ಕುಂಭ ರಾಶಿಯಲ್ಲಿ ಸೂರ್ಯ & ಶುಕ್ರನ ಸಂಕ್ರಮಣ: ಈ ಮೂರು ರಾಶಿಯವರಿಗೆ ಆರ್ಥಿಕ ನಷ್ಟ, ಬಡತನ ಬರಲಿದೆ!

Transit of Sun & Venus in Aquarius: ಶುಕ್ರ ಮತ್ತು ಸೂರ್ಯ ಇಬ್ಬರೂ ಕನ್ಯಾ ರಾಶಿಯಲ್ಲಿ ಒಟ್ಟಿಗೆ ಇರುವುದರಿಂದ ಕೆಲವು ರಾಶಿಗಳ ಮೇಲೆ ಕೆಟ್ಟ ಪರಿಣಾಮ ಬೀರಲಿದೆ.

Transit of Sun & Venus in Aquarius: ಗ್ರಹಗಳ ರಾಜನಾದ ಸೂರ್ಯನು ತನ್ನ ರಾಶಿಯನ್ನು ಬದಲಾಯಿಸಿದ್ದಾನೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಸೆಪ್ಟೆಂಬರ್ 16ರ ಸಂಜೆ 7.52ಕ್ಕೆ ಆತ್ಮಕ್ಕೆ ಕಾರಣವಾದ ಗ್ರಹವಾದ ಸೂರ್ಯನು ಕನ್ಯಾ ರಾಶಿಗೆ ಪ್ರವೇಶಿಸಿದ್ದಾನೆ. ಪ್ರೀತಿ ಮತ್ತು ಕಲೆಗೆ ಕಾರಣವಾದ ಗ್ರಹವಾದ ಶುಕ್ರವು ಈಗಾಗಲೇ ಈ ರಾಶಿಯಲ್ಲಿದೆ. ಶುಕ್ರ ಮತ್ತು ಸೂರ್ಯ ಇಬ್ಬರೂ ಕನ್ಯಾ ರಾಶಿಯಲ್ಲಿ ಒಟ್ಟಿಗೆ ಇರುವುದರಿಂದ ಕೆಲವು ರಾಶಿಗಳ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಎರಡು ಪ್ರಭಾವಿ ಗ್ರಹಗಳ ಸಂಯೋಗವಿದ್ದಲ್ಲಿ ಅದು ಪ್ರತಿ ರಾಶಿಗಳ ಮೇಲೂ ಆಳವಾದ ಅಶುಭ ಮತ್ತು ಮಂಗಳಕರ ಪರಿಣಾಮ ಬೀರುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /3

ಕನ್ಯಾ ರಾಶಿಯಲ್ಲಿ ಸೂರ್ಯ-ಶುಕ್ರ ಸಂಯೋಗದಿಂದ ಮಿಥುನ ರಾಶಿಯವರಿಗೆ ಶುಭಕಾಲ ಆರಂಭವಾಗಿದೆ. ಇದರ ಜೊತೆಗೆ ಈ ರಾಶಿಯವರಿಗೆ ಕೆಟ್ಟ ಕಾಲವೂ ಶುರುವಾಗಲಿದೆ. ಈ ಸಮಯದಲ್ಲಿ ನೀವು ತೆಗೆದುಕೊಂಡ ಆತುರದ ನಿರ್ಧಾರಗಳು ಭವಿಷ್ಯದಲ್ಲಿ ಪಶ್ಚಾತ್ತಾಪಕ್ಕೆ ಕಾರಣವಾಗಲಿದೆ. ನೀವು ಆರ್ಥಿಕ ನಷ್ಟವನ್ನು ಅನುಭವಿಸಬಹುದು. ವಿವಾಹಿತರು ಸಂಗಾತಿ ಮತ್ತು ಕುಟುಂಬ ಸದಸ್ಯರಿಂದ ಅಸಮಾಧಾನ ಎದುರಿಸಬೇಕಾಗಬಹುದು.

2 /3

ಕನ್ಯಾ ರಾಶಿಯಲ್ಲಿ ಸೂರ್ಯ-ಶುಕ್ರ ಸಂಯೋಗವು ಕರ್ಕಾಟಕ ರಾಶಿಯ ಜನರಿಗೆ ಪ್ರತಿಕೂಲವಾಗಿರುತ್ತದೆ. ನಿಮ್ಮ ಆದಾಯದಲ್ಲಿ ಹಠಾತ್ ಇಳಿಕೆಯಾಗಬಹುದು, ಇದು ನಿಮ್ಮ ಹಣಕಾಸಿನ ಪರಿಸ್ಥಿತಿಗೆ ದೊಡ್ಡ ಹೊಡೆತವನ್ನುಂಟು ಮಾಡಲಿದೆ. ವ್ಯಾಪಾರಸ್ಥರು ಹಣ ಗಳಿಸುವ ಹಾದಿಯಲ್ಲಿ ವಿವಿಧ ಸಮಸ್ಯೆ ಎದುರಿಸಬೇಕಾಗಬಹುದು. ಸ್ನೇಹಿತರೊಂದಿಗೆ ತಮಾಷೆ ಮಾಡುವುದನ್ನು ತಪ್ಪಿಸಬೇಕು. ಆರ್ಥಿಕ ಪ್ರಗತಿಗಾಗಿ ನೀವು ಕಾಯಬೇಕಾಗುತ್ತದೆ. 

3 /3

ಸೂರ್ಯ-ಶುಕ್ರ ಸಂಯೋಗವು ಮೀನ ರಾಶಿಯ ಜನರಿಗೂ ಸಹ ಅಶುಭಕರವಾಗಿದೆ. ಈ ರಾಶಿಯ ವ್ಯಾಪಾರಸ್ಥರು ತಮ್ಮ ವ್ಯವಹಾರದಲ್ಲಿ ಹಠಾತ್ ನಷ್ಟ ಅನುಭವಿಸಬಹುದು. ಈ ಕಾರಣದಿಂದ ನಿಮ್ಮ ಬ್ಯುಸಿನೆಸ್ ದಿವಾಳಿಯಾಗಬಹುದು. ವಿವಾಹಿತರು ತಮ್ಮ ಸಂಗಾತಿಯ ಮಾತನ್ನು ನಿರ್ಲಕ್ಷಿಸಿದರೆ ಮನೆಯಲ್ಲಿ ಜಗಳವಾಗುವ ಸಾಧ್ಯತೆಯಿದೆ. ನಿಮ್ಮ ಹಳೆಯ ಹೂಡಿಕೆಗಳು ಲಾಭದ ಬದಲು ನಷ್ಟವನ್ನುಂಟು ಮಾಡಬಹುದು. ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದ ನೀವು ತೊಂದರೆಗೊಳಗಾಗಬಹುದು.