ವಿಕ್ಕಿ ಕತ್ರಿನಾ ರಾಯಲ್ ಆರತಕ್ಷತೆಗೆ ಗೈರಾಗಲಿದ್ದಾರೆ ಈ ನಟ ನಟಿಯರು, ಕಾರಣ ಏನು ಗೊತ್ತಾ ?

ಕತ್ರಿನಾ ಕೈಫ್ ಮತ್ತು ರಣಬೀರ್ ಕಪೂರ್ ಅವರ ಹಳೆಯ ಸಂಬಂಧವನ್ನು ನೋಡಿದರೆ, ರಣಬೀರ್ ಕಪೂರ್ ಆರತಕ್ಷತೆಗೆ ಆಹ್ವಾನ  ಪಡೆಯುವುಡು ಅನುಮಾನ

ನವದೆಹಲಿ : ವಿಕ್ಕಿ ಕತ್ರಿನಾ ಮದುವೆ (Vicky Katrina Wedding) ಕೊನೆಗೂ ರಾಯಲ್ ಶೈಲಿಯಲ್ಲಿ ಮದುವೆಯಾಗಿದೆ. ಇವರಿಬ್ಬರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ವಿಕ್ಕಿ-ಕತ್ರಿನಾ ಶೀಘ್ರದಲ್ಲೇ ತಮ್ಮ ಮದುವೆಯ ಆರತಕ್ಷತೆಯನ್ನು ಆಯೋಜಿಸಲಿದ್ದಾರೆ. ಆದರೆ ಕೆಲವು ತಾರೆಯರು ಈ ಆರತಕ್ಷತೆಗೆ ಹಾಜರಾಗುವ ನಿರೀಕ್ಷೆಯಿಲ್ಲ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಕತ್ರಿನಾ ಕೈಫ್ ಮತ್ತು ರಣಬೀರ್ ಕಪೂರ್ ಅವರ ಹಳೆಯ ಸಂಬಂಧವನ್ನು ನೋಡಿದರೆ, ರಣಬೀರ್ ಕಪೂರ್ ಆರತಕ್ಷತೆಗೆ ಆಹ್ವಾನ  ಪಡೆಯುವುದು ಅನುಮಾನ. ರಣಬೀರ್ ಕಪೂರ್ ಈಗ ಆಲಿಯಾ ಭಟ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಒಂದು ಕಾಲದಲ್ಲಿ ರಣಬೀರ್ ಮತ್ತು ಕತ್ರಿನಾ ಕೈಫ್ ಉತ್ತಮ ಸ್ನೇಹಿತರಾಗಿದ್ದರು.

2 /5

ಸಲ್ಮಾನ್ ಖಾನ್ ಕೂಡ ಕತ್ರಿನಾ ಕೈಫ್ ಅವರ ಮಾಜಿ ಗೆಳೆಯ. ಕತ್ರೀನಾ,  ಸಲ್ಮಾನ್ ಮತ್ತು ಅವರ ಕುಟುಂಬದೊಂದಿಗೆ ಇನ್ನೂ ಉತ್ತಮ ಸಂಬಂಧವನ್ನು ಉಳಿಸಿಕೊಂಡಿದ್ದರೂ, ಅವರನ್ನು ಮದುವೆಗೆ ಆಹ್ವಾನಿಸಿರಲಿಲ್ಲ. ಈ ಕಾರಣದಿಂದಾಗಿ, ಬಹುಶಃ ಸಲ್ಮಾನ್ ಕೂಡ ಆರತಕ್ಷತೆಗೆ ಬರದೇ ಇರಬಹುದು. 

3 /5

ಕತ್ರಿನಾ ಕೈಫ್ ಅವರ ಉತ್ತಮ ಸ್ನೇಹಿತ ಶಾರುಖ್ ಖಾನ್. ಆದರೆ ಅವರ ಟೈಟ್ ಶೆಡ್ಯೂಲ್  ಕಾರಣದಿಂದಾಗಿ, ಶಾರುಖ್ ಕೂಡಾ ಆರತಕ್ಷತೆಗೆ ಹಾಜರಾಗದೇ ಇರಬಹುದು. ಶಾರುಖ್ ಇತ್ತೀಚಿನ ದಿನಗಳಲ್ಲಿ 'ಪಠಾಣ್' ಮತ್ತು ಇತರ ಚಿತ್ರಗಳ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

4 /5

ಕತ್ರಿನಾ ಕೈಫ್ ಜೊತೆ 'ಜೀ ಲೇ ಜರಾ' ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ಪ್ರಿಯಾಂಕಾ ಚೋಪ್ರಾ ಭಾರತದಲ್ಲಿ ಇಲ್ಲದ ಕಾರಣ ಅವರ ಮದುವೆಯ ಆರತಕ್ಷತೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ.

5 /5

ನಟಿ ಹರ್ಲೀನ್ ಸೇಥಿ ವಿಕ್ಕಿ ಕೌಶಲ್ ಅವರ ಮಾಜಿ ಗೆಳತಿ. ಅವರಿಬ್ಬರ ನಡುವಿನ ಸಂಬಂಧ ಅಷ್ಟೊಂದು ಚೆನ್ನಾಗಿರಲಿಲ್ಲ. ಹಾಗಾಗಿ, ನಟಿ ವಿಕ್ಕಿ ಕತ್ರಿನಾ ಆರತಕ್ಷತೆ ಸಮಾರಂಭದಲ್ಲಿ ಅವರು ಭಾಗವಹಿಸುವುದಿಲ್ಲ ಎಂಬುದು ಬಹುತೇಕ ಖಚಿತವಾಗಿದೆ.