2025ರಲ್ಲಿ ರಿಲೀಸ್‌ಗೆ ರೆಡಿಯಾಗಿರುವ ಟಾಪ್ ಸೌತ್ ಸಿನಿಮಾಗಳಿವು..! ಇವುಗಳಲ್ಲಿ ಕನ್ನಡ ಚಿತ್ರಗಳೇ ಹೆಚ್ಚು..

Upcoming movies 2025 : ಪ್ರತಿ ವರ್ಷ ಹಲವಾರು ಸಿನಿಮಾಗಳು ಬಿಡುಗಡೆಯಾಗುತ್ತವೆ. ಅವುಗಳಲ್ಲಿ ಕೆಲವು ಚಿತ್ರಗಳ ಮೇಲೆ ಹೆಚ್ಚಿನ ನಿರೀಕ್ಷೆಗಳಿರುತ್ತವೆ. ಹಿಟ್ ಡೈರೆಕ್ಟರ್‌ಗಳು, ದೊಡ್ಡ ಹೀರೋಗಳ ಸಿನಿಮಾಗಳ ಮೇಲೆ ಸಖತ್‌ ಹೈಪ್ ಇರುತ್ತೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಬನ್ನಿ ಸಧ್ಯ 2025 ರಲ್ಲಿ ಭಾರೀ ನಿರೀಕ್ಷೆಗಳನ್ನು ಹೊಂದಿರುವ ಕೆಲವು ಸೌತ್ ಚಿತ್ರಗಳು ಯಾವುವು ನೋಡೋಣ.. 

1 /10

Thandel movie : ʼತಾಂಡೇಲ್‌ʼ ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಕಾಂಬಿನೇಷನ್‌ನಲ್ಲಿ ರಿಲೀಸ್‌ಗೆ ರೆಡಿಯಾಗಿರುವ ಆಕ್ಷನ್ ಡ್ರಾಮಾ ಸಿನಿಮಾ. ಚಂದು ಮೊಂಡೇಟಿ ನಿರ್ದೇಶನದ, ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಬನ್ನಿ ವಾಸು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅಂತರಾಷ್ಟ್ರೀಯ ಕಡಲ ಗಡಿಯ ನೀರಿನಲ್ಲಿ ಮೀನು ಹಿಡಿಯಲು ಹೋಗಿ ಪಾಕಿಸ್ತಾನಿ ಸೈನಿಕ ಪಡೆಗಳಿಗೆ ಸಿಕ್ಕಿಬಿದ್ದ ಮೀನುಗಾರನ ಕಥೆಯೇ ತಾಂಡೇಲ್‌. ಈ ಚಿತ್ರವು ಫೆಬ್ರವರಿ 7, 2025 ರಂದು ಬಿಡುಗಡೆಯಾಗಲಿದೆ.  

2 /10

KD the Devil : 'ಕೆಡಿ ದಿ ಡೆವಿಲ್' ಚಿತ್ರ 2025 ರಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಆಕ್ಷನ್‌ ಪ್ರೀನ್ಸ್‌ ಧ್ರುವ ಸರ್ಜಾ, ಸಂಜಯ್ ದತ್, ಶಿಲ್ಪಾ ಶೆಟ್ಟಿ ಕುಂದ್ರಾ, ನೋರಾ ಫತೇಹಿ ಮುಂತಾದವರ ನಟಿಸಿದ್ದಾರೆ.   

3 /10

Kantara 2 : ಕಾಂತಾರ 2 2025ರಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಕಾಂತಾರ ಮೊದಲ ಭಾಗ ಹಿಟ್‌ ಆದ ನಂತರ ಈ ಸಿನಿಮಾದ ಮೇಲೆ ಭಾರೀ ನಿರೀಕ್ಷೆ ಇದೆ. ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಸಿನಿಮಾ ಕಾಂತಾರ.  

4 /10

Toxic Movie : ಕೆಜಿಎಫ್‌ ಹಿಟ್‌ ಸಕ್ಸಸ್‌ ನಂತರ ರಾಕಿಂಗ್‌ ಸ್ಟಾರ್‌ ಯಶ್‌ ಟಾಕ್ಸಿಕ್‌ ಸಿನಿಮಾದ ಮೂಲಕ ತೆರೆಗೆ ಬರಲು ರೆಡಿಯಾಗಿದ್ದಾರೆ. ಈ ಚಿತ್ರ ಏಪ್ರೀಲ್‌ 10 2025 ರಂದು ಬಿಡುಗಡೆಯಾಗಲಿದೆ. ಗೀತು ಮೋಹನ್‌ ದಾಸ್‌ ನಿರ್ದೇಶನದ ಟಾಕ್ಸಿಕ್‌ ಸಿನಿಮಾ.  

5 /10

UI Movie : ಹೊಸ ಬಗೆಯ ಸಿನಿಮಾಗಳ ಮೂಲಕ ವಿಶೇಷ ಅಭಿಮಾನಿ ಬಳಗವನ್ನೇ ಸೃಷ್ಟಿಸಿಕೊಂಡಿರುವ ಉಪೇಂದ್ರ ಈ ಬಾರಿ ‘ಯುಐ ದಿ ಮೂವಿ’ ನಿರ್ದೇಶನ ಮಾಡಿದ್ದಾರೆ. ಉಪೇಂದ್ರ ಅವರೇ ಬರೆದು ನಿರ್ದೇಶಿಸಿರುವ ಈ ಸೈಕಲಾಜಿಕಲ್ ಆಕ್ಷನ್ ಥ್ರಿಲ್ಲರ್ 2025 ರಲ್ಲಿ ಚಿತ್ರಮಂದಿರಗಳಲ್ಲಿ ಬರಲಿದೆ.  

6 /10

Goodachari 2 : ಅಡಿವಿ ಶೇಶ್ ಮತ್ತು ಇಮ್ರಾನ್ ಹಶ್ಮಿ ಅಭಿನಯದ ಗೂಢಚಾರಿ 2 2025 ರಲ್ಲಿ ಬಿಡುಗಡೆಯಾಗಲಿದೆ. ಇದು 2018 ರ ಹಿಟ್ ಚಲನಚಿತ್ರ ಗೂಢಚಾರಿಯ ಮುಂದುವರಿದ ಭಾಗವಾಗಿದೆ. ವಿನಯ್ ಕುಮಾರ್ ನಿರ್ದೇಶನದ ಈ ಸ್ಪೈ ಥ್ರಿಲ್ಲರ್ ಭಾರೀ ನಿರೀಕ್ಷೆಗಳನ್ನು ಹೊಂದಿದೆ.  

7 /10

Akhanda 2 : ಬಾಲಕೃಷ್ಣ ಮತ್ತು ಬೋಯಪಾಟಿ ಶ್ರೀನು ಕಾಂಬಿನೇಷನ್‌ನಲ್ಲಿ ಬಂದ ಹಿಟ್ ಸಿನಿಮಾ ಅಖಂಡದ ಮುಂದುವರಿದ ಭಾಗವಾಗಿ 'ಅಖಂಡ 2'. ಪ್ರಜ್ಞಾ ಜೈಸ್ವಾಲ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಮ್ ಅಚಂತಾ ಮತ್ತು ಗೋಪಿ ಅಚಂತಾ ನಿರ್ಮಿಸಿರುವ ಈ ಚಿತ್ರ 2025 ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.  

8 /10

The India House movie : ಕಾರ್ತಿಕೇಯ ಸರಣಿಯ ಮೂಲಕ ದೇಶಾದ್ಯಂತ ಜನಪ್ರಿಯತೆ ಗಳಿಸಿರುವ ತೆಲುಗು ಹೀರೋ ನಿಖಿಲ್ ಸಿದ್ಧಾರ್ಥ್, ಸಾಯಿ ಮಂಜ್ರೇಕರ್ ಕಾಂಬೋದಲ್ಲಿ 'ದಿ ಇಂಡಿಯಾ ಹೌಸ್' ಸಿನಿಮಾ ಮೂಡಿಬರುತ್ತಿದೆ. ಸ್ವಾತಂತ್ರ್ಯ ಪೂರ್ವದ ಕಥೆಯನ್ನು ಇಟ್ಟುಕೊಂಡು ನಿರ್ದೇಶಕ ರಾಮ್ ವಂಶಿ ಕೃಷ್ಣ ಈ ಸಿನಿಮಾ ಮಾಡುತ್ತಿದ್ದಾರೆ. ಮುಂದಿನ ವರ್ಷ ಚಿತ್ರ ಥಿಯೇಟರ್‌ಗಳಿಗೆ ಬರಲಿದೆ.  

9 /10

Ghaati movie : ಕ್ರಿಶ್ ಜಗರ್ಲಮುಡಿ ನಿರ್ದೇಶನದ, ಅನುಷ್ಕಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿರುವ 'ಘಾಟಿ' 2025 ರಲ್ಲಿ ಬಿಡುಗಡೆಯಾಗಲಿದೆ. ಕೆಲ ದಿನಗಳ ಹಿಂದೆ ಬಿಡುಗಡೆಯಾದ ಟೀಸರ್ ನಲ್ಲಿ ಅನುಷ್ಕಾ ಅಗ್ರೆಸಿವ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ ಈ ಸಿನಿಮಾದ ಮೇಲೆ ಭಾರೀ ನಿರೀಕ್ಷೆ ಹುಟ್ಟಿಕೊಂಡಿದೆ.  

10 /10

Bison Movie : ಧ್ರುವ ವಿಕ್ರಮ್ ಮತ್ತು ಅನುಪಮಾ ಪರಮೇಶ್ವರನ್ ಅಭಿನಯದ ತಮಿಳಿನ 'ಬೈಸನ್' ಭಾರೀ ನಿರೀಕ್ಷೆಯನ್ನು ಹೊಂದಿದೆ. ಮಾರಿ ಸೆಲ್ವರಾಜ್ ನಿರ್ದೇಶನದ ಈ ಸ್ಪೋರ್ಟ್ಸ್ ಡ್ರಾಮಾ 2025 ರಲ್ಲಿ ಬಿಡುಗಡೆಯಾಗಲಿದೆ.