ಶಿವಸನ್ನಿಧಾನದಲ್ಲಿ ಕಂಡು ಕೇಳರಿಯದ ಜಪಲ್ರಳಯ..! ಚಿತ್ರಪಟಗಳಲ್ಲಿ ಚಮೋಲಿ..!

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿದ ಜಲಪ್ರಳಯ ಸಾಕಷ್ಟು ಅನಾಹುತಗಳನ್ನೇ ಸೃಷ್ಟಿಸಿದೆ. 

ಉತ್ತರಾಖಂಡ : ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿದ ಜಲಪ್ರಳಯ ಸಾಕಷ್ಟು ಅನಾಹುತಗಳನ್ನೇ ಸೃಷ್ಟಿಸಿದೆ. ಹಿಮಾಲಯದ ಈ ಮಣ್ಣಿನಲ್ಲಿ ಹಿಮಸ್ಫೋಟಗೊಂಡು ಸಂಭವಿಸಿದ ಹಠಾತ್ ಪ್ರವಾಹದಲ್ಲಿ ನೂರಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿರುವ ಸಾಧ್ಯತೆಗಳಿವೆ. ಅಸಂಖ್ಯ ಪ್ರಮಾಣದಲ್ಲಿ ಆಸ್ತಿಪಾಸ್ತಿ ಹಾನಿಯಾಗಿದೆ. ರಕ್ಷಣೆ ಮತ್ತು ಪರಿಹಾರ ಕಾರ್ಯ ಸಮರೋಪಾದಿಯಲ್ಲಿ ಸಾಗುತ್ತಿದೆ. ರಕ್ಷಣೆಗೆ ಸೇನೆಯನ್ನು ನಿಯೋಜಿಸಲಾಗಿದೆ. NDRF ಯೋಧರು ಪ್ರಾಣದ ಹಂಗು ತೊರೆದು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಅದರ ಕೆಲವು ಚಿತ್ರಗಳು ಇಲ್ಲಿವೆ. 

1 /6

ಹಠಾತ್ ಹಿಮನದಿ ಸ್ಫೋಟದಿಂದ ನೂರಾರು ಮಂದಿ ಕೊಚ್ಚಿಹೋಗಿರುವ ಸಾಧ್ಯತೆಗಳಿವೆ. ಉತ್ತರಾಖಂಡ್ ರಾಜ್ಯ ವಿಕೋಪ ಪರಿಹಾರ ತಂಡ ಮತ್ತು ಉತ್ತರಾಖಂಡ ಪೊಲೀಸರು  ಶ್ರೀನಗರ ಅಣೆಕಟ್ಟೆಯಲ್ಲಿ ಶೋಧಕಾರ್ಯ ನಡೆಸುತ್ತಿರುವುದು.   

2 /6

ಇದು ತೆಪೋವನ ಸುರಂಗ. ಹಠಾತ್ ಪ್ರವಾಹ ನುಗ್ಗಿದ ಕಾರಣ ಈ ಸುರಂಗದಲ್ಲಿದ್ದ ನೂರಾರು ಕಾರ್ಮಿಕರು ಪ್ರಾಣಾಪಾಯದಲ್ಲಿ ಸಿಲುಕಿಕೊಂಡಿದ್ದರು. ಕೂಡಲೇ ಧಾವಿಸಿದ ರಕ್ಷಣಾ ಸಿಬ್ಬಂದಿ ಭೂಮಿ ಕೊರೆಯುವ ಯಂತ್ರಗಳನ್ನು ಬಳಸಿ, ಕಾರ್ಮಿಕರ ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದಾರೆ. 

3 /6

ವಿಶೇಷ ವಿಮಾನದಲ್ಲಿ ಡೆಹ್ರಾಡೂನಿಗೆ ಹಾರಿದ DRDO ಮತ್ತು SASE ವಿಜ್ಞಾನಿಗಳ ತಂಡ. ವಿಜ್ಞಾನಿಗಳು ಅನಾಹುತ ಸಂಭವಿಸಿದ ಸಂಪೂರ್ಣ ಪ್ರದೇಶದ ಸರ್ವೇಕ್ಷಣೆ ಮಾಡಲಿದ್ದಾರೆ.   

4 /6

ನಿರ್ಮಾಣ ಹಂತದಲ್ಲಿದ್ದ ತಪೋವನ ಸುರಂಗ ಪ್ರದೇಶದಲ್ಲಿ ಇರಬಹುದಾದ ಕಾರ್ಮಿಕರ ರಕ್ಷಣೆಗೆ ಶ್ವಾನ ದಳದ ನೆರವು ಪಡೆಯುತ್ತಿರುವ ರಕ್ಷಣಾ ಸಿಬ್ಬಂದಿ. 

5 /6

ಹಠಾತ್ ಪ್ರವಾಹದ ಕಾರಣ ರಿಷಿಕೇಶ್-ಜೋಶಿಮಠ-ಮನ ನಡುವಣ ಪ್ರಮುಖ ರಸ್ತೆಯೊಂದು ಬ್ಲಾಕ್ ಆಗಿತ್ತು. ಪ್ರವಾಹದ ಜೊತೆ ಹರಿದು ಬಂದ ಕಲ್ಲು, ಬಂಡೆಗಳೇ ಬ್ಲಾಕಿಗೆ ಕಾರಣವಾಗಿತ್ತು. ಸ್ಥಳಕ್ಕೆ ಧಾವಿಸಿದ BRO ಸಿಬ್ಬಂದಿ ಜೆಸಿಬಿ ಯಂತ್ರಗಳ ನೆರವಿನಿಂದ ರಸ್ತೆ ಮೇಲಿನ ಕಲ್ಲುಗಳನ್ನು ಸರಿಸಿ, ಸಂಚಾರ ಸುಗಮಗೊಳಿಸಿದರು.

6 /6

ಕಾರ್ಯಾಚರಣೆಯಲ್ಲಿ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಕೂಡಾ ಪಾಲ್ಗೊಂಡಿದ್ದಾರೆ. ಐಟಿಬಿಪಿ ತಂಡದ ತುಕಡಿಯೊಂದು ರಕ್ಷಣಾ ಕಾರ್ಯಕ್ಕೆ ಧಾವಿಸುತ್ತಿದೆ.