ ಮೂಲಕ ಬಾಕ್‌ ಟು ಬ್ಯಾಕ್‌ ಹಿಟ್ ಪಡೆದರು.  

3/6

ಆ ನಂತರ ತಾಪ್ಸಿ ಬಾಲಿವುಡ್‌ಗೆ ಕಾಲಿಟ್ಟರು. ಅತೀ ಕಡಿಮೆ ಸಮಯದಲ್ಲಿ ಹಿಂದಿ ಸಿನಿರಂಗದಲ್ಲಿ ಗುರುತಿಸಿಕೊಂಡು ಸ್ಟಾರ್ ಹೀರೋಯಿನ್ ಆದರು. ಈ ನಟಿ ಕಮರ್ಷಿಯಲ್ ಸಿನಿಮಾಗಳಲ್ಲದೆ ಲೇಡಿ ಓರಿಯೆಂಟೆಡ್ ಸಿನಿಮಾಗಳನ್ನೂ ಮಾಡಿ ಪ್ರೇಕ್ಷಕರ ಮನಗೆದ್ದಿದ್ದಾರೆ.  

4/6

ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುತ್ತಿರುವ ತಾಪ್ಸಿ ಪನ್ನು ಮತ್ತೊಂದು ಇಂಟ್ರಸ್ಟಿಂಗ್‌ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ನಟಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಗಾಂಧಾರಿ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ. ಇತ್ತೀಚಿಗೆ ಈ ಚಿತ್ರದ ವೀಡಿಯೊವನ್ನು ಒಂದು ರಿಲೀಸ್‌ ಆಗಿದ್ದು ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.   

5/6

ತಾಯಿಯ ಆಶೀರ್ವಾದ ಮಗುವಿಗೆ ಯಾವಾಗಲೂ ಇರುತ್ತದೆ ಎಂದು ಎಲ್ಲರೂ ಹೇಳುತ್ತಾರೆ. ತನ್ನ ಮಗುವಿನ ವಿಚಾರಕ್ಕೆ ಬಂದರೆ.. ಕಾಳಿಮಾತೆ ಆಗುತ್ತಾಳೆ ಎಂಬ ಡೈಲಾಗ್ ಈ ವಿಡಿಯೋದಲ್ಲಿದೆ ಈ ವಿಡಿಯೋ ಈಗ ವೈರಲ್ ಆಗಿದೆ. ಇದನ್ನು ನೋಡಿದರೆ ನೆಟ್ಟಿಗರು ತಾಪ್ಸಿ ಪನ್ನು ಈ ಸಿನಿಮಾದಲ್ಲಿ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅಂತ ಗೆಸ್‌ ಮಾಡಿದ್ದಾರೆ..  

6/6

ಅಲ್ಲದೆ, ತಾಯಿ ಮತ್ತು ಮಗಳ ಸೆಂಟಿಮೆಂಟ್‌ನೊಂದಿಗೆ ಈ ಸಿನಿಮಾ ತೆರೆಕಾಣುತ್ತಿದೆ ಎಂದು ನಿರ್ಮಾಪಕರು ಈ ವಿಡಿಯೋ ಮೂಲಕ ಸುಳಿವು ನೀಡಿದ್ದಾರೆ. ಈ ಚಿತ್ರಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳು ಶೀಘ್ರದಲ್ಲೇ ಬಹಿರಂಗಗೊಳ್ಳಲಿವೆ. ತಾಪ್ಸಿ ಪನ್ನು ಇಲ್ಲಿಯವರೆಗೆ ನಾಯಕಿಯಾಗಿ ರಂಚಿಸಿದ್ದರು, ಇದೀಗ ಅಮ್ಮನ ಪಾತ್ರದಲ್ಲಿ ಹೇಗೆ ಪ್ರೇಕ್ಷಕರನ್ನ ಇಂಪ್ರೆಸ್ ಮಾಡುತ್ತಾರೆ ಎಂಬುದನ್ನು ಕಾಯ್ದು ನೋಡಬೇಕಿದೆ..