Twitter Latest Update - ಭಾರತದಲ್ಲೂ ಬಿಡುಗಡೆಯಾಯ್ತು Twitter ನ ಈ ಅತ್ಯದ್ಭುತ ವೈಶಿಷ್ಟ್ಯ

Twitter Latest Update - Twitter ಇದೀಗ ಮತ್ತಷ್ಟು ಅಡ್ವಾನ್ಸ್ಡ್ ಆಗಿದೆ. ಎಂಗೇಜ್ಮೆಂಟ್ ದರವನ್ನು ಹೆಚ್ಚಿಸುವ ಉದ್ದೇಶದಿಂದ ಈ ಶಾರ್ಟ್ ಮೆಸೇಜಿಂಗ್ ಆಪ್ ಅದ್ಭುತ ವೈಶಿಷ್ಟ್ಯ ಪರಿಚಯಿಸಿದೆ.

Twitter Latest Update - Twitter ಇದೀಗ ಮತ್ತಷ್ಟು ಅಡ್ವಾನ್ಸ್ಡ್ ಆಗಿದೆ. ಎಂಗೇಜ್ಮೆಂಟ್ ದರವನ್ನು ಹೆಚ್ಚಿಸುವ ಉದ್ದೇಶದಿಂದ ಈ ಶಾರ್ಟ್ ಮೆಸೇಜಿಂಗ್ ಆಪ್ (Twitter) ಅದ್ಭುತ ವೈಶಿಷ್ಟ್ಯ ಪರಿಚಯಿಸಿದೆ. ಇದರಿಂದ ನೀವು ಇತರರಿಗೆ ಕಳುಹಿಸುವ ಸಂದೇಶದ ಪದ್ಧತಿ ಇನ್ನಷ್ಟು ಸ್ವಾರಸ್ಯಕರವಾಗಿರಲಿದೆ.

 

ಇದನ್ನೂ ಓದಿ - ಏನಿದು Koo..? ಕೇಂದ್ರ ಸಚಿವರೇಕೆ Twitter ತೊರೆಯುತ್ತಿದ್ದಾರೆ?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

Audio ವೈಶಿಷ್ಟ್ಯ ಬಿಡುಗಡೆಗೊಳಿಸಿದ Twitter -  ಇತ್ತೀಚೆಗಷ್ಟೇ Twitter ತನ್ನ Audio ಅಪ್ಡೇಟ್ ಬಿಡುಗಡೆಗೊಳಿಸಿದೆ. ಇದನ್ನು Voice DM ಎಂದೂ ಕೂಡ ಕರೆಯಲಾಗುತ್ತಿದೆ. ಈ ವೈಶಿಷ್ಟ್ಯ ಬಳಸಿ ನೀವು ಯಾವುದೇ twitter ಬಳಕೆದಾರರಿಗೆ ಆಡಿಯೋ ಕ್ಲಿಪ್ ಕಳುಹಿಸಬಹುದಾಗಿದೆ.

2 /5

ಕೇವಲ DM ನಲ್ಲಿ ಮಾತ್ರ ಬಳಕೆಯಾಗಲಿದೆ -  ಈ ನೂತನ ಅಪ್ಡೇಟ್ ಕೇವಲ DM ಅಂದರೆ ಡೈರೆಕ್ಟ್ ಮೆಸೇಜ್ ಗೆ ಮಾತ್ರ ಬಳಕೆಯಾಗಲಿದೆ. ಹೀಗಾಗಿ ಇದರಿಂದ ನೀವು ಯಾವುದೇ ಬಳಕೆದಾರರಿಗೆ ನಿಮ್ಮ ಧ್ವನಿ ರೂಪದ ಸಂದೇಶ ಕಳುಹಿಸಬಹುದು. ಅಂದರೆ, ಟೆಕ್ಸ್ಟ್ ಬಳಸುವುದಕ್ಕಿಂದ ಅದರ ಜಾಗದಲ್ಲಿ ನೀವು Voice ಸಂದೇಶ ಕಳುಹಿಸಬಹುದು.

3 /5

ಒಂದು ಸಂಪೂರ್ಣ ಹಾಡನ್ನು ನೀವು ಕಳುಹಿಸಬಹುದು -  ಮೂಲಗಳಿಂದ ದೊರೆತ ಮಾಹಿತಿಯ ಪ್ರಕಾರ ಒಂದು ವಾಯ್ಸ್ ಮೆಸೇಜ್ ನಲ್ಲಿ ನೀವು 140 ಸೆಕೆಂಡ್ ಗಳ ನೋಟ್ ಕಳುಹಿಸಬಹುದು. ಆದರೆ, ಡೈರೆಕ್ಟ್ ಮೆಸೇಜ್ ನಲ್ಲಿ ನೀವು ಯಾವುದೇ ಒಂದು ಬಳಕೆದಾರರಿಗೆ ಒಂದು ಸಂಪೂರ್ಣ ಹಾಡನ್ನು ಕೇಳಿಸಬಹುದು.

4 /5

Voice DM ಕಳುಹಿಸುವುದು ತುಂಬಾ ಸುಲಭ -  Twitter ಯಾವುದೇ ಓರ್ವ ಬಳಕೆದಾರರಿಗೆ Voice DM ಕಳುಹಿಸುವುದು ತುಂಬಾ ಸುಲಭವಾಗಿದೆ. ಇದಕ್ಕಾಗಿ ನೀವು ನಿಮ್ಮ ಮೆಸೇಜ್ ಆಪ್ಶನ್ಗೆ ಭೇಟಿ ನೀಡಿ. ಯಾರಿಗೆ ನೀವು ಸಂದೇಶ ಕಳುಹಿಸಲು ಬಯಸಿರುವಿರು ಅವರ ಆಯ್ಕೆ ಮಾಡಿ. ಮೆಸೇಜ್ ಬರೆಯುವ ಆಪ್ಸನ್ ಬರುತ್ತಿದ್ದಂತೆ ನಿಮಗೆ ಟೈಪ್ ಹಾಗೂ ವಾಯ್ಸ್ ಐಕಾನ್ ಗಳು ಕಾಣಿಸಲಿವೆ. ಈಗ ವಾಯ್ಸ್ ಆಯ್ಕೆಯನ್ನು ಕ್ಲಿಕ್ಕಿಸಿ ನಿಮ್ಮ ಸಂದೇಶವನ್ನು ರೆಕಾರ್ಡ್ ಮಾಡಿ. ಸಂದೇಶ ಕಳುಹಿಸುವುದಕ್ಕೆ ಮೊದಲು ನೀವು ಅದನ್ನು ಕೇಳಬಹುದು.

5 /5

ಕೇವಲ ಮೂರೇ ದೇಶಗಳಲ್ಲಿ ಈ ವೈಶಿಷ್ಟ್ಯ ಬಿಡುಗಡೆಯಾಗಿದೆ -  ಮಾಹಿತಿಗಳ ಪ್ರಕಾರ Twitter ಪ್ರಸ್ತುತ ಕೇವಲ ಮೂರೇ ದೇಶಗಳಲ್ಲಿ ತನ್ನ Voice DM ವೈಶಿಷ್ಟ್ಯ ಬಿಡುಗಡೆ ಮಾಡಿದೆ. ಭಾರತ, ಬ್ರೆಜಿಲ್ ಹಾಗೂ ಜಪಾನ್ ಗಳಲ್ಲಿ ಮಾತ್ರ twitter ಈ ವೈಶಿಷ್ಟ್ಯ ಬಿಡುಗಡೆ ಮಾಡಿದೆ. ಒಂದೊಮ್ಮೆ ಈ ವೈಶಿಷ್ಟ್ಯ ಪ್ರಚಲಿತಗೊಂಡರೆ, ಉಳಿದ ದೇಶಗಳಿಗೂ ಕೂಡ ಬಿಡುಗಡೆ ಮಾಡಲಾಗುವುದು ಎಂದು twitter ಹೇಳಿದೆ.