Shani Sanchara in November: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿಯು ಕುಂಭ ರಾಶಿಯಲ್ಲಿ ಸಾಗುವುದರಿಂದ ಅಷ್ಟಮ ಶನಿಯು ಕರ್ಕಾಟಕ ರಾಶಿಯ 8ನೇ ಮನೆಯಲ್ಲಿ ಶನಿಯು ಚಲಿಸುವುದರೊಂದಿಗೆ ಮತ್ತು ಅರ್ಥಾಷ್ಟಮ ಶನಿಯು ವೃಶ್ಚಿಕ ರಾಶಿಯ 4ನೇ ಮನೆಯಲ್ಲಿ ಚಲಿಸುವ ಮೂಲಕ ಪ್ರಾರಂಭವಾಗುತ್ತದೆ. ಅಂದರೆ ನವೆಂಬರ್ ಅಂತ್ಯದಲ್ಲಿ ಶನಿ ಸಂಚಾರ ಅಂತ್ಯವಾಗಲಿದೆ.
Shani Sanchara in November: ನವೆಂಬರ್ ತಿಂಗಳಿನಲ್ಲಿ ಸಾಲು ಸಾಲು ಹಿಂದೂ ಹಬ್ಬಗಳು ಬರಲಿದ್ದು, ತಾಯಿ ದುರ್ಗಾದೇವಿಯ ಆರಾಧನೆ ನಡೆಯಲಿದೆ. ಹೀಗಾಗಿ ಹಬ್ಬಗಳ ಪಾಲಿಗೆ ಈ ತಿಂಗಳು ಬಹಳ ಮುಖ್ಯ. ಅದೇ ರೀತಿ ಜ್ಯೋತಿಷ್ಯದ ದೃಷ್ಟಿಯಂದಲೂ ಈ ತಿಂಗಳು ಬಹಳ ಮುಖ್ಯ ಎನಿಸಿದೆ. ಏಕೆಂದರೆ ಈ ತಿಂಗಳಲ್ಲಿ ಶನಿಯ ಸಂಚಾರದಿಂದ ದೊಡ್ಡ ಬದಲಾವಣೆಯಾಗಲಿದೆ. ಇದು ಕೆಲವು ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಹಾಗಾದ್ರೆ ನವೆಂಬರ್ನಲ್ಲಿ ಶನಿ ಸಂಚಾರದಿಂದ ಯಾವ ರಾಶಿಗಳಿಗೆ ಶುಭ ಹಾಗೂ ಅಶುಭವೆಂದು ತಿಳಿಯಿರಿ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಶನಿಯು ಪ್ರಸ್ತುತ ಕುಂಭ ರಾಶಿಯಲ್ಲಿ ಸಾಗುತ್ತಿದ್ದಾನೆ. ಈ ರಾಶಿಯನ್ನು ಪ್ರವೇಶಿಸುವುದರಿಂದ ಕೆಲ ರಾಶಿಗಳಿಗೆ ಅಷ್ಟಮ ಶನಿ, ಅರ್ಥಾಷ್ಟಮ ಶನಿಯ ಪ್ರಭಾವ ಬೀರಲಿದೆ. ನವೆಂಬರ್ ತಿಂಗಳಿನಲ್ಲಿ ಶನಿಯು ವಕ್ರ ಚಲನೆಯಲ್ಲಿರುತ್ತಾನೆ. ಹೀಗಾಗಿ ಶನಿಯಿಂದ ಉಂಟಾಗುವ ಹಲವು ಕಷ್ಟಗಳು ದೂರಾಗಲಿದೆ. ಈ ರಾಶಿಯವರು ಪ್ರಗತಿ ಸಾಧಿಸಲಿದ್ದು, ಅವರ ಆರ್ಥಿಕ ಪರಿಸ್ಥತಿಯು ಉತ್ತಮವಾಗಿ ಸುಧಾರಿಸಲಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿಯು ಕುಂಭ ರಾಶಿಯಲ್ಲಿ ಸಾಗುವುದರಿಂದ ಅಷ್ಟಮ ಶನಿಯು ಕರ್ಕಾಟಕ ರಾಶಿಯ 8ನೇ ಮನೆಯಲ್ಲಿ ಶನಿಯು ಚಲಿಸುವುದರೊಂದಿಗೆ ಮತ್ತು ಅರ್ಥಾಷ್ಟಮ ಶನಿಯು ವೃಶ್ಚಿಕ ರಾಶಿಯ 4ನೇ ಮನೆಯಲ್ಲಿ ಚಲಿಸುವ ಮೂಲಕ ಪ್ರಾರಂಭವಾಗುತ್ತದೆ. ಅಂದರೆ ನವೆಂಬರ್ ಅಂತ್ಯದಲ್ಲಿ ಶನಿ ಸಂಚಾರ ಅಂತ್ಯವಾಗಲಿದೆ. ಹೀಗಾಗಿ ಈ ರಾಶಿಯ ಜನರಿಗೆ ಅದೃಷ್ಟ ಬದಲಾಗಲಿದೆ. ಉದ್ಯಮಿಗಳಿಗೆ ಉತ್ತಮ ಆರ್ಥಿಕ ಲಾಭ ದೊರೆಯಲಿದೆ. ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯಲಿದೆ. ಹಣಕಾಸು ಸಮಸ್ಯೆಗಳಿಂದ ನೀವು ದೂರಾಗುವ ಸಂಭವವಿದೆ. ನವೆಂಬರ್ 15ರಂದು, ಶನಿಯು ಕುಂಭ ರಾಶಿಯಲ್ಲಿ ಸಂಜೆ 5.9ಕ್ಕೆ ಸಂಚರಿಸುತ್ತಾನೆ. ಹೀಗಾಗಿ ಯಾವ ರಾಶಿಯವರು ಲಾಭ ಪಡೆಯುತ್ತಾರೆ ಅನ್ನೋದರ ಬಗ್ಗೆ ತಿಳಿದುಕೊಳ್ಳಿರಿ.
ಶನಿಯು ಕುಂಭ ರಾಶಿಯ ಚಲನೆಯು ಮಿಥುನ ರಾಶಿಯವರಿಗೆ ಅನುಕೂಲಕರವಾಗಲಿದೆ. ಮಿಥುನ ರಾಶಿ ಜನರು ಅದೃಷ್ಟದ ಬೆಂಬಲವನ್ನು ಪಡೆಯಲಿದ್ದಾರೆ. ವಿವಿಧ ಕ್ಷೇತ್ರದಲ್ಲಿ ನೀವು ಯಶಸ್ಸು ಸಾಧಿಸುವ ಸಾಧ್ಯತೆ ಇದೆ. ನೀವು ಪಟ್ಟಿರುವ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ಸಮಯ ಇದಾಗಿರುತ್ತದೆ. ಹಠಾತ್ ಆಗಿ ಆರ್ಥಿಕ ಲಾಭ ಹೆಚ್ಚಾಗಿವ ಸಂಭವ ಇರುತ್ತದೆ. ಈಗಿರುವ ಜವಾಬ್ದಾರಿಯೊಂದಿಗೆ ಮತ್ತಷ್ಟು ಜವಾಬ್ದಾರಿ ಹೆಚ್ಚಾಗುತ್ತದೆ. ಶೀಘ್ರವೇ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯುತ್ತೀರಿ.
ಮಿಥುನ ರಾಶಿಯಲ್ಲಿ ಶನಿಯು ನೇರವಾಗಿ ಸಂಚರಿಸುವುದರಿಂದ ಸಿಂಹ ರಾಶಿಯವರ ಸಂಪತ್ತು ಹೆಚ್ಚಾಗುತ್ತದೆ. ಇದು ಅವರ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುತ್ತದೆ. ನಿಮ್ಮ ಆದಾಯದ ಮಟ್ಟದಲ್ಲಿ ಭಾರೀ ಏರಿಕೆಯಾಗುತ್ತದೆ. ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯುತ್ತೀರಿ. ನಿಮಗೆ ವಾಹನ ಖರೀದಿಯ ಭಾಗ್ಯವಿದೆ. ಬಡ್ತಿ, ವೇತನ ಹೆಚ್ಚಳ, ಸೌಲಭ್ಯಗಳ ವೃದ್ಧಿ ಮತ್ತು ಸಂಪತ್ತು ಏರಿಕೆಯ ಅದೃಷ್ಟ ನಿಮಗಿರುತ್ತದೆ.
ನಿಮ್ಮ ಕುಟುಂಬದಲ್ಲಿ ಕೆಲ ಧಾರ್ಮಿಕ ಅಥವಾ ಮಂಗಳಕರ ಕಾರ್ಯಕ್ರಮಗಳನ್ನು ಆಯೋಜಿಸುವ ಸಾಧ್ಯತೆಗಳಿವೆ. ಕನ್ಯಾ ರಾಶಿಯ ಜನರಿಗೆ ಶನಿಯು ಒಳಿತು ಮಾಡುವ ಸಮಯ ಸನ್ನಿಹಿತವಾಗಿದೆ. ಈ ಕಾಲದಲ್ಲಿ ನೀವು ಮಾಡುವ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಗಳಿಸಬಹುದು. ಪ್ರವಾಸ, ಶಿಕ್ಷಣ, ವೃತ್ತಿ & ಆರೋಗ್ಯದಲ್ಲಿ ನೀವು ಸುಧಾರಣೆ ಕಾಣುತ್ತೀರಿ.
ಮಂಗಳ ಗ್ರಹವು ವೃಶ್ಚಿಕ ರಾಶಿಯ ಆಡಳಿತ ಗ್ರಹ. ಹೀಗಾಗಿ ಶನಿಗೆ ಇದು ನೇರವಾಗಿ ಸಂಬಂಧಿಸಿದೆ. ಈ ರಾಶಿಯವರಿಗೆ ಆರೋಗ್ಯದಲ್ಲಿ ಮಹತ್ತರ ಬದಲಾವಣೆ ಕಾಣಬಹುದು. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣಬಹುದು. ವಾಹನ ಲಾಭ, ಆಸ್ತಿ ಖರೀದಿ, ಶುಭ ಕಾರ್ಯಗಳು ನಡೆಯಲಿದೆ. ಎಲ್ಲಾ ಕ್ಷೇತ್ರಗಳಲ್ಲಿ ನಿಮಗೆ ದೊಡ್ಡ ಯಶಸ್ಸು ಸಿಗಲಿದೆ.
ಶನಿಯು ಮಕರ ರಾಶಿಯ ಆಡಳಿತ ಗ್ರಹ, ಹೀಗಾಗಿ ಮಕರ ರಾಶಿಯ ಜನರಿಗೆ ಇದು ಫಲಪ್ರದ. ನೀವು ಅಂದುಕೊಂಡಿರುವ ಮಹತ್ವದ ಕಾರ್ಯಗಳು ಪೂರ್ಣಗೊಳ್ಳುವ ಸಕಾಲವಿದು. ಹಣಕ್ಕೆ ಸಂಬಂಧಿಸಿದ ಎಲ್ಲಾ ತೊಂದರೆಗಳು ಈಗ ದೂರವಾಗುತ್ತವೆ. ಶತ್ರುಗಳ ಮೇಲೆ ನೀವು ಮೇಲುಗೈ ಸಾಧಿಸುವ ಸಾಧ್ಯತೆ ಇದೆ. ಶೀಘ್ರವೇ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯುತ್ತೀರಿ.