ಈ ತರಕಾರಿಯ ನಿಯಮಿತ ಸೇವನೆ ಧೂಮಪಾನದಿಂದಾಗುವ ಹಾನಿಯನ್ನು ತಪ್ಪಿಸುತ್ತದೆ..!

Benifits Of Tomato : ತರಕಾರಿಗಳು ನಮ್ಮ ದೇಹಕ್ಕೆ ಬೇಕಾದ ಉತ್ತಮ ಅಂಶಗಳನ್ನು ನೀಡುತ್ತವೆ. ನಿಯಮಿತವಾಧ ತರಕಾರಿಯ ಸೇವನೆಯು ನಮ್ಮ ದೇಹವನ್ನು ಸದೃಡ ಹಾಗೂ ಆರೋಗ್ಯಕರವಾಗಿರುವಂತೆ ಮಾಡುತ್ತವೆ. ಅದರಲ್ಲೂ ಕೆಲವು ತರಕಾರಿಗಳು ಔಷಧ ಗುಣಗಳನ್ನು ಹೊಂದಿವೆ. 
 

ಧುಮಪಾನ ಎನ್ನುವುದು ಇತ್ತೀಚೆಗೆ ಸಾಮಾನ್ಯವಾದ ವಿಷಯವಾಗಿದೆ. ಚಿಕ್ಕವರಿಂದ ದೊಡ್ಡವರವರೆಗೂ ಎಲ್ಲರೂ ಧೂಮಪಾನವನ್ನು ಮಾಡುತ್ತಿದ್ದಾರೆ. ಇದರಿಂದ ಅವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಆರೋಗ್ಯ ಸಂಭಂದಿತ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಇವುಗಳಿಗೆ ನೈಸರ್ಗಿಕ ಪರಿಹಾರವೆಂದರೆ ನಿಯಮಿತವಾದ ತರಕಾರಿಗಳ ಸೇವನೆ. ದಿನಕ್ಕೆ ಒಂದು ಬಾರಿ ಟೊಮ್ಯಾಟೊ ಆಧಾರಿತ ಆಹಾರಗಳನ್ನು ಸೇವಿಸುವುದು ನಿಮ್ಮ ಆರೋಗ್ಯದ ಮೇಲೆ ನಂಬಲಾಗದಷ್ಟು ಪ್ರಯೋಜನಕಾರಿ ಪರಿಣಾಮವನ್ನು ಬೀರುತ್ತದೆ. ಇದು ಹೃದ್ರೋಗವನ್ನು ಕಡಿಮೆಗೊಳಿಸುವುದು ಮಾತ್ರವಲ್ಲ, ಪ್ರತಿದಿನ ಸೇವಿಸಿದರೆ ಸಾಕಷ್ಟು ಕಾಯಿಲೆಗಳನ್ನು ಸಮರ್ಥವಾಗಿ ತಡೆಗಟ್ಟಬಹುದು.
 

1 /4

 ನಿಯಮಿತವಾದ ಟೊಮ್ಯಾಟೋ ಸೇವನೆ ಹೃದಯ ರೋಗವನ್ನು ಕಡಿಮೆ ಮಾಡುತ್ತದೆ.   

2 /4

 ಟೊಮ್ಯಾಟೋ ಕೂಮರಿಕ್ ಆಮ್ಲ ಮತ್ತು ಕ್ಲೋರೊಜೆನಿಕ್ ಆಮ್ಲವನ್ನು ಹೊಂದಿರುತ್ತದೆ, ಇದು ಸಿಗರೇಟ್ ಹೊಗೆಯಿಂದ ಉತ್ಪತ್ತಿಯಾಗುವ ಕಾರ್ಸಿನೋಜೆನ್‌ಗಳಿಂದ ದೇಹವನ್ನು ರಕ್ಷಿಸಲು ಸಹಕಾರಿಯಾಗುತ್ತದೆ.   

3 /4

ಟೊಮ್ಯಾಟೋ ಹಣ್ಣು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.  

4 /4

ಟೊಮೆಟೊಗಳ ದೈನಂದಿನ ಸೇವನೆಯು ರಕ್ತದಲ್ಲಿನ ವಿಟಮಿನ್ ಸಿ ಪ್ರಮಾಣವನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ, ಇದು ಒತ್ತಡದ ಹಾರ್ಮೋನುಗಳ ಮಟ್ಟವನ್ನು ಪ್ರತಿಬಂಧಿಸುತ್ತದೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಆದ್ದರಿಂದ ಟೊಮೆಟೊ ರಸವನ್ನು ಕುಡಿಯುವುದು ಒತ್ತಡವನ್ನು ಕಡಿಮೆ ಮಾಡುತ್ತದೆ.