ಯೂನಿಯನ್ ಬ್ಯಾಂಕ್ ಈ ಕಾರ್ಡ್ ಅನ್ನು ಜೆಸಿಬಿ ಇಂಟರ್ನ್ಯಾಷನಲ್ ನೆಟ್ವರ್ಕ್ ಸಹಯೋಗದೊಂದಿಗೆ ಬಿಡುಗಡೆ ಮಾಡಿದೆ.
ನವದೆಹಲಿ : Union Bank of India Rupay Wellness Credit Card: ಯುಬಿಐ ಗ್ರಾಹಕರಿಗೆ ವಿಶೇಷ ಕ್ರೆಡಿಟ್ ಕಾರ್ಡ್ ಅನ್ನು ಬಿಡುಗಡೆ ಮಾಡಿದೆ. ಯೂನಿಯನ್ ಬ್ಯಾಂಕ್ ಈ ಕಾರ್ಡ್ ಅನ್ನು ಜೆಸಿಬಿ ಇಂಟರ್ನ್ಯಾಷನಲ್ ನೆಟ್ವರ್ಕ್ ಸಹಯೋಗದೊಂದಿಗೆ ಬಿಡುಗಡೆ ಮಾಡಿದೆ. ಇದರಲ್ಲಿ ಗ್ರಾಹಕರು ಉಚಿತ ಆರೋಗ್ಯ ತಪಾಸಣೆ, ಜಿಮ್ ಸ್ಪಾ ಇತ್ಯಾದಿ ಸೌಲಭ್ಯಗಳನ್ನು ಪಡೆಯುತ್ತಾರೆ. ಯೂನಿಯನ್ ಬ್ಯಾಂಕ್ನ ಈ ಕಾರ್ಡ್ನ ಹೆಸರು ವೆಲ್ ನೆಸ್ ಕ್ರೆಡಿಟ್ ಕಾರ್ಡ್.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಯೂನಿಯನ್ ಬ್ಯಾಂಕ್ ಗ್ರಾಹಕರು ವೆಲ್ನೆಸ್ ಕ್ರೆಡಿಟ್ ಕಾರ್ಡ್ ಮೂಲಕ, ಪ್ರತಿವರ್ಷ ಉಚಿತ ಆರೋಗ್ಯ ತಪಾಸಣೆಯ ಸೌಲಭ್ಯವನ್ನು ಪಡೆಯುತ್ತಾರೆ. ಇದಲ್ಲದೇ, ಇದರ ನಂತರವೂ, ಗ್ರಾಹಕರಿಗೆ ಆರೋಗ್ಯ ತಪಾಸಣೆಯಲ್ಲಿ ರಿಯಾಯಿತಿ ಸಿಗಲಿದೆ.
ಯುಬಿಐ ಬ್ಯಾಂಕ್ ಗ್ರಾಹಕರು, ಈ ವೆಲ್ನೆಲ್ ಕ್ರೆಡಿಟ್ ಕಾರ್ಡ್ ಮೂಲಕ 15 ದಿನಗಳಿಂದ 1 ತಿಂಗಳವರೆಗೆ ಉಚಿತ ಜಿಮ್ ಸದಸ್ಯತ್ವವನ್ನು ಪಡೆಯುತ್ತಾರೆ. ಈ ಸದಸ್ಯತ್ವವನ್ನು ವಿಸ್ತರಿಸಲು ಬಯಸಿದರೆ, 40-50 ಪ್ರತಿಶತದವರೆಗೆ ರಿಯಾಯಿತಿ ಪಡೆಯಬಹುದು.
ಯುಬಿಐ ಗ್ರಾಹಕರು, ಈ ವಿಶೇಷ ಕ್ರೆಡಿಟ್ ಕಾರ್ಡ್ನಲ್ಲಿ ಪ್ರತಿ ವರ್ಷ ಒಂದು ಉಚಿತ ಸ್ಪಾ ಸೆಶನ್ ಪಡೆಯುತ್ತಾರೆ. ಇದರ ಹೊರತಾಗಿ, ನೀವು ವರ್ಷಪೂರ್ತಿ ಸ್ಪಾಗಳ ಮೇಲೆ ಆಕರ್ಷಕ ರಿಯಾಯಿತಿಗಳನ್ನು ಸಿಗುತ್ತವೆ.
ಯುಬಿಐ ಈ ವೆಲ್ನೆಸ್ ಕ್ರೆಡಿಟ್ ಕಾರ್ಡ್ ನಲ್ಲಿ ಒಂದು ವರ್ಷದಲ್ಲಿ ತನ್ನ ಗ್ರಾಹಕರಿಗೆ ಒಂದು ಗಾಲ್ಫ್ ಸೆಷನ್ ಅಥವಾ ಕ್ಲಾಸ್ ಅನ್ನು ಉಚಿತವಾಗಿ ನೀಡುತ್ತದೆ. ಇದರ ಹೊರತಾಗಿ, ಗ್ರಾಹಕರು ಮತ್ತಷ್ಟು ರಿಯಾಯಿತಿಗಳನ್ನು ಪಡೆಯುತ್ತಲೇ ಇರುತ್ತಾರೆ.
ಯುಬಿಐ ಗ್ರಾಹಕರು ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ವೆಲ್ನೆಸ್ ಕ್ರೆಡಿಟ್ ಕಾರ್ಡ್ಗಳಿಗೆ ಕಾಂಪ್ಲಿಮೆಂಟರಿ ಆಕ್ಸೆಸ್ ಸಿಗಲಿದೆ.