Weight Loss Tips : ತೂಕವನ್ನು ಹೆಚ್ಚಿಸುವುದು ಸುಲಭ, ಅದನ್ನು ಕಳೆದುಕೊಳ್ಳುವುದು ಹೆಚ್ಚು ಕಷ್ಟ. ತೂಕ ಇಳಿಸಿಕೊಳ್ಳಲು ಜನರು ಏನೆಲ್ಲ ಮಾಡುತ್ತಾರೆ. ಭಾರೀ ವರ್ಕೌಟ್ ಮಾಡಿದ ನಂತರವೂ ತೂಕ ಇಳಿಯುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹೆಚ್ಚಿನವರು ತಿನ್ನುವುದು ಮತ್ತು ಕುಡಿಯುವುದನ್ನು ಬಿಟ್ಟು ಕಟ್ಟುನಿಟ್ಟಾದ ಆಹಾರಕ್ರಮವನ್ನು ಅನುಸರಿಸಲು ಪ್ರಾರಂಭಿಸುತ್ತಾರೆ.
Benefits of Jeera: ಮಧುಮೇಹ ರೋಗಿಗಳಿಗೆ ಜೀರಿಗೆ ನೀರು ಅತ್ಯಂತ ಪರಿಣಾಮಕಾರಿ ಮನೆಮದ್ದಾಗಿದೆ. ಜೀರಿಗೆ ನೀರನ್ನು ನಿಯಮಿತವಾಗಿ ಸೇವಿಸಿದರೆ, ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣ ಇಳಿಕೆಗೆ ಸಹಾಯ ಮಾಡುತ್ತದೆ. ಜೀರಿಗೆ ನೀರಿನ ಇತರ ಪ್ರಯೋಜನಗಳನ್ನು ತಿಳಿದುಕೊಳ್ಳೋಣ ಬನ್ನಿ,
Jeera Water: ನೀವು ಪ್ರತಿದಿನ ಒಂದು ಲೋಟ ಜೀರಿಗೆ ನೀರನ್ನು ಕುಡಿದರೆ, ನೀವು ಹಲವಾರು ಪ್ರಯೋಜನಗಳನ್ನು ಪಡೆಯುತ್ತೀರಿ. ಜೀರಿಗೆ ತರಕಾರಿಗಳ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಅದೇನೆಂದರೆ, ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸದೃಢವಾಗಿಡಲು ಮತ್ತು ಕ್ಯಾನ್ಸರ್ ನಿಂದ ದೂರವಿರಲು ನೀವು ಬಯಸಿದರೆ, ಇಂದಿನಿಂದಲೇ ನಿತ್ಯ ಒಂದು ಲೋಟ ಜೀರಿಗೆ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.
ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ತೂಕ ನಷ್ಟಕ್ಕೆ ಜೀರಿಗೆ ನೀರನ್ನು ಕುಡಿಯುವಂತೆ ಹೇಳಲಾಗುತ್ತದೆ. ಆದರೆ ಎಲ್ಲಾ ಸಂದರ್ಭಗಳಲ್ಲಿಯೂ ಜೀರಿಗೆ ನೀರು ಉಪಯೋಗವಾಗುವುದಿಲ್ಲ. ಕೆಲ ಸಂದರ್ಭದಲ್ಲಿ ಜೀರಿಗೆ ನೀರು ಉಪಯೋಗಕ್ಕಿಂತ ಹೆಚ್ಚು ನಷ್ಟವನ್ನೇ ತಂದೊಡ್ಡಬಹುದು.