ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಮ್ಮಲ್ಲಿ ಕೆಲವರು ತಮ್ಮ ಎಡವಟ್ಟಿನಿಂದಾಗಿ ಎಷ್ಟೇ ನಷ್ಟ ಅನುಭವಿಸಿದರೂ ಕೂಡ ಅದರಿಂದ ಪಾಠ ಕಲಿಯುವುದೇ ಇಲ್ಲ. ಹಾಗಾಗಿಯೇ ಅವರನ್ನು ತಪ್ಪು ಮಾಡುವುದರಲ್ಲಿ ಎತ್ತಿದ ಕೈ ಎಂದು ಪರಿಗಣಿಸಲಾಗುತ್ತದೆ.
ಮನುಷ್ಯ ಎಂದ ಮೇಲೆ ತಪ್ಪು ಮಾಡುವುದು ಸಹಜ. ಆದರೆ, ನಾವು ಮಾಡುವ ತಪ್ಪುಗಳು ನಮ್ಮ ಭವಿಷ್ಯಕ್ಕೆ ಪಾಠವಾಗಿರಬೇಕು. ಆದರೆ, ನಮ್ಮಲ್ಲಿ ಕೆಲವರು ತಮ್ಮ ಎಡವಟ್ಟಿನಿಂದಾಗಿ ಎಷ್ಟೇ ನಷ್ಟ ಅನುಭವಿಸಿದರೂ ಕೂಡ ಅದರಿಂದ ಪಾಠ ಕಲಿಯುವುದೇ ಇಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯವರು ಸದಾ ತಪ್ಪು ಮಾಡುವದರಲ್ಲಿ ಮುಂದಿರುತ್ತಾರೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ....
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ವೈದಿಕ ಜ್ಯೋತಿಷ್ಯದ ಪ್ರಕಾರ, ಮೇಷ ರಾಶಿಯ ಜನರು ಯೋಚಿಸದೇ ಕೆಲಸ ಮಾಡುವುದೇ ಹೆಚ್ಚು. ಹಾಗಾಗಿಯೇ, ಬಹುತೇಕ ಅವರು ತಪ್ಪು ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ಪದೇ ಪದೇ ಸಾಕಷ್ಟು ನಷ್ಟ ಅನುಭವಿಸಿದ ಹೊರತಾಗಿಯೂ ಅವರು ತಮ್ಮನ್ನು ತಾವು ತಿದ್ದುಕೊಳ್ಳುವುದೇ ಇಲ್ಲ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಿಥುನ ರಾಶಿಯವರೂ ಕೂಡ ತಪ್ಪು ಮಾಡುವುದರಲ್ಲಿ ನಿಸ್ಸೀಮರು. ಮಾತ್ರವಲ್ಲ, ಅವರು, ಇವರು ಸಾಕಷ್ಟು ಸಮಯ ಸಂದಿಗ್ಧತ ಪರಿಸ್ಥಿತಿಯಲ್ಲಿಯೇ ಬದುಕುತ್ತಾರೆ.
ಜ್ಯೋತಿಷ್ಯ ತಜ್ಞರ ಪ್ರಕಾರ, ಕರ್ಕಾಟಕ ರಾಶಿಯವರು ಜನರನ್ನು ನೋಡಿಯೇ ಮೋಸ ಹೋಗುತ್ತಾರೆ. ಇವರು ಯಾರನ್ನಾದರೂ ಕೂಡ ಕಣ್ಮುಚ್ಚಿ ನಂಬುತ್ತಾರೆ. ಇದರಿಂದ ಹಲವು ಬಾರಿ ಮೋಸ ಹೋದರೂ ಸಹ ಅವರು ತಮ್ಮ ಈ ಗುಣವನ್ನು ಬದಲಿಸಿಕೊಳ್ಳುವುದಿಲ್ಲ.
ಕುಂಭ ರಾಶಿಯ ಜನರಿಗೆ ತಾವೇ ಅತೀ ಬುದ್ದಿವಂತರು ಎಂಬ ಹೆಮ್ಮೆ ಇರುತ್ತದೆ. ಹಾಗಾಗಿಯೇ, ಅವರು ಸರಿ-ತಪ್ಪುಗಳ ಬಗ್ಗೆ ಇತರರೊಂದಿಗೆ ಅಭಿಪ್ರಾಯ ಕೇಳಲು ಇಷ್ಟಪಡುವುದಿಲ್ಲ. ಇವರ ಈ ಸ್ವಭಾವದಿಂದಲೇ ಸಾಕಷ್ಟು ನಷ್ಟ ಅನುಭವಿಸುತ್ತಾರೆ.
ಮೀನ ರಾಶಿಯವರು ಯಾವುದೇ ವಿಷಯಕ್ಕೂ ಬಹಳ ಬೇಗ ಮರುಗುತ್ತಾರೆ. ಅವರ ಈ ಸ್ವಭಾವದಿಂದಲೇ ಅವರು ಬಹಳ ಬೇಗ ಮೋಸ ಹೋಗುತ್ತಾರೆ. ಆದಾಗ್ಯೂ, ಈ ಸ್ವಭಾವವನ್ನು ಅವರು ಬದಲಾಯಿಸಿಕೊಳ್ಳುವುದಿಲ್ಲ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.