Vastu Tips for Tulsi: ತುಳಸಿ ಗಿಡದ ಬಳಿ ಈ ವಸ್ತುಗಳನ್ನು ಅಪ್ಪಿತಪ್ಪಿಯೂ ಇಡಲೇಬಾರದು: ಕ್ಷಣದಲ್ಲಿ ಬದುಕು ಬೀದಿಪಾಲಾಗುತ್ತದೆ!!

Vastu Tips for Tulsi: ತುಳಸಿಯನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಮತ್ತು ಮಂಗಳಕರ ಸಸ್ಯವೆಂದು ಪರಿಗಣಿಸಲಾಗಿದೆ. ಜನರು ಈ ಗಿಡವನ್ನು ಮನೆಯಲ್ಲಿ ನೆಡಲು ಇಷ್ಟಪಡುತ್ತಾರೆ. ಪ್ರತಿನಿತ್ಯ ಇದನ್ನು ಪೂಜಿಸಿ ನೀರನ್ನು ಅರ್ಪಿಸುವುದರಿಂದ ಅನೇಕ ರೀತಿಯ ದೋಷಗಳಿಂದ ಮುಕ್ತಿ ದೊರೆಯುತ್ತದೆ ಮತ್ತು ಮನೆಗೆ ಆಶೀರ್ವಾದ ಲಭಿಸುತ್ತದೆ ಎಂದು ಹೇಳಲಾಗುತ್ತದೆ. ತುಳಸಿ ಗಿಡದಲ್ಲಿ ವಿಷ್ಣು ಮತ್ತು ತಾಯಿ ಲಕ್ಷ್ಮಿ ನೆಲೆಸಿದ್ದಾರೆಂದು ನಂಬಲಾಗಿದೆ. ಈ ಬಗ್ಗೆ ಕೆಲವು ನಿಯಮಗಳನ್ನು ಅನುಸರಿಸುವುದು ಅವಶ್ಯಕ. ಈ ನಿಯಮಗಳನ್ನು ಪಾಲಿಸದಿದ್ದರೆ ತಾಯಿ ಲಕ್ಷ್ಮಿ ಕೋಪಗೊಳ್ಳಬಹುದು ಮತ್ತು ಒಬ್ಬ ವ್ಯಕ್ತಿಯು ಶ್ರೀಮಂತನಿಂದ ಬಡವನಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.

1 /5

ತುಳಸಿ ಗಿಡಕ್ಕೆ ಪ್ರತಿನಿತ್ಯ ನೀರನ್ನು ಅರ್ಪಿಸಿ ನಿತ್ಯ ಆರೈಕೆ ಮಾಡುವವರಿಗೆ ತಾಯಿ ಲಕ್ಷ್ಮಿಯು ಪ್ರಸನ್ನಳಾಗುತ್ತಾಳೆ ಮತ್ತು ಅವರಿಗೆ ಹೆಚ್ಚಿನ ಅನುಗ್ರಹವನ್ನು ನೀಡುತ್ತಾಳೆ ಎಂದು ಧಾರ್ಮಿಕ ಗ್ರಂಥಗಳಲ್ಲಿ ಹೇಳಲಾಗಿದೆ. ಕೆಲವು ವಸ್ತುಗಳನ್ನು ತುಳಸಿಯೊಂದಿಗೆ ಇಡಬಾರದು. ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮಿ ಕೋಪಗೊಳ್ಳಬಹುದು.

2 /5

ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಗಿಡ ನೆಟ್ಟ ಜಾಗದಲ್ಲಿ ಕೊಳೆ ಹರಡಬಾರದು. ತುಳಸಿ ಗಿಡದ ಬಳಿ ಸದಾ ಸ್ವಚ್ಛತೆ ಕಾಪಾಡಬೇಕು. ದಿನನಿತ್ಯ ಮನೆಯಿಂದ ಹೊರಬರುವ ಕಸವನ್ನೂ ತುಳಸಿಯಿಂದ ದೂರವಿಡಬೇಕು.

3 /5

ಅಪ್ಪಿತಪ್ಪಿಯೂ ತುಳಸಿ ಗಿಡದ ಬಳಿ ಪೊರಕೆ ಇಡಬಾರದು. ಮನೆಯಲ್ಲಿನ ಕೊಳೆಯನ್ನು ಸ್ವಚ್ಛಗೊಳಿಸಲು ಪೊರಕೆಯನ್ನು ಬಳಸಲಾಗುತ್ತದೆ. ತುಳಸಿ ಬಳಿ ಪೊರಕೆ ಇಡುವುದರಿಂದ ಮನೆಯಲ್ಲಿ ಬಡತನ ಬರಲಾರಂಭಿಸುತ್ತದೆ.

4 /5

ತುಳಸಿ ಗಿಡವನ್ನು ನೆಟ್ಟ ಅಥವಾ ಇಡುವ ಸ್ಥಳದಲ್ಲಿ ಶೂಗಳು ಮತ್ತು ಚಪ್ಪಲಿಗಳನ್ನು ಇರಿಸಬಾರದು. ತುಳಸಿ ಗಿಡದ ಪಾವಿತ್ರ್ಯತೆಯನ್ನು ಗೌರವಿಸಿ. ಸ್ವಲ್ಪ ದೂರದಲ್ಲಿ ಶೂ ಮತ್ತು ಚಪ್ಪಲಿಗಾಗಿ ಸ್ಟ್ಯಾಂಡ್ ಮಾಡಬೇಕು. ತುಳಸಿ ಬಳಿ ಪಾದರಕ್ಷೆ, ಚಪ್ಪಲಿ ಇಟ್ಟುಕೊಳ್ಳುವುದರಿಂದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

5 /5

ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಗಿಡದ ಬಳಿ ಯಾವುದೇ ರೀತಿಯ ಮುಳ್ಳಿನ ಗಿಡಗಳನ್ನು ನೆಡಬಾರದು. ಮುಳ್ಳಿನ ಗಿಡವನ್ನು ನೆಟ್ಟರೆ ಮನೆಯಲ್ಲಿ ನೆಗೆಟಿವ್ ಎನರ್ಜಿ ಪರಿಚಲನೆ ಶುರುವಾಗುತ್ತದೆ. ತುಳಸಿಯ ಸುತ್ತ ಮುಳ್ಳಿನ ಗಿಡವಿದ್ದರೆ ತಕ್ಷಣ ತೆಗೆಯಿರಿ. (ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)