ಚಿನ್ನದಿಂದ ತಯಾರಾದ ವಿಶ್ವದ ಮೊಟ್ಟಮೊದಲ Gold Hotel, ಒಂದು ರಾತ್ರಿ ತಂಗಲು ಎಷ್ಟು ಶುಲ್ಕ ನೀಡಬೇಕು ಗೊತ್ತಾ?

ಇಂದು ಮಾರುಕಟ್ಟೆಯಲ್ಲಿ  ಚಿನ್ನದ ಬೆಲೆ ಏನು ಎಂಬುದು ನಾವು ನಿಮಗೆ ಹೇಳಲೇ ಬೇಕಾಗಿಲ್ಲ. ಆದರೆ ವಿಶ್ವದಲ್ಲಿ ಒಂದು ಹೋಟೆಲ್ ಇದ್ದು, ಈ ಹೋಟೆಲ್ ನ ಪ್ರತಿಯೊಂದು ವಸ್ತುಗಳ ಮೇಲೆ ಚಿನ್ನದ ಹೊದಿಕೆ ಇದೆ ಎಂದರೆ ನಾವಷ್ಟೇ ಅಲ್ಲ ನೀವೂ ಕೂಡ ನೆಬ್ಬೇರಗಾಗುವುದು ಸಹಜ. ಹೌದು, ಇದು ನಿಜ. ವಿಯೆಟ್ನಾಂನಲ್ಲಿ ಇನತಹುದೇ ಒಂದು ಚಿನ್ನದ ಹೋಟೆಲ್ ನ ಉದ್ಘಾಟನೆ ಮಾಡಲಾಗಿದೆ. ವಿಯೆಟ್ನಾಂನ ರಾಜಧಾನಿ ಹನೋಯಿನಲ್ಲಿ ಈ ಹೋಟೆಲ್ ನಿರ್ಮಿಸಲಾಗಿದೆ. ಈ ಹೋಟೆಲ್ ನಲ್ಲಿ ಟ್ಯೂಬ್ ಲೈಟ್ ಹಿಡಿದು ಟಾಯ್ಲೆಟ್ ವರೆಗಿನ ಪ್ರತಿಯೊಂದು ವಸ್ತುಗಳ ಮೇಲೆ ಚಿನ್ನದ ಲೇಪ ಏರಿಸಲಾಗಿದೆ. ಈ ಹೋಟೆಲ್ ಹೆಸರು The Dolce Hanoi Golden Lake.
  • Jul 05, 2020, 13:56 PM IST

ನವದೆಹಲಿ: ಇಂದು ಮಾರುಕಟ್ಟೆಯಲ್ಲಿ  ಚಿನ್ನದ ಬೆಲೆ ಏನು ಎಂಬುದು ನಾವು ನಿಮಗೆ ಹೇಳಲೇ ಬೇಕಾಗಿಲ್ಲ. ಆದರೆ ವಿಶ್ವದಲ್ಲಿ ಒಂದು ಹೋಟೆಲ್ ಇದ್ದು, ಈ ಹೋಟೆಲ್ ನ ಪ್ರತಿಯೊಂದು ವಸ್ತುಗಳ ಮೇಲೆ ಚಿನ್ನದ ಹೊದಿಕೆ ಇದೆ ಎಂದರೆ ನಾವಷ್ಟೇ ಅಲ್ಲ ನೀವೂ ಕೂಡ ನೆಬ್ಬೇರಗಾಗುವುದು ಸಹಜ. ಹೌದು, ಇದು ನಿಜ. ವಿಯೆಟ್ನಾಂನಲ್ಲಿ ಇನತಹುದೇ ಒಂದು ಚಿನ್ನದ ಹೋಟೆಲ್ ನ ಉದ್ಘಾಟನೆ ಮಾಡಲಾಗಿದೆ. ವಿಯೆಟ್ನಾಂನ ರಾಜಧಾನಿ ಹನೋಯಿನಲ್ಲಿ ಈ ಹೋಟೆಲ್ ನಿರ್ಮಿಸಲಾಗಿದೆ. ಈ ಹೋಟೆಲ್ ನಲ್ಲಿ ಟ್ಯೂಬ್ ಲೈಟ್ ಹಿಡಿದು ಟಾಯ್ಲೆಟ್ ವರೆಗಿನ ಪ್ರತಿಯೊಂದು ವಸ್ತುಗಳ ಮೇಲೆ ಚಿನ್ನದ ಲೇಪ ಏರಿಸಲಾಗಿದೆ. ಈ ಹೋಟೆಲ್ ಹೆಸರು The Dolce Hanoi Golden Lake.

1 /5

ರಾಯಿಟರ್ಸ್ ನಲ್ಲಿ ಪ್ರಕಟಗೊಂಡ ಮಾಹಿತಿ ಪ್ರಕಾರ ಈ ಹೋಟೆಲ್ ನಲ್ಲಿ ತಂಗಲು ನೀವು ಕನಿಷ್ಠ ಅಂದರೆ ರೂ.250 ಡಾಲರ್ ವೆಚ್ಚ ಮಾಡಬೇಕು. ಈ ಹೋಟೆಲ್ ನಲ್ಲಿರುವ ಅಪಾರ್ಟ್ಮೆಂಟ್ ಅನ್ನು ಕೂಡ ನೀವು ಬಾಡಿಗೆಗೆ ಪಡೆಯಬಹುದು. ಇದಕ್ಕಾಗಿ ಕನಿಷ್ಠ ಅಂದರೆ 6500 ಡಾಲರ್ ಪ್ರತಿ ಚದರ ಮೀಟರ್ ಹಣ ನೀಡಬೇಕು.

2 /5

The Dolce Hanoi Golden Lake ಹೋಟೆಲ್ ನಲ್ಲಿ ಗೋಲ್ಡ್ ಪ್ಲೇಟೆಡ್ ಇನ್ಫಿನಿಟಿ ಸ್ವಿಮ್ಮಿಂಗ್ ಪೂಲ್, ಗೋಲ್ಡ್ ಲಾಬಿ, ಚಿನ್ನದ ಟೈಲ್ಸ್ ಗಳಿಂದ ನಿರ್ಮಾಣಗೊಂಡ ಮೇಲ್ಛಾವಣಿ ಇದೆ. ಅಷ್ಟೇ ಅಲ್ಲ ಇದರ ಲಿಫ್ಟ್ ಅನ್ನು ಕೂಡ ಸಂಪೂರ್ಣ ಚಿನ್ನದಿಂದ ತಯಾರಿಸಲಾಗಿದೆ.

3 /5

ಈ ಹೋಟೆಲ್ ನ ಬಾತ್ ರೂಮ್ ನಲ್ಲಿಯೂ ಕೂಡ ಅಲ್ಲ ಪರಿಕ್ಕರಗಳನ್ನು ಚಿನ್ನದಿಂದ ತಯಾರಿಸಲಾಗಿದೆ. ಇದರಲ್ಲಿ ಗೋಲ್ಡ್ ಪ್ಲೇಟೆಡ್ ಬಾಥ್ ಟಬ್, ಸಿಂಕ್ಸ್, ಟಾಯ್ಲೆಟ್ ಗಳು ಶಾಮೀಲಾಗಿವೆ. ಇದಲ್ಲದೆ ಈ ಹೋಟೆಲ್ ನ ಫರ್ನಿಚರ್ ಹಾಗೂ ಅಪ್ಪೈನ್ಸೆಸ್ ಗಳನ್ನು ಕೂಡ ಚಿನ್ನದಿಂದ ತಯಾರಿಸಲಾಗಿದೆ.  

4 /5

ರಾಯಿಟರ್ಸ್ ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ, ಈ ಯುನೀಕ್ ಹೋಟೆಲ್ ನಿರ್ಮಿಸಲು 11 ವರ್ಷಗಳ ಸಮಯಾವಕಾಶ ತೆಗೆದುಕೊಂಡಿದೆ. ಕಳೆದ ಗುರುವಾರ ಈ ಹೋಟೆಲ್ ಅನ್ನು ಉದ್ಘಾಟಿಸಲಾಗಿದ್ದು, ಇದರಲ್ಲಿ ಒಟ್ಟು 400 ಕೊಠಡಿಗಳಿವೆ.

5 /5

24 ಕ್ಯಾರೆಟ್ ಚಿನ್ನದಿಂದ ತಯಾರಿಸಲಾಗಿರುವ ವಿಶ್ವದ ಮೊಟ್ಟಮೊದಲ ಹೋಟೆಲ್ ಇದಾಗಿದೆ. ಚಿನ್ನದಿಂಗ ತಯಾರಿಸಲಾಗಿರುವ ಈ ಹೋಟೆಲ್ ನ ಒಳಭಾಗ ಎಷ್ಟೊಂದು ಸುಂದರವಾಗಿದೆಯೋ ಅಷ್ಟೇ ಇದರ ಹೊರಭಾಗವೂ ಕೂಡ ಆಕರ್ಷಕವಾಗಿದೆ. ಈ ಹೋಟೆಲ್ ನಲ್ಲಿ ಒಟ್ಟು 25 ಮಹಡಿಗಳಿವೆ.