Sarvartha Siddhi Yoga on Tulsi Puja 2023: ಈ ವರ್ಷ ತುಳಸಿ ವಿವಾಹದ ದಿನದಂದು ಮೂರು ಮಂಗಳಕರ ಯೋಗಗಳು ರೂಪುಗೊಳ್ಳುತ್ತಿವೆ. ಅದರೊಂದಿಗೆ ಪ್ರದೋಷ ವ್ರತ ಮತ್ತು ಶುಕ್ರವಾರವೆಂಬ ಶುಭಘಳಿಗೆಯೂ ಬಂದಿದೆ. ಈ ಸಂದರ್ಭದಲ್ಲಿ ಭಗವಾನ್ ವಿಷ್ಣುವಿನ ಆಶೀರ್ವಾದವನ್ನು ಸಹ ಪಡೆಯಬಹುದು. ಜೊತೆಗೆ ಲಕ್ಷ್ಮಿ ದೇವಿಯ ಕೃಪೆಯಿಂದ ಸಂಸಾರದಲ್ಲಿ ಸುಖ-ಸಮೃದ್ಧಿ ಹೆಚ್ಚುತ್ತದೆ. ಮಹಾ ಶಿವನ ಕೃಪೆಯಿಂದ ಎಲ್ಲಾ ದುಃಖಗಳು ದೂರವಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಈ ವರ್ಷ ತುಳಸಿ ವಿವಾಹವು ನವೆಂಬರ್ 24 ಶುಕ್ರವಾರದಂದು ಬರುತ್ತಿದೆ. ಅಂದು ಶುಕ್ರ ಪ್ರದೋಷ ಉಪವಾಸವಿದ್ದು, ಇದಲ್ಲದೇ ಶುಕ್ರವಾರದಂದು ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ತುಳಸಿಯ ವಿವಾಹವು ಕುಟುಂಬಕ್ಕೆ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತಂದರೆ, ಲಕ್ಷ್ಮಿಯ ಅನುಗ್ರಹದಿಂದ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ ಲಕ್ಷ್ಮಿ ದೇವಿಯೇ ಸ್ವತಃ ತುಳಸಿಯಲ್ಲಿ ನೆಲೆಸಿದ್ದಾಳೆಂದು ಪರಿಗಣಿಸಲಾಗಿದೆ. ಇನ್ನೊಂದೆಡೆ ಶುಕ್ರ ಪ್ರದೋಷದಂದು ಶಿವನ ಆರಾಧನೆಯಿಂದ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.
ನವೆಂಬರ್ 24 ರಂದು ತುಳಸಿ ವಿವಾಹ ಮತ್ತು ಶುಕ್ರ ಪ್ರದೋಷ ಉಪವಾಸದ ದಿನದಂದು 3 ಶುಭ ಯೋಗಗಳು ರೂಪುಗೊಳ್ಳುತ್ತವೆ. ಅವುಗಳೆಂದರೆ ಅಮೃತ ಸಿದ್ಧಿ ಯೋಗ, ಸರ್ವಾರ್ಥ ಸಿದ್ಧಿ ಯೋಗ ಮತ್ತು ಸಿದ್ಧಿ ಯೋಗ. ದಿನವಿಡೀ ಸರ್ವಾರ್ಥ ಸಿದ್ಧಿ ಯೋಗವಿದ್ದು, ಈ ಹಿನ್ನೆಲೆಯಲ್ಲಿ ಈ ಶುಭಯೋಗದಂದೇ ತುಳಸಿ ವಿವಾಹ ಮತ್ತು ಶುಕ್ರ ಪ್ರದೋಷ ಉಪವಾಸ ಪೂಜೆ ನಡೆಯಲಿದೆ.
ಅಂದು ಸಿದ್ಧಿ ಯೋಗವು ಸೂರ್ಯೋದಯದಿಂದ 9.05am ವರೆಗೆ ಇರುತ್ತದೆ. ನಂತರ ವ್ಯತಿಪಟ ಯೋಗವು ಪ್ರಾರಂಭವಾಗುತ್ತದೆ. ತುಳಸಿ ವಿವಾಹದ ದಿನದಂದು ಅಮೃತ ಸಿದ್ಧಿ ಯೋಗವು ಬೆಳಿಗ್ಗೆ 6:51 ರಿಂದ ಸಂಜೆ 04:01 ರವರೆಗೆ ಇರುತ್ತದೆ. ನವೆಂಬರ್ 24 ರ ಸಂಜೆ 5:25 ರಿಂದ ತುಳಸಿ ವಿವಾಹಕ್ಕೆ ಶುಭ ಮುಹೂರ್ತವಿದೆ.
ಮಿಥುನ ರಾಶಿ: ತುಳಸಿ ಪೂಜೆಯಂದು ಮೂರು ಶುಭಯೋಗಗಳು ಗೋಚರಿಸುವುದರಿಂದ ಈ ರಾಶಿಯ ಜನರಿಗೆ ಅದೃಷ್ಟ ಕೈಹಿಡಿಯಲಿದೆ. ವೃತ್ತಿ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಈ ಶುಭಯೋಗವು ಶುಭಫಲಗಳನ್ನೇ ನೀಡಲಿದೆ. ಕೈಯಿಟ್ಟ ಕಾರ್ಯದಲ್ಲೆಲ್ಲಾ ಯಶಸ್ಸು ಇರಲಿದೆ. ಕಷ್ಟವೆಲ್ಲಾ ದೂರವಾಗಿ ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ.
ತುಲಾ ರಾಶಿ: ತುಳಸಿ ಪೂಜೆಯಂದು ತುಲಾ ರಾಶಿಯ ಜನರಿಗೆ ಮಂಗಳವಾಗಲಿದೆ. ಗೌರವ ವೃದ್ಧಿಯಾಗಲಿದೆ. ಕುಟುಂಬದಲ್ಲಿ ಖುಷಿಯ ವಾತಾವರಣ ಇರಲಿದೆ.
ಕುಂಭ ರಾಶಿ: ತುಳಸಿ ವಿವಾಹದ ದಿನವೇ ಸರ್ವಾರ್ಥ ಸಿದ್ಧಿ ಯೋಗ ಮತ್ತು ರವಿ ಯೋಗವಿರಲಿದ್ದು, ಈ ರಾಶಿಯ ಜನರಿಗೆ ಅದೃಷ್ಟ ಕೈಹಿಡಿಯಲಿದೆ. ಶತ್ರುಕಾಟದಿಂದ ಮುಕ್ತಿ ಸಿಗುವುದಲ್ಲದೆ,ಆರ್ಥಿಕ ಸ್ಥಿತಿ ಸುಧಾರಿಸಲಿದೆ.
(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯದಿರಿ)