ನೀವು ಕೂಡ ಹೊಸ ಬೈಕ್ ಅಥವಾ ಸ್ಕೂಟರ್ ಖರೀದಿಸಲು ಯೋಜಿಸುತ್ತಿದ್ದರೆ, ಈ ಸುದ್ದಿಯನ್ನು ಖಂಡಿತವಾಗಿ ಓದಿ. ಸೆಪ್ಟೆಂಬರ್‌ನಲ್ಲಿ ಹೆಚ್ಚು ಮಾರಾಟವಾಗುವ ಬೈಕ್‌ಗಳು ಮತ್ತು ಸ್ಕೂಟರ್‌ಗಳ ಕುರಿತು ಇಲ್ಲಿ ನಾವು ನಿಮಗಾಗಿ ಮಾಹಿತಿ ಇಲ್ಲಿದೆ...
ಕಳೆದ ತಿಂಗಳಲ್ಲಿ ಅಂದರೆ ಸೆಪ್ಟೆಂಬರ್ 2021 ರಲ್ಲಿ, ದ್ವಿಚಕ್ರ ವಾಹನ ಮಾರಾಟದಲ್ಲಿ ಶೇ.17 ಕ್ಕಿಂತ ಹೆಚ್ಚು ಕುಸಿತ ಕಂಡುಬಂದಿದೆ. ಇಷ್ಟಾದರೂ ಅನೇಕ ಕಂಪನಿಗಳ ಬೈಕ್‌ಗಳು ಮತ್ತು ಸ್ಕೂಟರ್‌ಗಳು ಅತ್ಯುತ್ತಮವಾಗಿ ಮಾರಾಟವಾಗಿವೆ. ನೀವು ಕೂಡ ಹೊಸ ಬೈಕ್ ಅಥವಾ ಸ್ಕೂಟರ್ ಖರೀದಿಸಲು ಯೋಜಿಸುತ್ತಿದ್ದರೆ, ಈ ಸುದ್ದಿಯನ್ನು ಖಂಡಿತವಾಗಿ ಓದಿ. ಸೆಪ್ಟೆಂಬರ್‌ನಲ್ಲಿ ಹೆಚ್ಚು ಮಾರಾಟವಾಗುವ ಬೈಕ್‌ಗಳು ಮತ್ತು ಸ್ಕೂಟರ್‌ಗಳ ಕುರಿತು ಇಲ್ಲಿ ನಾವು ನಿಮಗಾಗಿ ಮಾಹಿತಿ ಇಲ್ಲಿದೆ...
ಬಜಾಜ್ ಪ್ಲಾಟಿನಾ(Bajaj Platina) : ಮೈಲೇಜ್ ವಿಷಯದಲ್ಲಿ ಬಜಾಜ್ ಪ್ಲಾಟಿನಾ ಅತ್ಯಂತ ಶಕ್ತಿಶಾಲಿ ಬೈಕ್ ಗಳಲ್ಲಿ ಒಂದಾಗಿದ್ದು, ಉತ್ತಮ ಮಾರಾಟವಾಗಿದೆ. ಸೆಪ್ಟೆಂಬರ್ 2021 ರ ಅವಧಿಯಲ್ಲಿ ಬಜಾಜ್ ಪ್ಲಾಟಿನಾ ಒಟ್ಟು 82,559 ಯುನಿಟ್‌ಗಳ ಮಾರಾಟವನ್ನು ದಾಖಲಿಸಿದೆ.
ಹೀರೋ ಎಚ್‌ಎಫ್ ಡಿಲಕ್ಸ್(Hero HF Deluxe) : ಹೀರೋ ಮೋಟಾರ್ಸ್ ನಿಂದ ಉತ್ತಮ ಮೈಲೇಜ್ ನೀಡುವ ಹೀರೋ HF ಡಿಲಕ್ಸ್ ಬೈಕ್ ಕೂಡ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡಿದೆ. ಇದು ಸೆಪ್ಟೆಂಬರ್ 2021 ರಲ್ಲಿ 1,34,539 ಯುನಿಟ್‌ಗಳನ್ನು ಮಾರಾಟ ಮಾಡಿದೆ.
ಹೋಂಡಾ ಶೈನ್(Honda Shine) : ಹೋಂಡಾ ಸ್ವಂತ ಬೈಕ್ ಹೋಂಡಾ ಶೈನ್ ಮಾರಾಟ ಕೂಡ ದಾಖಲೆ ನಿರ್ಮಿಸಿದೆ. ಸೆಪ್ಟೆಂಬರ್‌ನಲ್ಲಿ ವ್ಯಾಪಾರ ಕುಸಿತದ ಹೊರತಾಗಿಯೂ, ಈ ಬೈಕಿನ 1,42,386 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ.
ಹೋಂಡಾ ಆಕ್ಟಿವಾ(Honda Activa) : ಹೋಂಡಾ ಆಕ್ಟಿವಾ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಹೋಂಡಾ ಆಕ್ಟಿವಾ ಸೆಪ್ಟೆಂಬರ್ 2021 ರ ಅವಧಿಯಲ್ಲಿ ಒಟ್ಟು 2,45,352 ಯುನಿಟ್‌ಗಳ ಮಾರಾಟವನ್ನು ದಾಖಲಿಸಿದೆ.
ಹೀರೋ ಸ್ಪ್ಲೆಂಡರ್(Hero Splendor) : ಹೆಚ್ಚು ಮಾರಾಟವಾಗುವ ಬೈಕ್‌ಗಳ ಪಟ್ಟಿಯಲ್ಲಿ ಹೀರೋ ಸ್ಪ್ಲೆಂಡರ್ ಹೆಸರು ಮೊದಲ ಸ್ಥಾನದಲ್ಲಿದೆ. ಕಳೆದ ಸೆಪ್ಟೆಂಬರ್ ನಲ್ಲಿ 2,77,296 ಯೂನಿಟ್ ಹೀರೋ ಸ್ಪ್ಲೆಂಡರ್ ಮಾರಾಟವಾಗಿದೆ.