ತುಳಸಿ-ಮನಿ ಪ್ಲಾಂಟ್ ನಂತೆಯೇ ಈ ಸಸ್ಯಗಳು ಕೂಡಾ ಹೊತ್ತು ತರುತ್ತವೆ ಅದೃಷ್ಟ

ಈ ಸಸ್ಯಗಳು ಸಂತೋಷ ಮತ್ತು ಸಮೃದ್ಧಿಯನ್ನು ಹೊತ್ತು ತರುತ್ತವೆ ಎಂದು ನಂಬಲಾಗಿದೆ. ಈ ಗಿಡಗಳು ಯಾವ ಮನೆಯಲ್ಲಿ ಇರುತ್ತದೆಯೋ ಆ ಮನೆಯಲ್ಲಿ ಹಣ ಮತ್ತು ಆಹಾರದ ಕೊರತೆ ಎಂದಿಗೂ ಇರುವುದಿಲ್ಲ ಎನ್ನಲಾಗಿದೆ.  

ಬೆಂಗಳೂರು : Lucky Plants for Home : ಜ್ಯೋತಿಷ್ಯ, ವಾಸ್ತು ಅಥವಾ ಚೈನೀಸ್ ವಾಸ್ತು ಶಾಸ್ತ್ರ ಫೆಂಗ್ ಶೂಯಿ, ಇವುಗಳಲ್ಲಿ ಕೆಲವು ವಿಷಯಗಳನ್ನು ಬಹಳ ಮಂಗಳಕರವೆಂದು ಹೇಳಲಾಗುತ್ತದೆ. ಇಲ್ಲಿ ಅದೃಷ್ಟವನ್ನು ತರವ ಕೆಲವೊಂದು ವಿಚಾರಗಳ ಬಗ್ಗೆ ಹೇಳಲಾಗಿದೆ. ಇವುಗಳಲ್ಲಿ ಕೆಲವು ವಿಶೇಷ ಸಸ್ಯಗಳನ್ನು ಸಹ ಸೇರಿಸಲಾಗಿದೆ. ಈ ಸಸ್ಯಗಳು ಸಂತೋಷ ಮತ್ತು ಸಮೃದ್ಧಿಯನ್ನು ಹೊತ್ತು ತರುತ್ತವೆ ಎಂದು ನಂಬಲಾಗಿದೆ. ಈ ಗಿಡಗಳು ಯಾವ ಮನೆಯಲ್ಲಿ ಇರುತ್ತದೆಯೋ ಆ ಮನೆಯಲ್ಲಿ ಹಣ ಮತ್ತು ಆಹಾರದ ಕೊರತೆ ಎಂದಿಗೂ ಇರುವುದಿಲ್ಲ ಎನ್ನಲಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /6

ಗರಿಕೆ ಗಣೇಶನಿಗೆ ತುಂಬಾ ಪ್ರಿಯ. ಮನೆಯಲ್ಲಿ ಇದನ್ನೂ ನೆಟ್ಟರೆಸಂತಾನ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಪ್ರತಿದಿನ  ಗರಿಕೆಗೆ ನೀರನ್ನು ಅರ್ಪಿಸಿ ಮತ್ತು ಗಣಪತಿಗೆ ಅರ್ಪಿಸುವುದರಿಂದ ಅದೃಷ್ಟವು ತೆರೆದುಕೊಳ್ಳುತ್ತದೆ  ಎಂದು ಹೇಳಲಾಗುತ್ತದೆ. 

2 /6

ವಾಸ್ತು ಶಾಸ್ತ್ರದಲ್ಲಿ ಸ್ನೇಕ್  ಪ್ಲಾಂಟ್ ಅನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಸಸ್ಯವು ಪ್ರಗತಿಯ ಹಾದಿಯನ್ನು ತೆರೆಯುತ್ತದೆ. ಇದನ್ನು ಸ್ಟಡಿ ರೂಂ ಅಥವಾ ಲಿವಿಂಗ್ ರೂಮಿನಲ್ಲಿ ಇಡುವುದು ತುಂಬಾ ಒಳ್ಳೆಯದು. ಈ ಸಸ್ಯವು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.   

3 /6

ಮನೆಯಲ್ಲಿ ತೆಂಗಿನ ಮರವನ್ನು ನೆಡುವುದು ತುಂಬಾ ಶುಭ. ಇದು ಮನೆಯ ಜನರಿಗೆ ಹಗಲು ರಾತ್ರಿ ನಾಲ್ಕು ಪಟ್ಟು ಪ್ರಗತಿಯನ್ನು ನೀಡುತ್ತದೆ

4 /6

ವಾಸ್ತು ಶಾಸ್ತ್ರದಲ್ಲಿ,  ಮುಟ್ಟಿದರೆ ಮುನಿ  ಸಸ್ಯವನ್ನು ಸಹ ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಗಿಡವನ್ನು ಮನೆಯಲ್ಲಿ ನೆಟ್ಟು ಪ್ರತಿನಿತ್ಯ ನೀರು ಹಾಕುವುದರಿಂದ ಜಾತಕದಲ್ಲಿರುವ ರಾಹುದೋಷ ನಿವಾರಣೆಯಾಗುತ್ತದೆ. ಹಣಕಾಸಿನ ನಷ್ಟ, ಪ್ರಗತಿಯಲ್ಲಿನ ಅಡೆತಡೆಗಳು, ರೋಗಗಳು, ಸಂಬಂಧಗಳಲ್ಲಿನ ಸಮಸ್ಯೆಗಳು ನಿವಾರಣೆಯಾಗುತ್ತದೆ.   

5 /6

ಬಾಳೆ ಗಿಡ ವಿಷ್ಣುವಿಗೆ ಬಹಳ ಪ್ರಿಯವಾಗಿದೆ. ಇದು ಗುರು ಗ್ರಹಕ್ಕೆ ಸಂಬಂಧಿಸಿದೆ. ಜ್ಯೋತಿಷ್ಯದಲ್ಲಿ ಗುರುವನ್ನು ಮಂಗಳಕರ ಗ್ರಹವೆಂದು ಪರಿಗಣಿಸಲಾಗಿದೆ. ಗುರುವು ಮಂಗಳಕರಾಗಿದ್ದರೆ, ವ್ಯಕ್ತಿಯ ಅದೃಷ್ಟವು ಬಲವಾಗಿರುತ್ತದೆ. ಎಲ್ಲಾ ಕೆಲಸಗಳು  ಸಾಂಗವಾಗಿ ನೆರವೇರುತ್ತದೆ. 

6 /6

ಲಕ್ಷ್ಮಣ ಸಸ್ಯವು ಲಕ್ಷ್ಮಿ ದೇವಿಗೆ ಸಂಬಂಧಿಸಿದ್ದಾಗಿದೆ. ಈ ಸಸ್ಯವನ್ನು ಮನೆಯಲ್ಲಿ ನೆಡುವುದರಿಂದ, ಸಂಪತ್ತಿನ ದೇವತೆಯಾದ ಲಕ್ಷ್ಮೀ ದೇವಿಯು ಮನೆಯಲ್ಲಿ ನೆಲೆಸುತ್ತಾಳೆ. ಮನೆಯಲ್ಲಿ ಸಂಪತ್ತು ತುಂಬಿರುತ್ತದೆ. ಈ ಗಿಡವನ್ನು ಮನೆಯ ಪೂರ್ವ ಅಥವಾ ಪೂರ್ವ-ಉತ್ತರ ದಿಕ್ಕಿನಲ್ಲಿ ನೆಡುವುದು ಶುಭ ಎನ್ನಲಾಗಿದೆ.   (ಸೂಚನೆ : ಈ ಮೇಲಿನ ಲೇಖನವು ಸಾಮಾನ್ಯ ನಂಬಿಕೆ ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)