Vande Bharat Sleeper Train: ‘ವಂದೇ ಭಾರತ್‌’ನ ಸ್ಲೀಪರ್ ಕೋಚ್‍ನಲ್ಲಿ ಐಷಾರಾಮಿ ಹೋಟೆಲ್ ಅನುಭವ

Vande Bharat Sleeper Train: ‘ವಂದೇ ಭಾರತ್’ ಎಕ್ಸ್‌ಪ್ರೆಸ್ ರೈಲಿನ ಸ್ಲೀಪರ್ ಆವೃತ್ತಿಯು ಮುಂದಿನ ವರ್ಷ ಬಿಡುಗಡೆಯಾಗಲಿದೆ. ಸ್ಲೀಪರ್ ಕೋಚ್‍ ರೈಲಿನಲ್ಲಿ ನೀವು ಐಷಾರಾಮಿ ಹೋಟೆಲ್‍ನ ಅನುಭವ ಪಡೆದುಕೊಳ್ಳಬಹುದು.

ಸ್ಲೀಪರ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು: ದೇಶದ ಜನರ ನೆಚ್ಚಿನ ‘ವಂದೇ ಭಾರತ್’ ಎಕ್ಸ್‌ಪ್ರೆಸ್ ರೈಲು ಈಗ ಹೊಸ ರೂಪದಲ್ಲಿ ಕಾಣಿಸಿಕೊಳ್ಳಲಿದೆ. ಈ ರೈಲಿನ ಸ್ಲೀಪರ್ ಆವೃತ್ತಿಯು ಮುಂದಿನ ವರ್ಷ ಬಿಡುಗಡೆಯಾಗಲಿದೆ. ಇದರ ಚಿತ್ರಗಳನ್ನು ರೈಲ್ವೆ ಸಚಿವರು ಹಂಚಿಕೊಂಡಿದ್ದಾರೆ. ಈ ಸ್ಲೀಪರ್ ಕೋಚ್‍ ರೈಲಿನಲ್ಲಿ ನೀವು ಐಷಾರಾಮಿ ಹೋಟೆಲ್‍ನ ಅನುಭವ ಪಡೆದುಕೊಳ್ಳಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಮೂಲಗಳ ಪ್ರಕಾರ ವಂದೇ ಭಾರತ್ ಸ್ಲೀಪರ್ ರೈಲು 20 ರಿಂದ 22 ಕೋಚ್‌ಗಳನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ. ಇದರಲ್ಲಿ ಒಟ್ಟು 857 ಸೀಟುಗಳು ಇರಲಿವೆ. ಈ ಪೈಕಿ 34 ಸೀಟುಗಳನ್ನು ಸಿಬ್ಬಂದಿಗೆ ಮೀಸಲಿಡಲಾಗಿದ್ದು, 823 ಬರ್ತ್‌ಗಳು ಪ್ರಯಾಣಿಕರಿಗೆ ತೆರೆದಿರುತ್ತವೆ.

2 /5

ಈ ರೈಲಿನ ಒಳಾಂಗಣ ವಿನ್ಯಾಸವನ್ನು ಪಂಚತಾರಾ ಹೋಟೆಲ್ ಮಾದರಿಯಲ್ಲಿ ರೂಪಿಸಲಾಗಿದೆ. ಅಂದರೆ ಆಸನಗಳಿಂದ ಹಿಡಿದು ಮೆಟ್ಟಿಲುಗಳು, ದೀಪಗಳು, ಶುಚಿತ್ವ ಎಲ್ಲವೂ ನಿಮಗೆ ದೊಡ್ಡ ಹೋಟೆಲ್‌ನಲ್ಲಿ ಉಳಿದುಕೊಳ್ಳುವ ಅನುಭವ ನೀಡುತ್ತದೆ. ಇದರಿಂದ ಪ್ರಯಾಣಿಕರ ಪ್ರಯಾಣದ ಆನಂದ ದ್ವಿಗುಣಗೊಳ್ಳಲಿದೆ.

3 /5

ರೈಲ್ವೆ ಮೂಲಗಳ ಪ್ರಕಾರ ಸ್ಲೀಪರ್ ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಪ್ಯಾಂಟ್ರಿ ಕಾರ್ ಕಂಪಾರ್ಟ್‌ಮೆಂಟ್ ಇರುವುದಿಲ್ಲ. ಬದಲಾಗಿ ರೈಲಿನ ಪ್ರತಿ ಕೋಚ್‌ನಲ್ಲಿ ಮಿನಿ ಪ್ಯಾಂಟ್ರಿ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಂದ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಲಾಗುವುದು.

4 /5

ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಅಂಗವಿಕಲ ಪ್ರಯಾಣಿಕರನ್ನು ಹತ್ತಲು ಮತ್ತು ಡಿಬೋರ್ಡಿಂಗ್ ಮಾಡಲು ವಿಶೇಷ ವ್ಯವಸ್ಥೆ ಮಾಡಲಾಗಿದೆ. ಈ ರೈಲಿನಲ್ಲಿ ಅವರಿಗಾಗಿ ಇಳಿಜಾರು ಮತ್ತು ಗಾಲಿಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಫುಟ್ ರೆಸ್ಟ್ ಎಕ್ಸ್ ಟೆನ್ಷನ್ ಮತ್ತು ಮೆತ್ತನೆಯ ಸೀಟ್ ವ್ಯವಸ್ಥೆ ಮಾಡಲಾಗಿದೆ.

5 /5

ಪ್ರಸ್ತುತ ವಂದೇ ಭಾರತ್ ಸ್ಲೀಪರ್ ರೈಲು ಯಾವಾಗ ಪ್ರಾರಂಭವಾಗಲಿದೆ ಮತ್ತು ಆರಂಭದಲ್ಲಿ ಯಾವ ಮಾರ್ಗದಲ್ಲಿ ಚಲಿಸುತ್ತದೆ ಎಂಬುದರ ಕುರಿತು ಯಾವುದೇ ಪ್ರಕಟಣೆಯನ್ನು ತಿಳಿಸಿಲ್ಲ. ಮುಂದಿನ ವರ್ಷದ ಜನವರಿ-ಫೆಬ್ರವರಿಯಲ್ಲಿ ಇದರ ಪ್ರಯೋಗ ಪ್ರಾರಂಭವಾಗಬಹುದು ಮತ್ತು ಈ ರೈಲಿನ ಈ ಆವೃತ್ತಿಯು ಏಪ್ರಿಲ್ 2024ರ ವೇಳೆಗೆ ಕಾರ್ಯಾಚರಣೆಗೆ ಬರಬಹುದು ಎಂದು ನಂಬಲಾಗಿದೆ.