Top Biks Launched In September: ಮಾರುಕಟ್ಟೆಗೆ ಲಗ್ಗೆ ಇಟ್ಟ 4 ಹೊಚ್ಚ ಹೊಸ ಬೈಕ್ ಗಳು, ಖರೀದಿಗೆ ಗೋಲ್ಡನ್ ಚಾನ್ಸ್

Top Biks Launched In September: ನೀವು ಕೂಡ ಬೈಕ್‌ಗಳ ಅಭಿಮಾನಿಯಾಗಿದ್ದರೆ ಈ ಸುದ್ದಿ ನಿಮಗಾಗಿ. 4 ಕೂಲ್ ಬೈಕ್‌ಗಳನ್ನು ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲಾಗಿದ್ದು,  ಈ ಬೈಕ್ ಗಳು ನಿಮ್ಮ ಪ್ರಯಾಣದ ಮೋಜನ್ನು ದ್ವಿಗುಣಗೊಳಿಸಲಿವೆ. 

Top Biks Launched In September: ನೀವು ಕೂಡ ಬೈಕ್‌ಗಳ ಅಭಿಮಾನಿಯಾಗಿದ್ದರೆ ಈ ಸುದ್ದಿ ನಿಮಗಾಗಿ. 4 ಕೂಲ್ ಬೈಕ್‌ಗಳನ್ನು ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲಾಗಿದ್ದು,  ಈ ಬೈಕ್ ಗಳು ನಿಮ್ಮ ಪ್ರಯಾಣದ ಮೋಜನ್ನು ದ್ವಿಗುಣಗೊಳಿಸಲಿವೆ. ಇವುಗಳಲ್ಲಿ ಎರಡು ಬೈಕುಗಳು ಯಮಹಾ (Yamaha) ಬಿಡುಗಡೆ ಮಾಡಿದ್ದರೆ, ಒಂದು ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 (Royal Enfield Classic 350) ಮತ್ತು ಒಂದು ಟಿವಿಎಸ್ (TVS Raider 125) ಈ ಬೈಕ್‌ಗಳ ವೈಶಿಷ್ಟ್ಯಗಳು ಮತ್ತು ಬೆಲೆಯ ಬಗ್ಗೆ ವಿವರವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

 

ಇದನ್ನೂ ಓದಿ-Electric Bikes List : ಭಾರತದಲ್ಲಿ ಸಧ್ಯ ಲಭ್ಯವಿರುವ ಈ 5 ಎಲೆಕ್ಟ್ರಿಕ್ ಬೈಕುಗಳು ಈಗಲೇ ಬುಕ್ ಮಾಡಿ : ಇಲ್ಲಿದೆ ಅವುಗಳ ಬೆಲೆ, ಸ್ಪೀಡ್ ಲಿಮಿಟ್ ಇತರೆ ಮಾಹಿತಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. Royal Enfield Classic 350 - ಮೊದಲಿಗೆ, 2021 ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬಗ್ಗೆ ಮಾತನಾಡೋಣ. ಇದೊಂದು ಶಕ್ತಿಯುತ ಬೈಕ್ ಆಗಿದೆ. ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ ಬೈಕ್ 349 ಸಿಸಿ ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್, ಏರ್ ಕೂಲ್ಡ್ ಡಿಒಎಚ್ ಸಿ ಎಂಜಿನ್ ಹೊಂದಿದೆ. ಇದರ ಹೊರತಾಗಿ, ಎಂಜಿನ್ 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಹೊಂದಿದ್ದು, ಇದು 13 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಅನ್ನು ಸಹ ಹೊಂದಿದೆ. ಭಾರತೀಯ ಮಾರುಕಟ್ಟೆಯಲ್ಲಿ ಇದರ ಆರಂಭಿಕ ಎಕ್ಸ್ ಶೋ ರೂಂ ಬೆಲೆ ರೂ 1.84 ಲಕ್ಷ, ಇದು ರೂ 2.51 ಲಕ್ಷಕ್ಕೆ ತಲುಪುತ್ತದೆ.

2 /5

2. TVS Raider 125 - ಟಿವಿಎಸ್ ರೈಡರ್ 125 ಬಗ್ಗೆ ಹೇಳುವುದಾದರೆ, ಇದು 124.8 ಸಿಸಿ ಸಿಂಗಲ್ ಸಿಲಿಂಡರ್, ಏರ್ ಮತ್ತು ಆಯಿಲ್ ಕೂಲ್ಡ್ ಎಸ್‌ಐ ಎಂಜಿನ್ ಹೊಂದಿದೆ. ಈ ಎಂಜಿನ್ ನಲ್ಲಿ ಐದು ಸ್ಪೀಡ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ ಮತ್ತು ಇದರ ಪೆಟ್ರೋಲ್ ಟ್ಯಾಂಕ್ ಸಾಮರ್ಥ್ಯ 10 ಲೀಟರ್ ಆಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಟಿವಿಎಸ್ ರೈಡರ್ 125 ಆರಂಭಿಕ ಎಕ್ಸ್ ಶೋರೂಂ ಬೆಲೆ 98,234 ರೂ

3 /5

3. Yamaha R15M - ಯಮಹಾ ಆರ್ 15 ಎಂ, 155 ಸಿಸಿ, 4-ಸ್ಟ್ರೋಕ್, ಲಿಕ್ವಿಡ್ ಕೂಲ್ಡ್, 4 ವಾಲ್ವ್, ಎಸ್‌ಒಎಚ್‌ಸಿ ಎಂಜಿನ್ ಲಭ್ಯವಿದ್ದು, ಇದು 10000 ಆರ್‌ಪಿಎಂನಲ್ಲಿ 18.4 ಪಿಎಸ್ ಗರಿಷ್ಠ ಶಕ್ತಿಯನ್ನು ಮತ್ತು 7500 ಆರ್‌ಪಿಎಂನಲ್ಲಿ 14.2 ಎನ್ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಇದು ಬಹು ಡಿಸ್ಕ್‌ಗಳೊಂದಿಗೆ 6-ಸ್ಪೀಡ್ ಟ್ರಾನ್ಸ್‌ಮಿಷನ್ ಅನ್ನು ಸಹ ಹೊಂದಿದೆ . ಅಲ್ಲದೆ, 11 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಕೂಡ ಇದರಲ್ಲಿ ಲಭ್ಯವಿದೆ. ಭಾರತೀಯ ಮಾರುಕಟ್ಟೆಯಲ್ಲಿ ಯಮಹಾ ಆರ್ 15 ಎಂ ಎಕ್ಸ್ ಶೋರೂಂ ಬೆಲೆ 1,79,800 ರೂ. ಆಗಿದೆ.

4 /5

4. Yamaha R15M V4 - ಯಮಹಾ ಆರ್ 15 ವಿ 4 ಅನ್ನು 155 ಸಿಸಿ, 4 ವಾಲ್ವ್, 4-ಸ್ಟ್ರೋಕ್, ಲಿಕ್ವಿಡ್ ಕೂಲ್ಡ್ ಎಸ್‌ಒಎಚ್‌ಸಿ ಎಂಜಿನ್ ಹೊಂದಿದೆ. ಇದು ಬಹು ಡಿಸ್ಕ್ಗಳೊಂದಿಗೆ 6 ಸ್ಪೀಡ್ ಟ್ರಾನ್ಸ್ಮಿಷನ್ ಪಡೆಯುತ್ತದೆ. ಇದರೊಂದಿಗೆ, 11 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಅನ್ನು ಸಹ ಸ್ಥಾಪಿಸಲಾಗಿದೆ. ಬೈಕಿನ ಎಕ್ಸ್ ಶೋರೂಂ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ 1,72,800 ರೂ. ಆಗಿದೆ .

5 /5

5. ಯಾವ ಬೈಕ್ ನಿಮ್ಮ ಫೆವರೆಟ್ ಬೈಕ್? - ಈ ನಾಲ್ಕು ಟಾಪ್ ಬೈಕ್ ಗಳ ವಿವರ ಮತ್ತು ಬೆಲೆಯನ್ನು ತಿಳಿದುಕೊಂಡು, ನಿಮ್ಮ ನೆಚ್ಚಿನ ಮೋಟಾರ್ ಸೈಕಲ್ ಅನ್ನು ನೀವು ಆಯ್ಕೆ ಮಾಡಬಹುದು. ನೀವು ವೇಗವನ್ನು ಇಷ್ಟಪಡುವವರಾಗಿದ್ದರೆ, ನಿಮಗೆ ಯಮಹಾ ಬೈಕ್ ಇಷ್ಟವಾಗಬಹುದು. ಆದರೆ ಐಷಾರಾಮಿ ಲುಕ್ ಗಾಗಿ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ ಗೆ ಸರಿಸಾಟಿ ಇಲ್ಲ.