Tulasi seeds for diabetes: ತುಳಸಿ ಎಲೆಗಳಂತೆ ಇದರ ಬೀಜಗಳು ಕೂಡ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅಧಿಕ ತೂಕ ನಷ್ಟ ಮತ್ತು ಮಧುಮೇಹದಂತಹ ಸಮಸ್ಯೆಗಳನ್ನು ಸಹ ಈ ತುಳಸಿ ಬೀಜ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ಈ ತುಲಸಿ ಬೀಜಗಳ ಪ್ರಯೋಜನ ಪಡೆಯುವುದು ಹೇಗೆ? ಈ ಸ್ಟೋರಿ ಓದಿ...
ತುಳಸಿ ಎಲೆಗಳಂತೆ ಇದರ ಬೀಜಗಳು ಕೂಡ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅಧಿಕ ತೂಕ ನಷ್ಟ ಮತ್ತು ಮಧುಮೇಹದಂತಹ ಸಮಸ್ಯೆಗಳನ್ನು ಸಹ ಈ ತುಳಸಿ ಬೀಜ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ಈ ತುಲಸಿ ಬೀಜಗಳ ಪ್ರಯೋಜನ ಪಡೆಯುವುದು ಹೇಗೆ? ಈ ಸ್ಟೋರಿ ಓದಿ...
ತುಳಸಿ ಗಿಡವನ್ನು ಹಿಂದೂ ಧರ್ಮದಲ್ಲಿ ಲಕ್ಷ್ಮಿ ದೇವಿ ಎಂದು ಪರಿಗಣಿಸಲಾಗುತ್ತದೆ. ಪ್ರತಿಯೊಂದು ಮನೆಯಲ್ಲಿಯೂ ತುಳಸಿ ಗಿಡವನ್ನು ಇಟ್ಟು ಪ್ರತಿದಿನ ಪೂಜಿಸುತ್ತಾರೆ. ತುಳಸಿ ಸಸ್ಯವು ಧಾರ್ಮಿಕ ಮಹತ್ವವನ್ನು ಮಾತ್ರವಲ್ಲದೆ ಆಯುರ್ವೇದದ ಮಹತ್ವವನ್ನೂ ಹೊಂದಿದೆ. ತುಳಸಿ ಎಲೆಯಲ್ಲಿರುವ ಔಷಧೀಯ ಗುಣಗಳು ದೇಹವನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ. ತುಳಸಿ ಎಲೆಗಳ ಆರೋಗ್ಯ ಪ್ರಯೋಜನಗಳು ಅನೇಕರಿಗೆ ತಿಳಿದಿವೆ. ಆದರೆ ತುಳಸಿ ಎಲೆಗಳಂತೆ ಇದರ ಬೀಜಗಳು ಕಾಳುಗಳು ಕೂಡ ಹಲವಾರು ಔಷಧೀಯ ಗುಣಗಳನ್ನು ಹೊಂದಿವೆ.
ತುಳಸಿ ಬೀಜಗಳನ್ನು ಫಲೂಡಾ ಬೀಜಗಳು, ತುಕ್ಮರಿ ಬೀಜಗಳು ಎಂದೂ ಸಹ ಕರೆಯುತ್ತಾರೆ. ತುಳಸಿ ಬೀಜಗಳು ಫೈಬರ್, ಅಗತ್ಯ ಕೊಬ್ಬಿನಾಮ್ಲಗಳು, ಉತ್ಕರ್ಷಣ ನಿರೋಧಕಗಳು, ಕಬ್ಬಿಣ ಮತ್ತು ಮೆಗ್ನೀಸಿಯಮ್ನಂತಹ ಪೋಷಕಾಂಶಗಳನ್ನು ಹೊಂದಿರುತ್ತವೆ. ಇವು ಅನೇಕ ಅದ್ಭುತ ಆರೋಗ್ಯ ಪ್ರಯೋಜನಗಳನ್ನು ನಮ್ಮ ದೇಹಕ್ಕೆ ಒದಗಿಸುತ್ತದೆ.
ಇದು ವ್ಯಕ್ತಿಯ ಜೀರ್ಣಕ್ರಿಯೆಯನ್ನು ಸುಧಾರಿಸುವುದಷ್ಟೆ ಅಲ್ಲದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಧಿಕ ತೂಕವನ್ನು ಕಡಿಮೆ ಮಾಡುತ್ತದೆ. ಕೆಮ್ಮು ಮತ್ತು ಶೀತದಿಂದ ರಕ್ಷಿಸುತ್ತದೆ. ತುಳಸಿ ಬೀಜಗಳನ್ನು ಆಹಾರದಲ್ಲಿ ನಿಯಮಿತವಾಗಿ ಸೇರಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ.
ನಿಮ್ಮ ದೈನಂದಿನ ಆಹಾರದ ಭಾಗವಾಗಿ ತುಳಸಿ ಬೀಜಗಳನ್ನು ಸೇವಿಸುವುದರಿಂದ ನೀವು ಬೇಗನೆ ತೂಕವನ್ನು ಕಳೆದುಕೊಳ್ಳಬಹುದು. ಇದಕ್ಕಾಗಿ ತುಳಸಿ ಬೀಜಗಳನ್ನು ಸಂಗ್ರಹಿಸಿ ನೀರಿನಲ್ಲಿ ಕುದಿಸಿ. ಈ ನೀರನ್ನು ಸೋಸಿಕೊಂಡು ಬಿಸಿಯಾಗಿ ಕುಡಿಯಿರಿ. ಬೆಳಿಗ್ಗೆ ಎದ್ದ ಒಡನೆ ಈ ನೀರನ್ನು ಕುಡಿಯುವುದರಿಂದ ಇದು ನಿಮಗೆ ಉತ್ತಮ ಪಲಿತಾಂಶವನ್ನು ನೀಡುತ್ತದೆ. ಈ ನೀರಿನಲ್ಲಿ ಫೈಬರ್ ಸಮೃದ್ಧವಾಗಿದೆ, ಇದು ಚಯಾಪಚಯವನ್ನು ಹೆಚ್ಚಿಸುವ ಮೂಲಕ ಕೊಬ್ಬನ್ನು ಕರಗಿಸುವಲ್ಲಿ ಹೆಚ್ಚು ಸಹಾಯ ಮಾಡುತ್ತದೆ.
ಇದಲ್ಲದೆ, ತುಳಸಿ ಬೀಜಗಳಲ್ಲಿ ಆಲ್ಫಾ ಲಿನೋಲೆನಿಕ್ ಆಮ್ಲ, ಒಮೆಗಾ 3 ಕೊಬ್ಬಿನಾಮ್ಲ ಕಂಡುಬರುತ್ತದೆ. ಈ ಎರಡೂ ಗುಣಲಕ್ಷಣಗಳು ಕೊಬ್ಬನ್ನು ಸುಡುವಲ್ಲಿ ಸಹಾಯ ಮಾಡುತ್ತದೆ.
ದುರ್ಬಲ ರೋಗನಿರೋಧಕ ವ್ಯವಸ್ಥೆಯು ನಿಮ್ಮನ್ನು ಅನೇಕ ರೋಗಗಳಿಗೆ ತುತ್ತಾಗುವಂತೆ ಮಾಡುತ್ತದೆ. ತುಳಸಿ ಬೀಜಗಳು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಉಪಯುಕ್ತವಾಗಿವೆ. ಈ ಬೀಜಗಳಲ್ಲಿ ಸಮೃದ್ಧವಾಗಿರುವ ಆಂಟಿಆಕ್ಸಿಡೆಂಟ್‌ಗಳು ದೇಹದಲ್ಲಿನ ಸ್ವತಂತ್ರ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯನ್ನು ತಡೆಯಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಈ ಬೀಜಗಳಲ್ಲಿರುವ ಫ್ಲೇವನಾಯ್ಡ್‌ಗಳು ಮತ್ತು ಫಿನಾಲಿಕ್‌ಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಶೀತ ಮತ್ತು ಜ್ವರವನ್ನು ನಿವಾರಿಸುವಲ್ಲಿ ಹೆಚ್ಚು ಸಹಾಯ ಮಾಡುತ್ತದೆ.
ತುಳಸಿ ಬೀಜಗಳು ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸಲು ಸಹ ಸಹಾಯ ಮಾಡುತ್ತದೆ. ನೀವು ದೀರ್ಘಕಾಲದವರೆಗೆ ಮಲಬದ್ಧತೆಯಿಂದ ಬಳಲುತ್ತಿದ್ದರೆ ತುಳಸಿ ಬೀಜಗಳನ್ನು ನೀರಿನಲ್ಲಿ ನೆನೆಸಿ ಮತ್ತು ಪ್ರತಿದಿನ ಬೆಳಿಗ್ಗೆ ಕುಡಿಯಿರಿ. ಈ ಪಾನೀಯದ ರುಚಿ ನಿಮಗೆ ಇಷ್ಟವಾಗದಿದ್ದರೆ, ನೀವು ಒಂದು ಚಮಚ ಜೇನುತುಪ್ಪವನ್ನು ಕೂಡ ಸೇರಿಸಬಹುದು. ಪ್ರತಿದಿನ ಈ ಪಾನೀಯವನ್ನು ಕುಡಿಯುವುದರಿಂದ ದೇಹದಲ್ಲಿ ಫೈಬರ್ ಕೊರತೆ ಕಡಿಮೆಯಾಗುತ್ತದೆ. ಕರುಳಿನ ಚಲನೆ ಸುಲಭವಾಗುತ್ತದೆ ಮತ್ತು ಮಲಬದ್ಧತೆ ನಿವಾರಣೆಯಾಗುತ್ತದೆ.
ತುಳಸಿ ಬೀಜಗಳಲ್ಲಿರುವ ಆಹಾರದ ನಾರಿನಂಶವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು, ತುಳಸಿ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಅದರ ನಂತರ, ನೀವು ಮರುದಿನ ಬೆಳಿಗ್ಗೆ ಒಂದು ಲೋಟ ಹಾಲಿಗೆ ಈ ಬೀಜಗಳನ್ನು ಬೆರೆಸಿ ಕುಡಿದರೆ, ಇನ್ಸುಲಿನ್ ಮಟ್ಟವು ಸುಧಾರಿಸುತ್ತದೆ.