Cricket Facts: ಕ್ರಿಕೆಟ್ ಇತಿಹಾಸದಲ್ಲಿ ಈ 5 ದಾಖಲೆಗಳನ್ನು ಇದುವರೆಗೂ ಯಾರೂ ಮುರಿದಿಲ್ಲ!

Cricket Unique Records: ಕ್ರಿಕೆಟ್‌ನಲ್ಲಿ ಹಲವು ಬಾರಿ ದಾಖಲೆಗಳನ್ನು ಮಾಡುವುದನ್ನು ಮತ್ತು ಮುರಿಯುವುದನ್ನು ನೀವು ನೋಡಿರಬೇಕು. ಆಟಗಾರರ ಜಗತ್ತು ದಾಖಲೆಗಳ ಸುತ್ತ ಸುತ್ತುತ್ತದೆ, ಆದರೆ ಕ್ರಿಕೆಟ್ ಜಗತ್ತಿನಲ್ಲಿ ಕೆಲವು ವಿಚಿತ್ರ ದಾಖಲೆಗಳಿವೆ.

Cricket Unique Records: ಕ್ರಿಕೆಟ್‌ನಲ್ಲಿ ಹಲವು ಬಾರಿ ದಾಖಲೆಗಳನ್ನು ಮಾಡುವುದನ್ನು ಮತ್ತು ಮುರಿಯುವುದನ್ನು ನೀವು ನೋಡಿರಬೇಕು. ಆಟಗಾರರ ಜಗತ್ತು ದಾಖಲೆಗಳ ಸುತ್ತ ಸುತ್ತುತ್ತದೆ, ಆದರೆ ಕ್ರಿಕೆಟ್ ಜಗತ್ತಿನಲ್ಲಿ ಕೆಲವು ವಿಚಿತ್ರ ದಾಖಲೆಗಳಿವೆ, ಅದು ಕೆಲವೇ ಜನರಿಗೆ ತಿಳಿದಿದೆ. ಇಷ್ಟು ವರ್ಷಗಳಿಂದ ಈ ದಾಖಲೆಗಳನ್ನು ಮುರಿಯಲು ಯಾರಿಂದಲೂ ಸಾಧ್ಯವಾಗಿಲ್ಲ. ನೀವು ಹಿಂದೆಂದೂ ಓದದಿರುವ ಇಂತಹ ಕೆಲವು ಸಂಗತಿಗಳೂ ಇಲ್ಲಿವೆ.

1 /5

ಭಾರತದ ಮಾಜಿ ಬ್ಯಾಟ್ಸ್‌ಮನ್ ಸುನಿಲ್ ಗವಾಸ್ಕರ್ ಟೆಸ್ಟ್ ಪಂದ್ಯದ ಮೊದಲ ಎಸೆತದಲ್ಲಿ ಅತಿ ಹೆಚ್ಚು ಔಟಾದ ದಾಖಲೆಯನ್ನು ಹೊಂದಿದ್ದಾರೆ. ಸುನಿಲ್ ಗವಾಸ್ಕರ್ ಟೆಸ್ಟ್ ಪಂದ್ಯದ ಮೊದಲ ಎಸೆತದಲ್ಲಿ 3 ಬಾರಿ ಔಟಾಗಿದ್ದಾರೆ. ಇದುವರೆಗೂ ಈ ದಾಖಲೆಯನ್ನು ಮುರಿಯಲು ಯಾರಿಂದಲೂ ಸಾಧ್ಯವಾಗಿಲ್ಲ. ಭಾರತದ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್‌ಗಳಲ್ಲಿ ಸುನಿಲ್ ಗವಾಸ್ಕರ್ ಕೂಡ ಒಬ್ಬರು. 

2 /5

ಸೌರವ್ ಗಂಗೂಲಿ ಹೆಸರಿನಲ್ಲಿ ನೀವು ಎಂದೂ ಕೇಳಿರದ ದಾಖಲೆಯೂ ಇದೆ. ಸೌರವ್ ಗಂಗೂಲಿ ಕ್ರಿಕೆಟ್ ಇತಿಹಾಸದಲ್ಲಿ ಏಕದಿನದಲ್ಲಿ ಸತತ ನಾಲ್ಕು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಏಕೈಕ ಆಟಗಾರ. ಅವರು 1997 ರಲ್ಲಿ ಪಾಕಿಸ್ತಾನ ವಿರುದ್ಧದ ODI ಸರಣಿಯಲ್ಲಿ ಸತತ 4 ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದರು.

3 /5

ಶಾಹಿದ್ ಅಫ್ರಿದಿ 37 ಎಸೆತಗಳಲ್ಲಿ 11 ಸಿಕ್ಸರ್ ಮತ್ತು 6 ಬೌಂಡರಿಗಳನ್ನು ಬಾರಿಸುವ ಮೂಲಕ ಆ ಸಮಯದಲ್ಲಿ ವೇಗದ ಶತಕವನ್ನು ಸಿಡಿಸಿ ವಿಶ್ವದಾಖಲೆ ಮಾಡಿದರು. ಆದ್ರೆ ಅಫ್ರಿದಿ ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಅವರ ಬ್ಯಾಟ್ ಬಳಸಿದ್ದರು. ವಾಸ್ತವವಾಗಿ ಅಫ್ರಿದಿ ಬಳಿ ಸರಿಯಾದ ಬ್ಯಾಟ್ ಇರಲಿಲ್ಲ. ಆದ್ದರಿಂದ ಸಚಿನ್ ಅವರ ಬ್ಯಾಟ್ ಅನ್ನು ಆಡಲು ನೀಡಿದರು.

4 /5

ಇಂಗ್ಲೆಂಡ್ ಬೌಲರ್ ಜಿಮ್ ಲೇಕರ್ ಟೆಸ್ಟ್ ಪಂದ್ಯವೊಂದರಲ್ಲಿ 19 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಇಲ್ಲಿಯವರೆಗೂ ಈ ದಾಖಲೆಯನ್ನು ಮುರಿಯಲು ಯಾವುದೇ ಬೌಲರ್‌ಗೆ ಸಾಧ್ಯವಾಗಿಲ್ಲ. ಇದು ಟೆಸ್ಟ್ ಪಂದ್ಯವೊಂದರಲ್ಲಿ ಮಾಡಿದ ಅತಿದೊಡ್ಡ ಕ್ರಿಕೆಟ್ ದಾಖಲೆಯಾಗಿದೆ. ಜಿಮ್ ಲೇಕರ್ ಈ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 9 ವಿಕೆಟ್‌ಗಳನ್ನು ಪಡೆದರು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್‌ಗಳನ್ನು ಪಡೆದರು.

5 /5

ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಆದರೆ ಟೆಸ್ಟ್ ಪಂದ್ಯದ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಬಲ್ಲ ಏಕೈಕ ಬ್ಯಾಟ್ಸ್‌ಮನ್ ಅವರು ಎಂದು ಕೆಲವೇ ಜನರಿಗೆ ತಿಳಿದಿದೆ. ಗೇಲ್ 2012ರಲ್ಲಿ ಬಾಂಗ್ಲಾದೇಶ ವಿರುದ್ಧ ಈ ಸಾಧನೆ ಮಾಡಿದ್ದರು.