ನಾಲ್ಕನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ನ್ನು ಇನ್ನಿಂಗ್ಸ್ ಮತ್ತು 25 ರನ್‌ಗಳಿಂದ ಸೋಲಿಸುವ ಮೂಲಕ ಟೀಮ್ ಇಂಡಿಯಾ ಅದ್ಭುತ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ಭಾರತ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 3–1ರಿಂದ ಗೆದ್ದಿದೆ.
ನವದೆಹಲಿ: ನಾಲ್ಕನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ನ್ನು ಇನ್ನಿಂಗ್ಸ್ ಮತ್ತು 25 ರನ್‌ಗಳಿಂದ ಸೋಲಿಸುವ ಮೂಲಕ ಟೀಮ್ ಇಂಡಿಯಾ ಅದ್ಭುತ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ಭಾರತ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 3–1ರಿಂದ ಗೆದ್ದಿದೆ. ಈ ಗೆಲುವು ಟೀಮ್ ಇಂಡಿಯಾಕ್ಕೂ ವಿಶೇಷವಾಗಿದೆ. ಏಕೆಂದರೆ ಅದನ್ನು ಗೆಲ್ಲುವ ಮೂಲಕ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿದೆ. ನಾಲ್ಕನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಟೀಮ್ ಇಂಡಿಯಾ ಜೊತೆ ಸ್ಪರ್ಧಿಸಲು ಪ್ರಯತ್ನಿಸಿತು. ಆದರೆ ಈ 'ವೀರರ' ಕಾರಣದಿಂದಾಗಿ, ಆತಿಥೇಯ ತಂಡವು ಪ್ರಾಬಲ್ಯ ಸಾಧಿಸಿತು ಮತ್ತು ಮೂರು ದಿನಗಳಲ್ಲಿ ಭಾರತ ಈ ಪಂದ್ಯವನ್ನು ಗೆದ್ದಿತು. ಈ ವಿಜಯದ ನಾಯಕ ಯಾರು ಎಂದು ನೋಡೋಣ.
ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರು ಟೀಮ್ ಇಂಡಿಯಾಕ್ಕೆ ಟ್ರಬಲ್ ಶೂಟರ್ ಆಗಿ ಹೊರಹೊಮ್ಮಿದ್ದಾರೆ. ಅಹಮದಾಬಾದ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಅವರು ಇಂಗ್ಲೆಂಡ್ ವಿರುದ್ಧ ಶತಕ ಬಾರಿಸಿದರು. ರಿಷಭ್ ಪಂತ್ ತಮ್ಮ ಟೆಸ್ಟ್ ವೃತ್ತಿಜೀವನದ ಮೂರನೇ ಶತಕವನ್ನು ಗಳಿಸಿದರು. ಪಂತ್ 13 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ 118 ಎಸೆತಗಳಲ್ಲಿ 101 ರನ್ ಗಳಿಸಿದರು. ಪಂತ್ ತನ್ನ ಬಿರುಗಾಳಿಯ ಬ್ಯಾಟಿಂಗ್ ಮೂಲಕ ಭಾರತಕ್ಕೆ ಬಲವಾದ ಮುನ್ನಡೆ . ಈ ಮೂಲಕ ಭಾರತ ತಂಡದ ಸ್ಥಾನವನ್ನು ಬಲಪಡಿಸಿದರು.
ರಿಷಭ್ ಪಂತ್ ಅವರ ಹೆಜ್ಜೆಗಳನ್ನು ಅನುಸರಿಸಿ ವಾಷಿಂಗ್ಟನ್ ಸುಂದರ್ (Washington Sundar) 117 ಎಸೆತಗಳಲ್ಲಿ 60 ರನ್ ಪೂರೈಸಿದರು. ಎರಡನೇ ದಿನದ ಆಟದ ಕೊನೆಯಲ್ಲಿ ಅವರು ಔಟಾಗಲಿಲ್ಲ. ಎರಡನೇ ದಿನವೂ ಅವರ ಬ್ಯಾಟ್ ಮೋಡಿ ಚೆನ್ನಾಗಿತ್ತು ಮತ್ತು ಅವರು ಉತ್ತಮ ಪ್ರದರ್ಶನ ನೀಡಿದರು. ಸುಂದರ್ 174 ಎಸೆತಗಳಲ್ಲಿ ಅಜೇಯ 96 ರನ್ ಗಳಿಸಿದರು. ಆದಾಗ್ಯೂ, ಅವರು ಶತಕವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಆದರೆ ಈ ಪಂದ್ಯದಲ್ಲಿ ಅವರು ತಮ್ಮ ಉತ್ತಮ ಕೈಚಳಕ ತೋರುವ ಮೂಲಕ ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ.
ಭಾರತದ ದಿಗ್ಗಜ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (Ravichandran Ashwin) ಈ ಇಡೀ ಸರಣಿಯಲ್ಲಿ ಈವರೆಗೆ ಅದ್ಭುತ ಪ್ರದರ್ಶನ ನೀಡಿದ್ದಾರೆ. ವಿಶೇಷವೆಂದರೆ ಅಶ್ವಿನ್ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಸಮಾನವಾಗಿ ಕೊಡುಗೆ ನೀಡಿದ್ದಾರೆ. ನಾಲ್ಕನೇ ಟೆಸ್ಟ್‌ನಲ್ಲಿ ಅಶ್ವಿನ್ ಭಾರತಕ್ಕೆ ದೊಡ್ಡ ಗೇಮ್ ಚೇಂಜರ್ ಎಂದು ಸಾಬೀತಾಯಿತು. ಈ ಪಂದ್ಯದಲ್ಲಿ ಅಶ್ವಿನ್ ಒಟ್ಟು 8 ವಿಕೆಟ್ ಕಬಳಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಅವರು 3 ವಿಕೆಟ್‌ಗಳನ್ನು ಪಡೆದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಅಶ್ವಿನ್ 5 ವಿಕೆಟ್ ಪಡೆದಿದ್ದಾರೆ. ಇದನ್ನೂ ಓದಿ - ICC World Test ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಟೀಮ್ ಇಂಡಿಯಾ
ಈ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಅಕ್ಷರ್ ಪಟೇಲ್ 5 ವಿಕೆಟ್ ಪಡೆದರು. ಈ ಸಂಪೂರ್ಣ ಪಂದ್ಯದಲ್ಲಿ ಅಕ್ಷರ್ 9 ವಿಕೆಟ್ ಪಡೆದರು. ಈ ಪಂದ್ಯದಲ್ಲಿ ಭಾರತದ ಗೆಲುವಿನಲ್ಲಿ ಅಕ್ಷರ್ ಬಹಳ ಮುಖ್ಯ ಪಾತ್ರ ವಹಿಸಿದ್ದಾರೆ. ಇದನ್ನೂ ಓದಿ - Kevin Pietersen: ಟೀಮ್ ಇಂಡಿಯಾ ಸ್ಪಿನ್ನರ್‌ಗಳ ತಾಕತ್ತಿಗೆ ಬೆಚ್ಚಿ ಬಿದ್ದ ಕೆವಿನ್ ಪೀಟರ್ಸನ್!
ನಾಲ್ಕನೇ ಟೆಸ್ಟ್‌ನ ಎರಡನೇ ದಿನ, ಟೀಮ್ ಇಂಡಿಯಾ ವಿಕೆಟ್ ಕಳೆದುಕೊಳ್ಳುತ್ತಿದ್ದಾಗ, ರೋಹಿತ್ ಶರ್ಮಾ (Rohit Sharma) ಕ್ರೀಸ್‌ನಲ್ಲಿ ನಿಂತು 49 ರನ್‌ಗಳ ನಿರ್ಣಾಯಕ ಇನ್ನಿಂಗ್ಸ್ ಆಡಿದರು. ಅವರು ಬೆನ್ ಸ್ಟೋಕ್ಸ್ ಅವರಿಂದ ಎಲ್ಬಿಡಬ್ಲ್ಯೂ ಆಗಿದ್ದರು. ಅವರು ತಮ್ಮ ಅರ್ಧಶತಕವನ್ನು ಪೂರ್ಣಗೊಳಿಸಲು ವಿಫಲರಾದರು ಆದರೆ ಅವರ ಇನ್ನಿಂಗ್ಸ್ ಟೀಮ್ ಇಂಡಿಯಾಕ್ಕೆ ಮುಖ್ಯವಾಗಿತ್ತು. ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - https://bit.ly/3hDyh4G Apple Link - https://apple.co/3loQYe ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.