ಈ ತಿಂಗಳು ಭಾರತದಲ್ಲಿ ಬಿಡುಗಡೆ ಆಗಲಿರುವ ಕಾರುಗಳಿವು

Upcoming Cars: ಜುಲೈ ತಿಂಗಳಿನಲ್ಲಿ ಭಾರತದಲ್ಲಿ 5 ಅತ್ಯುತ್ತಮ ಕಾರುಗಳು ಬಿಡುಗಡೆ ಆಗಲಿವೆ. 

Upcoming Cars: ಜುಲೈ ತಿಂಗಳಿನಲ್ಲಿ ಭಾರತದಲ್ಲಿ 5 ಅತ್ಯುತ್ತಮ ಕಾರುಗಳು ಬಿಡುಗಡೆ ಆಗಲಿವೆ. ಈ ಪಟ್ಟಿಯಲ್ಲಿ ಎರಡು ಹೊಸ ಎಸ್‌ಯುವಿಗಳು, ಹೊಸ ಐಷಾರಾಮಿ ಸೆಡಾನ್ ಮತ್ತು ಎಲೆಕ್ಟ್ರಿಕ್ ಕಾರು ಸೇರಿವೆ. ಅವುಗಳ ಬಗ್ಗೆ  ತಿಳಿಯೋಣ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಮಾರುತಿ ಸುಜುಕಿ ತನ್ನ ಹೊಸ SUV ಅನ್ನು ಜುಲೈ 20 ರಂದು ಪರಿಚಯಿಸಲಿದೆ.  ಇದು ಟೊಯೊಟಾ ಹೈರಿಡರ್ ಅನ್ನು ಆಧರಿಸಿರುತ್ತದೆ. ವರದಿಗಳ ಪ್ರಕಾರ, ಇದನ್ನು ಮಾರುತಿ ಸುಜುಕಿ ವಿಟಾರಾ ಎಂದು ಕರೆಯಬಹುದು. ಇದು ಸುಜುಕಿಯ ಗ್ಲೋಬಲ್-ಸಿ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ ಎಂದು ತಿಳಿದುಬಂದಿದೆ. (ಸಾಂದರ್ಭಿಕ ಚಿತ್ರ)

2 /5

ಒಮ್ಮೆ ಫುಲ್ ಚಾರ್ಜ್ ಮಾಡಿದರೆ  418 ಕಿಮೀವರೆಗೆ ಕ್ರಮಿಸಬಲ್ಲ ವೋಲ್ವೋ XC40 ರೀಚಾರ್ಜ್ ಭಾರತದಲ್ಲಿ ಜುಲೈ 26 ರಂದು ಬಿಡುಗಡೆಯಾಗಲಿದೆ. ಈ ಎಸ್‌ಯುವಿಯಲ್ಲಿ ಎರಡು ಎಲೆಕ್ಟ್ರಿಕ್ ಮೋಟಾರ್‌ಗಳು ಲಭ್ಯವಿರುತ್ತವೆ. ಇದು 78kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿರುತ್ತದೆ.  

3 /5

ಭಾರತದಲ್ಲಿ ಈ ಮಾಸದಲ್ಲಿ ಬಿಡುಗಡೆ ಅಗಲಿರುವ ಕಾರುಗಳಲ್ಲಿ ಸಿಟ್ರೊಯೆನ್ C3 ಕೂಡ ಒಂದು. ಕಂಪನಿಯು ಈ ಕಾರ್ ಅನ್ನು ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಲಾಂಚ್ ಮಾಡಲು ಸಿದ್ಧತೆ ನಡೆಸುತ್ತಿದೆ. ಸಿಟ್ರೊಯೆನ್ ತನ್ನ ಡೀಲರ್ ನೆಟ್‌ವರ್ಕ್ ಅನ್ನು ವಿಸ್ತರಿಸುತ್ತಿದೆ ಮತ್ತು 19 ಭಾರತೀಯ ನಗರಗಳಲ್ಲಿ 20 ಕ್ಕೂ ಹೆಚ್ಚು ಔಟ್‌ಲೆಟ್‌ಗಳನ್ನು ಹೊಂದಿದೆ. ಸಿ3 ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರಲಿದೆ ಎಂದು ತಿಳಿದುಬಂದಿದೆ.

4 /5

ಭಾರತದಲ್ಲಿ ಜುಲೈ 12 ರಂದು Audi A8 L ಕಾರು ಬಿಡುಗಡೆಯಾಗಲಿದೆ. ಇದು ಆಡಿಯ ಮಿಡ್-ಲೈಫ್ ಅಪ್‌ಡೇಟ್ ಆಗಿದ್ದು, ಇದರ ಮುಂಭಾಗ ಮತ್ತು ಹಿಂಭಾಗದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡುವ ನಿರೀಕ್ಷೆ ಇದೆ. ಈ ಸೆಡಾನ್ ಮೈಲ್ಡ್-ಹೈಬ್ರಿಡ್ ತಂತ್ರಜ್ಞಾನದೊಂದಿಗೆ 3.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆಎಂದು ತಿಳಿದುಬಂದಿದೆ. ಫೋಟೋ ಕೃಪೆ - ಕಾರ್ಡೆಖೋ

5 /5

ಹುಂಡೈ ಟಕ್ಸನ್ ಜುಲೈ 13 ರಂದು ಭಾರತಕ್ಕೆ ಲಗ್ಗೆ ಇಡಲಿದೆ. ಮುಂಬರುವ SUV ನಲ್ಲಿ ADAS ವೈಶಿಷ್ಟ್ಯವನ್ನು ನೀಡಬಹುದು, ಹಾಗೆಯೇ AWD ಬೆಂಬಲವು ಅದರ ಉನ್ನತ ರೂಪಾಂತರದಲ್ಲಿ ಲಭ್ಯವಿರುತ್ತದೆ. ಇದಕ್ಕೆ 2.0 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ನೀಡುವ ನಿರೀಕ್ಷೆಯಿದೆ ಎಂದು ಅಂದಾಜಿಸಲಾಗಿದೆ.