BREAKING NEWS

  • ರಾಜ್ಯದ ನೂತನ ಸಿಎಂ ಆಗಿ ಬಸವರಾಜ್ ಬೊಮ್ಮಾಯಿ ಆಯ್ಕೆ!
  • ನೂತನ ಸಿಎಂ ಆಯ್ಕೆ ಬೆನ್ನೆಲೆ ಮೂರುವ 'ಡಿಸಿಎಂ' ಗಳ ಆಯ್ಕೆ

ಪ್ಲಾಸ್ಟಿಕ್ ಬಾಟಲಿಗಳಿಂದ ತಯಾರಾಯಿತು ವೆನಿಲಾ ಫ್ಲೇವರ್; ತ್ಯಾಜ್ಯದಿಂದ ಹೊರಬಂತು ದುಬಾರಿ Chemical

ವೆನಿಲಾ ಫ್ಲೇವರ್ ಅನ್ನು ಆಹಾರ ಉತ್ಪನ್ನಗಳಲ್ಲಿ ಮತ್ತು ಸೌಂದರ್ಯವರ್ಧಕಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.
 

ನವದೆಹಲಿ : ಪ್ಲಾಸ್ಟಿಕ್ ಬಾಟಲಿಗಳಿಂದ ವೆನಿಲ್ಲಾ ಫ್ಲೇವರ್ (Vanilla) ಅನ್ನು ತಯಾರಿಸಲು ವಿಜ್ಞಾನಿಗಳು ಒಂದು ಮಾರ್ಗವನ್ನು ಕಂಡುಕೊಂಡಿದ್ದಾರೆ. ಭವಿಷ್ಯದಲ್ಲಿ ನಾವು ಪ್ಲಾಸ್ಟಿಕ್ ತ್ಯಾಜ್ಯದಿಂದ (Plastic waste) ತಯಾರಿಸಿದ ವೆನಿಲ್ಲಾ ಐಸ್ ಕ್ರೀಮ್ ಅನ್ನು ತಿನ್ನುವ ದಿನಗಳೂ ದೂರವಿಲ್ಲ ಎನ್ನಲಾಗಿದೆ. ವೆನಿಲಾ ಫ್ಲೇವರ್ ಅನ್ನು ಆಹಾರ ಉತ್ಪನ್ನಗಳಲ್ಲಿ ಮತ್ತು ಸೌಂದರ್ಯವರ್ಧಕಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಜಗತ್ತಿನಲ್ಲಿ ಪ್ಲಾಸ್ಟಿಕ್‌ನಿಂದ ಉಂಟಾಗುವ ಮಾಲಿನ್ಯವನ್ನು ಎದುರಿಸಲು ಇದು ಬಹಳ ಸಹಾಯವಾಗಲಿದೆ ಎನ್ನುವುದು  ವಿಜ್ಞಾನಿಗಳ ಮಾತು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಪ್ಲಾಸ್ಟಿಕ್ ಬಾಟಲಿಗಳನ್ನು ವೆನಿಲ್ಲಾ ಪರಿಮಳಕ್ಕೆ ಪರಿವರ್ತಿಸಲು ವಿಜ್ಞಾನಿಗಳು ಜೆನೆಟಿಕಲ್ ಇಂಜಿನಿಯರ್ಡ್ ಬ್ಯಾಕ್ಟೀರಿಯಾದ ಸಹಾಯವನ್ನು ಪಡೆದಿದ್ದಾರೆ. ಪ್ಲಾಸ್ಟಿಕ್ ಬಾಟಲಿಗಳಿಂದ ದುಬಾರಿ ರಾಸಾಯನಿಕವನ್ನು ತಯಾರಿಸುತ್ತಿರುವುದು ಇದೇ ಮೊದಲು. ಜಗತ್ತಿನಲ್ಲಿ ಹೆಚ್ಚುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ನಿಭಾಯಿಸಲು ಇದು ಸಹಾಯ ಮಾಡಲಿದೆ. ಪ್ರಸ್ತುತ, ಪ್ಲಾಸ್ಟಿಕ್ ಬಾಟಲಿಗಳು ಒಂದೇ ಬಳಕೆಯ ನಂತರ ಅದರ ಮೌಲ್ಯದ 95 ಪ್ರತಿಶತವನ್ನು ಕಳೆದುಕೊಳ್ಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ದುಬಾರಿ ರಾಸಾಯನಿಕಗಳ ರಚನೆಯಿಂದಾಗಿ, ಈ ವಸ್ತುವಿನ ಬೆಲೆಯೂ ಹೆಚ್ಚಾಗಬಹುದು. 

2 /5

ದಿ ಗಾರ್ಡಿಯನ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ವಿಜ್ಞಾನಿಗಳು ಈ ಹಿಂದೆ ಪಾಲಿಥಿಲೀನ್ ಟೆರೆಫ್ತಲೇಟ್ ಪಾಲಿಮರ್‌ಗಳಿಂದ ತಯಾರಿಸಿದ ಪ್ಲಾಸ್ಟಿಕ್ ಬಾಟಲಿಗಳಿಂದ ರೂಪಾಂತರಿತ ಕಿಣ್ವಗಳನ್ನು ತಯಾರಿಸಿದ್ದರು. ಈ ಪ್ಲಾಸ್ಟಿಕ್ ಅನ್ನು ಟೆರೆಫ್ತಾಲಿಕ್ ಆಮ್ಲ ಎಂದೂ ಕರೆಯುತ್ತಾರೆ. ಈಗ ವಿಜ್ಞಾನಿಗಳು ಬಗ್ ಅನ್ನು ವೆನಿಲಿನ್ ಆಗಿ ಪರಿವರ್ತಿಸಲು ಬಳಸಿದ್ದಾರೆ. ವೆನಿಲಿನ್ ಸಂಯುಕ್ತದ ಪರಿಮಳ ವೆನಿಲ್ಲಾವನ್ನು ಹೋಲುತ್ತದೆ ಮತ್ತು ಅದು ಅದೇ ರುಚಿಯನ್ನು ಕೂಡಾ ಹೊಂದಿರುತ್ತದೆ. ಈ ಫ್ಲೇವರಿಗೆ ಪ್ರಪಂಚದಾದ್ಯಂತ ಭಾರಿ ಬೇಡಿಕೆಯಿದೆ. 

3 /5

ಗ್ರೀನ್ ಕೆಮಿಸ್ಟ್ರಿ ಜರ್ನಲ್ ನಲ್ಲಿ ಪ್ರಕಟವಾದ ಸಂಶೋಧನಾ ಪ್ರಬಂಧದ ಪ್ರಕಾರ, ಟಿಎ ಅನ್ನು ವೆನಿಲಿನ್ ಆಗಿ ಪರಿವರ್ತಿಸಲು ಎಂಜಿನಿಯರ್ಡ್ ಇ.ಕೋಲಯಿ ಬ್ಯಾಕ್ಟೀರಿಯಾವನ್ನು ಬಳಸಲಾಗಿದೆ. ಇದು 79 ಪ್ರತಿಶತ ಟಿಎ ಅನ್ನು ವೆನಿಲಿನ್‌ಗೆ ಪರಿವರ್ತಿಸಿದ್ದು, ಇದು ಉತ್ತಮ ಫಲಿತಾಂಶವಾಗಿದೆ.  

4 /5

ಈ ಆವಿಷ್ಕಾರ ಮಾಡಿದ ವಿಜ್ಞಾನಿಗಳ ತಂಡವನ್ನು ಮುನ್ನಡೆಸಿದ ಎಡಿನ್‌ಬರ್ಗ್ ವಿಶ್ವವಿದ್ಯಾಲಯದ ಪ್ರೊಫೆಸರ್ ಜೊವಾನ್ನಾ ಸ್ಯಾಡ್ಲರ್, 'ಪ್ಲಾಸ್ಟಿಕ್ ತ್ಯಾಜ್ಯವನ್ನು ದುಬಾರಿ ಕೈಗಾರಿಕಾ ರಾಸಾಯನಿಕವಾಗಿ ಮರುಬಳಕೆ ಮಾಡಲು ಜೈವಿಕ ವ್ಯವಸ್ಥೆಯನ್ನು ಬಳಸುವುದು ಇದೇ ಮೊದಲು ಮತ್ತು ಇದರಿಂದ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು ಎಂದಿದ್ದಾರೆ.

5 /5

ಜಗತ್ತಿನಲ್ಲಿ ಪ್ರತಿ ನಿಮಿಷಕ್ಕೆ ಸುಮಾರು ಒಂದು ಮಿಲಿಯನ್ ಪ್ಲಾಸ್ಟಿಕ್ ಬಾಟಲಿಗಳು ಮಾರಾಟವಾಗುತ್ತವೆ, ಆದರೆ ಇವುಗಳಲ್ಲಿ ಕೇವಲ 14 ಪ್ರತಿಶತ ಮಾತ್ರ ಮರುಬಳಕೆಯಾಗುತ್ತದೆ.

You May Like

Sponsored by Taboola