ಮನೆಯಲ್ಲಿ ಯಾವ ಸ್ಥಳದಲ್ಲಿ ದೀಪವನ್ನು ಹಚ್ಚುವುದರಿಂದ ಏನು ಲಾಭವಾಗುತ್ತದೆ ನೋಡೋಣ .
ಬೆಂಗಳೂರು : ಮನೆಯಲ್ಲಿ ನಿತ್ಯ ಪೂಜೆ ಮಾಡಲಾಗದಿದ್ದರೆ ಕೊನೆಯ ಪಕ್ಷ ಪ್ರತಿನಿತ್ಯ ದೀಪ ಹಚ್ಚಬೇಕು. ಹೀಗೆ ಮಾಡುವುದರಿಂದ ದೇವಾದಿ ದೇವತೆಗಳ ಜೊತೆಗೆ ಪೂರ್ವಜರು ಕೂಡಾ ಪ್ರಸನ್ನರಾಗುತ್ತಾರೆ ಎಂದು ಹೇಳಲಾಗುತ್ತದೆ. ಆದರೆ ಮನೆಯಲ್ಲಿ ಯಾವ ಸ್ಥಳದಲ್ಲಿ ದೀಪವನ್ನು ಹಚ್ಚುವುದರಿಂದ ಏನು ಲಾಭವಾಗುತ್ತದೆ ನೋಡೋಣ .
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಧಾರ್ಮಿಕ ನಂಬಿಕೆಯ ಪ್ರಕಾರ, ತಾಯಿ ಅನ್ನಪೂರ್ಣ ಮನೆಯ ಅಡುಗೆಮನೆಯಲ್ಲಿ ವಾಸಿಸುತ್ತಾಳೆ. ಒಲೆಯ ಎರಡೂ ಬದಿಯಲ್ಲಿ ದೀಪವನ್ನು ಬೆಳಗಿದರೆ ತಾಯಿ ಅನ್ನಪೂರ್ಣ ಪ್ರಸನ್ನಳಾಗುತ್ತಾಳೆ. ಮನೆಯಲ್ಲಿ ಅನ್ನದ ಕೊರತೆ ಕಾಣುವುದೇ ಇಲ್ಲ.
ಶುಕ್ರವಾರ ಸಂಜೆ ಮನೆಯ ಈಶಾನ್ಯದಲ್ಲಿ ತುಪ್ಪದ ದೀಪವನ್ನು ಹಚ್ಚುವುದು ಶುಭ. ದೀಪದಲ್ಲಿ ಕೆಂಪು ಬಣ್ಣದ ಬತ್ತಿಯನ್ನು ಬಳಸುವುದು ಮಂಗಳಕರ. ಆರ್ಥಿಕ ತೊಂದರೆಗಳಿಂದ ಮುಕ್ತಿ ಹೊಂದಲು ದಕ್ಷಿಣ ದಿಕ್ಕಿನಲ್ಲಿ ಎಣ್ಣೆಯ ದೀಪವನ್ನು ಹಚ್ಚಿ
ಮುಖ್ಯ ದ್ವಾರದ ಹೊರಗೆ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ದೀಪವನ್ನು ಬೆಳಗಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ.
ಪ್ರತಿದಿನ ಅಶ್ವತ ಮರಕ್ಕೆ ನೀರು ಅರ್ಪಿಸುವುದು ಮಂಗಳಕರ. ಹೀಗೆ ಮಾಡುವುದರಿಂದ , ಪಿತ್ರ ದೋಷದಿಂದ ಮುಕ್ತಿ ಸಿಗುತ್ತದೆ.
ಪೂರ್ವಜರ ಆಶೀರ್ವಾದ ಪಡೆಯಲು ದಕ್ಷಿಣ ದಿಕ್ಕಿಗೆ ದೀಪವನ್ನು ಹಚ್ಚುವುದು ಮಂಗಳಕರವೆಂದು ಪರಿಗಣಿಸಲಾಗಿದೆ.