7ನೇ ತರಗತಿ ಪಠ್ಯ ಪುಸ್ತಕದಲ್ಲಿ ನಟಿ ತಮನ್ನಾ ಬಗ್ಗೆ ಉಲ್ಲೇಖ ..! ಪಾಲಕರ ತೀವ್ರ ಖಂಡನೆ..

Tamannaah Bhatia Lesson in textbook : ಬಹುಭಾಷಾ ನಟಿ ತಮನ್ನಾ ಜೀವನದ ಬಗ್ಗೆ ಶಾಲಾ ಪಠ್ಯಪುಸ್ತಕದಲ್ಲಿ ನೀಡಲಾಗಿದ್ದು, ಇದು ಇದೀಗ ವಿವಾದಕ್ಕೆ ಕಾರಣವಾಗಿದೆ. 7 ತರಗತಿ ಪಠ್ಯ ಪುಸ್ತಕದಲ್ಲಿ ತಮನ್ನಾ ಉಲ್ಲೇಖಿಸಿರುವುದು ವಿದ್ಯಾರ್ಥಿಗಳ ಪೋಷಕರ ಕೆಂಗಣ್ಣಿಗೆ ಗುರಿಯಾಗಿದೆ.. ಈ ಕುರಿತು ಇಂಟ್ರಸ್ಟಿಂಗ್‌ ಮಾಹಿತಿ ಇಲ್ಲಿದೆ..
 

1 /6

ಸೌತ್‌ ಚಿತ್ರರಂಗದ ಹೊರತಾಗಿ, ತಮನ್ನಾ ಭಾರತ ಸಿನಿರಂಗದಲ್ಲಿ ಸ್ಟಾರ್‌ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಉತ್ತರ ಭಾರತದ ನಟಿಯಾದರೂ ಬಹು ಭಾಷೆಯ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದಾರೆ. ಇತ್ತೀಚೆಗಷ್ಟೇ ತಮಿಳಿನ ಅರಮನೆ ಚಿತ್ರದ ಮೂಲಕ ತೆರೆ ಮೇಲೆ ಕಾಣಿಸಿಕೊಂಡಿದ್ದ ನಟಿ, ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದಾರೆ..  

2 /6

ನಟಿ ತಮನ್ನಾ ತಮ್ಮ 20ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಬಾಲಿವುಡ್‌ ಮೂಲಕ ಸಿನಿಜಗತ್ತಿಗೆ ಪಾದಾರ್ಪಣೆ ಮಾಡಿದ ಅವರು ತಮಿಳಿನಲ್ಲಿ ಕೆಟಿ ಚಿತ್ರದ ಮೂಲಕ ಸೌತ್‌ ಸಿನಿ ಅಭಿಮಾನಿಗಳಿಗೆ ಪರಿಚಯವಾದರು. ನಂತರ ಬಾಹುಬಲಿ ಸಿನಿಮಾ ತಮನ್ನಾಗೆ ಪ್ಯಾನ್‌ ಇಂಡಿಯಾ ಲೆವೆಲ್‌ ಗುರುತು ನೀಡಿತು.  

3 /6

ತಮನ್ನಾ ಬಾಲಿವುಡ್ ನಟಿಯಾಗಿದ್ದರೂ, ಹಿಂದಿಯಲ್ಲಿ ಅವರ ಚಲನಚಿತ್ರ ಅವಕಾಶಗಳು ಆರಂಭದಲ್ಲಿ ಸೀಮಿತವಾಗಿದ್ದವು. ಹೀಗಾಗಿ ಅವರು ತಮಿಳು ಮತ್ತು ತೆಲುಗು ಭಾಷೆಯ ಚಿತ್ರಗಳತ್ತ ಮಾತ್ರ ಗಮನ ಹರಿಸುತ್ತಿದ್ದರು. ಕಳೆದ 4 ವರ್ಷಗಳಲ್ಲಿ ಅವರಿಗೆ ಬಾಲಿವುಡ್‌ನಲ್ಲಿ ಸಿನಿಮಾ ಆಫರ್‌ಗಳು ಹೆಚ್ಚಿವೆ.   

4 /6

ಸಧ್ಯ ಮುಖ್ಯ ವಿಚಾರಕ್ಕೆ ಬರೋಣ.. ಬೆಂಗಳೂರಿನ ಹೆಬ್ಬಾಳ ಎಂಬಲ್ಲಿ ಖಾಸಗಿ ಶಾಲೆಯೊಂದು ಕಾರ್ಯನಿರ್ವಹಿಸುತ್ತಿದೆ. ಇದರಲ್ಲಿ 7ನೇ ತರಗತಿಯ ಪಠ್ಯಪುಸ್ತಕದಲ್ಲಿ ತಮನ್ನಾ ಬಗ್ಗೆ ಮಾಹಿತಿ ನೀಡಲಾಗಿದೆ. 'ಸಿಂಧ್ ವಿಭಜನೆಯ ನಂತರ ಭಾರತೀಯ ಜನರ ಜೀವನ' ವಿಭಾಗದಲ್ಲಿ, ತಮನ್ನಾ ಬಗ್ಗೆ ಉಲ್ಲೇಖಗಳಿವೆ. ಇದು ಈಗ ಭಾರೀ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.   

5 /6

ತಮ್ಮ ಮಗುವಿನ ಪಠ್ಯಪುಸ್ತಕದಲ್ಲಿ ನಟಿ ತಮನ್ನಾ ಅವರನ್ನು ನೋಡಿದ ಪೋಷಕರು ಆಘಾತಕ್ಕೊಳಗಾಗಿದ್ದಾರೆ. ಅಲ್ಲದೆ, ಇದರ ವಿರುದ್ಧ ತೀವ್ರವಾಗಿ ಪ್ರತಿಭಟಿಸುತ್ತಿದ್ದಾರೆ. ನಟಿ ತಮನ್ನಾ ಬಗ್ಗೆ ಶಾಲಾ ಮಕ್ಕಳಿಗೆ ಏಕೆ ತಿಳಿಯಬೇಕು ಎಂದು ಶಾಲೆಯ ಆಡಳಿತವನ್ನು ಪ್ರಶ್ನಿಸುತ್ತಿದ್ದಾರೆ.   

6 /6

ತಮನ್ನಾ ಅವರ ಕುಟುಂಬವು ಸಿಂಧ್-ಪಾಕಿಸ್ತಾನ ಮತ್ತು ಭಾರತ ವಿಭಜನೆಯ ಸಮಯದಲ್ಲಿ ಭಾರತದ ವಿವಿಧ ರಾಜ್ಯಗಳಿಗೆ ವಲಸೆಯ ಮಾರ್ಗದಿಂದ ಬಂದಿದೆ ಎಂದು ಹೇಳಲಾಗುತ್ತದೆ. ಸಿಂಧ್ ವಿಭಜನೆಯು ಭಾರತೀಯ ಇತಿಹಾಸದಲ್ಲಿ ಒಂದು ಪ್ರಮುಖ ಘಟನೆಯಾಗಿದೆ. ಇದಕ್ಕಾಗಿಯೇ 7ನೇ ತರಗತಿಯ ಪಠ್ಯಪುಸ್ತಕದಲ್ಲಿ ತಮನ್ನಾ ಬಗ್ಗೆ ಮಾಹಿತಿ ನೀಡಲಾಗಿದೆ. ಇದೀಗ ತಮನ್ನಾ ಪಠ್ಯಪುಸ್ತಕಕ್ಕೆ ಸೇರ್ಪಡೆಗೊಂಡ ವಿಚಾರ ಪೋಷಕರಲ್ಲದೇ ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸಿದೆ.