Use Of Cow Dung For CNG - 'ಹಸುವಿನ ಸಗಣಿ ದುಬಾರಿ ಪೆಟ್ರೋಲ್-ಡಿಸೇಲ್ ಗೆ ಪರ್ಯಾಯ'

Use Of Cow Dung For CNG - ದುಬಾರಿ ಪೆಟ್ರೋಲ್-ಡಿಸೇಲ್ ಸಮಸ್ಯೆಯ ಪರಿಹಾರ ಹಸುವಿನ ಸಗಣಿಯಲ್ಲಡಗಿದೆಯೇ? ಹೌದು, ಎನ್ನುತ್ತೆ National Cow Commission.

ನವದೆಹಲಿ: Use Of Cow Dung For CNG - ದುಬಾರಿ ಪೆಟ್ರೋಲ್-ಡಿಸೇಲ್ ಸಮಸ್ಯೆಯ ಪರಿಹಾರ ಹಸುವಿನ ಸಗಣಿಯಲ್ಲಡಗಿದೆಯೇ? ಹೌದು, ಈ ಕುರಿತು ಹೇಳಿಕೆ ನೀಡಿರುವ ರಾಷ್ಟ್ರೀಯ ಗೋವು ಆಯೋಗ, ಜನರು ಹಸುವಿನ ಸಗಣಿಯಿಂದ (Cow Dung) ತಯಾರಾದ ನೈಸರ್ಗಿಕ ಅನಿಲ (CNG) ಬಳಕೆಯನ್ನು ಆರಂಭಿಸಬೇಕು ಎಂದು ಸಲಹೆ ನೀಡಿದೆ. 

 

ಇದನ್ನೂ ಓದಿ- RBI ಗವರ್ನರ್ ಸಲಹೆ, ಈಗಲಾದರೂ ಅಗ್ಗವಾಗಲಿದೆಯೇ Petrol-Diesel

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

2. ಸಂಪೂರ್ಣ Made In India ಇಂಧನ : Use Of Cow Dung For CNG - ಇದರಿಂದ ಜನರಿಗೆ ಅಗ್ಗದ ದರದಲ್ಲಿ ಮೇಡ್ ಇನ್ ಇಂಡಿಯಾ ಇಂಧನ ಸಿಗಲಿದೆ. ನ್ಯಾಷನಲ್ ಕೌ ಸೈನ್ಸ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ವೆಬ್ ಸೈಟ್ ನಲ್ಲಿ ಆಯೋಗ ಈ ಡಾಕ್ಯುಮೆಂಟ್ ಅಪ್ಲೋಡ್ ಮಾಡಿದೆ. ಈ ಪರೀಕ್ಷೆ ಫೆಬ್ರವರಿ 25ರಂದು ನಡೆಯಲಿದೆ.

2 /6

3. ಗೂಳಿಯ ವಿರ್ಯ ಬ್ಯಾಂಕ್ ಹಾಗೂ ಗೋವು ಪ್ರವಾಸೋದ್ಯಮಕ್ಕೆ ಸಲಹೆ : Use Of Cow Dung For CNG - ರಾಷ್ಟ್ರೀಯ ಕಾಮಧೇನು ಆಯೋಗ ಅಂದರೆ RKA (Rashtriya Kamdhenu Ayog) ವಾಹನಗಳಿಗಾಗಿ  ಹಸುವಿನ ಸಗಣಿಯ CNG ಪಂಪ್, ಗೂಳಿಯ ವೀರ್ಯ ಬ್ಯಾಂಕ್ ಹಾಗೂ ಗೋವು ಪ್ರವಾಸೋದ್ಯಮದಂತಹ ಸಲಹೆಗಳನ್ನು ನೀಡಿದ್ದು, ಇದರಿಂದ ಗೋವು ಉದ್ಯಮಕ್ಕೆ ಉತ್ತೇಜನ ದೊರೆಯಲಿದೆ ಎಂದು ಹೇಳಿದೆ.  

3 /6

4. ನಿತ್ಯ ಹರಿದ್ವರ್ಣದ ಸಾಧ್ಯತೆಗಳ ಅನ್ವೇಷಣೆ:  Use Of Cow Dung For CNG - ಈ ಕುರಿತು ತನ್ನ ವೆಬ್ ಸೈಟ್ ನಲ್ಲಿ ಬರೆದುಕೊಂಡಿರುವ RKA, "ನಮ್ಮ ಹಲವು ವೆಬಿನಾರ್ ಗಳಲ್ಲಿ ಹಸು ಉದ್ಯಮಶೀಲತೆಯ ಕಲ್ಪನೆಯ ಕುರಿತು ಚರ್ಚೆ ನಡೆಸಲಾಗಿದೆ" ಎಂದಿದೆ. "ವಿಶ್ವಾದ್ಯಂತ ಅನೇಕ ಉದ್ಯಮಿಗಳು ಹೊಸ ತಂತ್ರಜ್ಞಾನದೊಂದಿಗೆ ಶತಮಾನಗಳಷ್ಟು ಹಳೆಯ ಬುದ್ಧಿವಂತಿಕೆಯನ್ನು ಉಪಯೋಗಿಸಿ ನಿತ್ಯ ಹರಿದ್ವರ್ಣದ ಸಾಧ್ಯತೆಗಳನ್ನು ಅನ್ವೇಷಿಸುತ್ತಿದ್ದಾರೆ" ಎಂದು RKA (National Cow Commission) ಹೇಳಿದೆ. 

4 /6

5. ಸಾರಿಗೆ ಉದ್ಯಮಕ್ಕೆ ಅಗ್ಗದ ಇಂಧನ ಆಯ್ಕೆ ದೊರೆಯಲಿದೆ :  Use Of Cow Dung For CNG - "ಜೈವಿಕ ಅನಿಲವನ್ನು ಇಂಧನವಾಗಿ ದೀರ್ಘಕಾಲ ಬಳಸಲಾಗುತ್ತಿದೆ. ಅವುಗಳನ್ನು ಸಿಲಿಂಡರ್ಗಳಲ್ಲಿ ತುಂಬಿಸಿ ಅಡುಗೆಗೆ ಬಳಸಲಾಗುತ್ತದೆ. ಗೋವಿನ ಸಗಣಿಯಿಂದ ಉತ್ಪಾದಿಸಲಾಗುವ ಇಂಧನವನ್ನು (Cow Dung CNG) ಸಾರಿಗೆಗಾಗಿ ಕೂಡ ಬಳಸಬಹುದು. ಸಾಮೂಹಿಕ ಉತ್ಪಾದನೆಯಿಂದಾಗಿ ಸಿಎನ್‌ಜಿ ಪಂಪ್ ಅನ್ನು ಸಹ ಸ್ಥಾಪಿಸಬಹುದು. ಇದು ಸಾರಿಗೆ ಉದ್ಯಮಕ್ಕೆ ಅಗ್ಗದ ಮತ್ತು ಸುಲಭವಾಗಿ ಲಭ್ಯವಿರುವ ಮೇಡ್ ಇನ್ ಇಂಡಿಯಾ ಇಂಧನವನ್ನು ಒದಗಿಸಲಿದೆ" ಎಂದು ಈ ಡಾಕ್ಯೂಮೆಂಟ್ ನಲ್ಲಿ ಬರೆಯಲಾಗಿದೆ.

5 /6

6. ದೇಶಾದ್ಯಂತ ಪೆಟ್ರೋಲ್ - ಡಿಸೇಲ್ ಬೆಲೆ:  Use Of Cow Dung For CNG - ಪ್ರಸ್ತುತ ದೇಶದ ವಿವಿಧ ಭಾಗಗಳಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ. ದೇಶದ ಹಲವು ಭಾಗಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ ರೂ.100 ರ ಗಡಿ ದಾಟಿದೆ. ದೆಹಲಿಯಲ್ಲಿ ಗ್ರಾಹಕರು ಪ್ರತಿ ಲೀಟರ್ ಪೆಟ್ರೋಲ್ ಗೆ ರೂ.89.20 ಪಾವತಿಸುತ್ತಿದ್ದಾರೆ. ಇನ್ನೊಂದೆಡೆ ಡಿಸೇಲ್ ಬೆಲೆ ಕೂಡ ಲೀಟರ್ಗೆ ರೂ.79.70 ಕ್ಕೆ ತಲುಪಿದೆ. ರಾಜಸ್ಥಾನ ಹಾಗೂ ಮಧ್ಯಪ್ರದೇಶಗಳಲ್ಲಿ ಪೆಟ್ರೋಲ್ ಬೆಲೆ ರೂ.100 ಕ್ಕೆ ತಲುಪಿದೆ.

6 /6

7. ಇದು ಒಂದು ಆಕರ್ಷಕ ಉದ್ಯಮದ ಸಂಭವನೀಯತೆ ಹೆಚ್ಚಿಸುತ್ತದೆ: Use Of Cow Dung For CNG - ಈ ಹಿನ್ನೆಲೆ ಕೇಂದ್ರದ ಪಶುಸಂಗೋಪನಾ ವಿಭಾಗದ ಅಡಿ ಕಾರ್ಯನಿರತವಾಗಿರುವ ಈ ಆಯೋಗ, ಹಸುವಿನ ಸಗಣಿ ಅತ್ಯಧಿಕ ಲಾಭ ನೀಡುತ್ತದೆ ಹಾಗೂ ಆಕರ್ಷಕ ಉದ್ಯಮದ ಸಂಭವನೀಯತೆ ಹೆಚ್ಚಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ. ಗೂಳಿಗಳಿಗಾಗಿ ಗೂಳಿ ವಿರ್ಯ ಬ್ಯಾಂಕ್ ಸ್ಥಾಪಿಸುವ ಕುರಿತು ಸಲಹೆ ನೀಡಿರುವ ಆಯೋಗ ಇದು ಕೂಡ ಒಂದು ಆಕರ್ಷಕ ಉದ್ಯಮವಾಗಲಿದೆ ಎಂದು ಸಲಹೆ ನೀಡಿದೆ.