ನಿಮ್ಮ ಲ್ಯಾಪ್ ಟಾಪ್, ಕಂಪ್ಯೂಟರ್ hang ಆಗದಂತೆ ಈ ರೀತಿ ಇಟ್ಟುಕೊಳ್ಳಿ

ಪ್ರಸ್ತುತ, ಹೆಚ್ಚಿನ ಜನರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ.  ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಎದುರಿಸುವ ಸಮಸ್ಯೆಯೆಂದರೆ, ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರಿನ ಸ್ಪೀಡ್ ನಿಧಾನವಾಗುವುದು.

ನವದೆಹಲಿ : ಪ್ರಸ್ತುತ, ಹೆಚ್ಚಿನ ಜನರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ.  ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಎದುರಿಸುವ ಸಮಸ್ಯೆಯೆಂದರೆ, ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರಿನ ಸ್ಪೀಡ್ ನಿಧಾನವಾಗುವುದು. ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಇಂಥ ಸಮಸ್ಯೆಗಳು ಎದುರಾದಾಗ ನಿಮಗೆ  ಐಟಿ ತಂಡ ಸಹಾಯಕ್ಕೆ ಬರುತ್ತದೆ. ಆದರೆ ಮನೆಯಲ್ಲಿ ಈ ಸಮಸ್ಯೆಗಳಿಗೆ ನೀವೇ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

 ನಿಮ್ಮ ಕಂಪ್ಯೂಟರ್ ಸಾಕಷ್ಟು ಹಳೆಯದಾಗಿದ್ದರೆ, ಅದರ ವೇಗವನ್ನು ಹೆಚ್ಚಿಸಲು ಹಾರ್ಡ್ ವೇರ್ ಅನ್ನು ಬದಲಾಯಿಸಬೇಕಾಗುತ್ತದೆ. ಇದಕ್ಕಾಗಿ, ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನ RAM ಅನ್ನು ಕೂಡಾ ಹೆಚ್ಚಿಸಬೇಕಾಗಬಹುದು. ಇದಲ್ಲದೆ, ಕಂಪ್ಯೂಟರಿನ ಆಪರೇಟಿಂಗ್ ಸಿಸ್ಟಮ್ ಅನ್ನು ಕೂಡಾ ಪರಿಶೀಲಿಸಬೇಕಾಗುತ್ತದೆ.  

2 /5

ಎಷ್ಟೋ ಸಲ ಸಮಯ ಉಳಿಸುವ ಸಲುವಾಗಿ ಅಥವಾ, ಫೈಲ್ ಗಳನ್ನು ಮತ್ತೆ ಓಪನ್ ಮಾಡಬೇಕಾಗುತ್ತದೆ ಎಂಬ ಸೋಮಾರಿತನದಿಂದಾಗಿ ಸಿಸ್ಟಮ್ ಅನ್ನು ರಿಸ್ಟಾರ್ಟ್ ಮಾಡುವುದೇ ಇಲ್ಲ. ಹೀಗೆ ಮಾಡಿದರೆ ಸಿಸ್ಟಮ್ ನ ಸ್ಪೀಡ್ ಕಡಿಮೆಯಾಗುತ್ತದೆ. ಈ ಕಾರಣದಿಂದಾಗಿ ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ಅನ್ನು ರೀಸ್ಟಾರ್ಟ್ ಮಾಡುತ್ತಿರಿ. 

3 /5

ಆಪರೇಟಿಂಗ್ ಸಿಸ್ಟಮ್ ಅನ್ನುupdate ಮಾಡುವ ಮೆಸೇಜ್ ಅಥವಾ ನೊಟಿಫಿಕೇಶನ್ ಅನ್ನು ನಿರ್ಲಕ್ಷಿಸಬೆಡಿ. ಸಮಯಕ್ಕೆ ಸರಿಯಾಗಿ ಸಿಸ್ಟಮ್ update ಆಗುತ್ತಿರಲಿ.  

4 /5

ನಾವು ಬಳಸದೇ ಇರುವ ಕೆಲ ಸಾಫ್ಟ್ ವೇರ್ ಗಳನ್ನು ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ನಲ್ಲಿ ಇಟ್ಟುಕೊಂಡಿರುತ್ತೇವೆ. ಯಾವ ಸಾಫ್ಟ್ ವೇರ್ ಅನ್ನು ನಾವು ಬಳಸುವುದಿಲ್ಲವೋ ಅದನ್ನು ಸಿಸ್ಟಮ್ ನಿಂದ ಡಿಲೀಟ್ ಮಾಡಿಕೊಳ್ಳಿ.

5 /5

ಲ್ಯಾಪ್‌ಟಾಪ್ ಅಥವಾ ಪಿಸಿಯಲ್ಲಿ ಸ್ಟಾರ್ಟ್ ಬಟನ್ ಮೇಲೆ ರೈಟ್ ಕ್ಲಿಕ್ ಮಾಡಿ. ಇದರ ನಂತರ, ರನ್ ಆಯ್ಕೆಮಾಡಿ. ಸರ್ಚ್ ಬಾಕ್ಸ್ ತೆರೆಯುತ್ತದೆ. ಇದನ್ನು% temp% ಮಾಡಿಕೊಳ್ಳಿ. ಈಗ ಕೆಲವು ಫೈಲ್‌ಗಳು ತೆರೆದುಕೊಳ್ಳುತ್ತವೆ. ಇಲ್ಲಿ ಉಪಯೋಗವಿಲ್ಲದ ಫೈಲ್ ಗಳನ್ನು ಸೆಲೆಕ್ಟ್ ಮಾಡಿ ಡಿಲೀಟ್ ಮಾಡಿ. ಸಾಧ್ಯವಾದರೆ ಎಲ್ಲಾ ಫೈಲ್ ಗಳನ್ನು ಡಿಲೀಟ್ ಮಾಡಬಹುದು.