ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಸದ್ದು ಮಾಡಿದ 'ನಾಗಿನ್' ಖ್ಯಾತಿಯ ನಟಿ

ಮೌನಿ ರಾಯ್  (Mouni Roy) ಈಗ ಬಾಲಿವುಡ್ ಉದ್ಯಮದಲ್ಲಿ ಪ್ರಸಿದ್ಧ ನಟಿಯಾಗಿದ್ದಾರೆ.

  • Aug 10, 2020, 06:51 AM IST

ನವದೆಹಲಿ: ಮೌನಿ ರಾಯ್ ಈಗ ಬಾಲಿವುಡ್ ಉದ್ಯಮದ ಪ್ರಸಿದ್ಧ ನಟಿಯಾಗಿದ್ದಾರೆ. ಸಣ್ಣ ಪರದೆಯ ನಂತರ ಈಗ ಅವರು ದೊಡ್ಡ ಪರದೆಯಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಬಾಲಿವುಡ್‌ಗೆ ಮೌನಿ ರಾಯ್ ಅವರ ಪ್ರಯಾಣ ಚೆನ್ನಾಗಿ ನಡೆಯುತ್ತಿದೆ. ಅದೇ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಅವರ ಸುಂದರವಾದ ಫೋಟೋ ಅವರ ಅಭಿಮಾನಿಗಳನ್ನು ಹುಚ್ಚರನ್ನಾಗಿ ಮಾಡಿದೆ. ಇತ್ತೀಚೆಗೆ ಮೌನಿ ರಾಯ್ ತನ್ನ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಮತ್ತು ಈ ಚಿತ್ರಗಳಲ್ಲಿ 'ನಾಗಿನ್' ಖ್ಯಾತಿಯ ನಟಿ ಕ್ರೀಮ್ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಫೋಟೋಗಳನ್ನು ನೋಡಿ ...

1 /5

ಮೌನಿ ರಾಯ್ ಈಗಾಗಲೇ ಟಿವಿಯಲ್ಲಿ ಜನಪ್ರಿಯತೆಯನ್ನು ಗಳಿಸಿದ್ದು ಅವರು ಚಲನಚಿತ್ರಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಾಬಲ್ಯ ಮುಂದುವರಿಸಿದ್ದಾರೆ.

2 /5

ಮೌನಿ ರಾಯ್ ತಮ್ಮ ನಟನಾ ವೃತ್ತಿಯನ್ನು 'ಸಾಸ್ ಭಿ ಕಭಿ ಬಹು ಥಿ' ಎಂಬ ಟಿವಿ ಕಾರ್ಯಕ್ರಮದೊಂದಿಗೆ ಪ್ರಾರಂಭಿಸಿದರು.   

3 /5

ಮೌನಿ ಹಂಚಿಕೊಂಡ ಕೆಲವು ಚಿತ್ರಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

4 /5

ಈ ಫೋಟೋಗಳಲ್ಲಿ ಕ್ರೀಮ್ ಬಣ್ಣದ ಸೀರೆ ಧರಿಸಿರುವ ಮೌನಿ ರಾಯ್ ಅದರೊಟ್ಟಿಗೆ ಮಹ್ರೂನ್ ಬಣ್ಣದ ಕುಪ್ಪಸ ಮತ್ತು ಕುಂದನ್ ಆಭರಣಗಳೊಂದಿಗೆ ಮನಮೋಹಕವಾಗಿ ಕಾಣುತ್ತಿದ್ದಾರೆ.

5 /5

ಸೀರೆ ಲುಕ್‌ನಲ್ಲಿ ಮೌನಿ ರಾಯ್‌ಗೆ ಇದುವರೆಗೆ 3 ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ. (ಫೋಟೊ ಕೃಪೆ: ಎಲ್ಲಾ ಫೋಟೋಗಳನ್ನು ಮೌನಿ ರಾಯ್ ಅವರ ಇನ್‌ಸ್ಟಾಗ್ರಾಮ್ ಖಾತೆಯಿಂದ ತೆಗೆದುಕೊಳ್ಳಲಾಗಿದೆ)