Vastu Tips: ಅಂಗಡಿ-ಕಛೇರಿಯಲ್ಲಿ ಮಿಸ್ ಆಗಿ ಕೂಡ ದೇವರ ಇಂತಹ ಫೋಟೋ ಹಾಕಬೇಡಿ, ಲಾಭದ ಬದಲಿಗೆ ದೊಡ್ಡ ನಷ್ಟವಾದೀತು, ಎಚ್ಚರ!

                          

Vastu Tips: ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ, ಅವರ ಏಳಿಗೆಗೆ, ಆರ್ಥಿಕ ಸ್ಥಿತಿಗೆ ಮನೆಯ ವಾಸ್ತು ಜೊತೆಗೆ ಅಂಗಡಿ, ಕಾರ್ಖಾನೆ, ಕಚೇರಿಯ ವಾಸ್ತು ಸೇರಿದಂತೆ ಹಲವು ಅಂಶಗಳ ಬಗ್ಗೆ ಗಮನ ಹರಿಸುವುದು ಕೂಡ ಬಹಳ ಮುಖ್ಯವಾಗುತ್ತದೆ.  ಕೆಲಸದ ಸ್ಥಳದಲ್ಲಿ ಎಲ್ಲವನ್ನೂ ಸರಿಯಾದ ದಿಕ್ಕಿನಲ್ಲಿ ಅಥವಾ ಸ್ಥಳದಲ್ಲಿ ಇಟ್ಟುಕೊಳ್ಳುವುದರ ಜೊತೆಗೆ, ದೇವರ ಮನೆ ವಾಸ್ತು ಪ್ರಕಾರಇರುವುದು ಬಹಳ ಮುಖ್ಯ. ಇಂದು ನಾವು ಕೆಲಸದ ಸ್ಥಳದಲ್ಲಿ ಪೂಜೆಯ ಸ್ಥಳ ಹೇಗಿರಬೇಕು ಎಂಬುದರ ಕುರಿತು ಕೆಲವು ಪ್ರಮುಖ ನಿಯಮಗಳನ್ನು ತಿಳಿಸ;ಲಿದ್ದೇವೆ. ಗಮನಾರ್ಹವಾಗಿ, ಅಂಗಡಿ-ಕಛೇರಿಯಲ್ಲಿ ಇಡುವ ಕೆಲವು ದೇವರ ಫೋಟೋಗಳು ನಿಮಗೆ ಲಾಭದ ಬದಲಿಗೆ ಭಾರೀ ನಷ್ಟವನ್ನು ಉಂಟುಮಾಡಬಹುದು ಎಂಬುದು ನಿಮಗೆ ತಿಳಿದಿದೆಯೇ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಅಂಗಡಿ, ಕಾರ್ಖಾನೆ, ಕಚೇರಿ ಮುಂತಾದ ವ್ಯಾಪಾರ-ಉದ್ಯೋಗಕ್ಕೆ ಸಂಬಂಧಿಸಿದ ಸ್ಥಳದಲ್ಲಿ ನಿರ್ಮಿಸಲಾಗಿರುವ ಪೂಜಾ ಮನೆಯಲ್ಲಿ ಅನೇಕ ದೇವತೆಗಳ ಫೋಟೋಗಳನ್ನು ಹಾಕಬೇಡಿ. ವಾಸ್ತು ಪ್ರಕಾರ ಇಂತಹ ಸ್ಥಳಗಳಲ್ಲಿ ಗಣೇಶ, ಸರಸ್ವತಿ ಮತ್ತು ಲಕ್ಷ್ಮಿ ದೇವಿಯ ಫೋಟೋಗಳನ್ನು ಹಾಕುವುದು ಸೂಕ್ತ.   

2 /5

ಕುಳಿತು ಕೊಳ್ಳುವ ಭಂಗಿಯಲ್ಲಿರುವ ದೇವ-ದೇವತೆಗಳ ಫೋಟೋಗಳನ್ನು ಅಂಗಡಿ, ಕಾರ್ಖಾನೆ ಅಥವಾ ಕಚೇರಿಯಲ್ಲಿ ಎಂದಿಗೂ ಇರಿಸಬಾರದು ಎಂದು ಹೇಳಲಾಗುತ್ತದೆ. ಲಕ್ಷ್ಮಿ (Goddess Lakshm), ಸರಸ್ವತಿ (Goddess Saraswati) ಮತ್ತು ಗಣೇಶ (Lord Ganesha) ದೇವರ ಕುಳಿತಿರುವ ಫೋಟೋವನ್ನು ಹಾಕುವುದರಿಂದ ವ್ಯಕ್ತಿಯಲ್ಲಿ ಬುದ್ಧಿವಂತಿಕೆ ಮತ್ತು ಜ್ಞಾನದ ಕೊರತೆ ಉಂಟಾಗಬಹುದು. ಜೊತೆಗೆ ವ್ಯಾಪಾರದಲ್ಲಿ ಏಳಿಗೆ ಇರುವುದಿಲ್ಲ ಎಂದು ಹೇಳಲಾಗುತ್ತದೆ.  

3 /5

ವಾಸ್ತು ನಿಯಮಗಳ ಪ್ರಕಾರ (Vastu Rules), ಕೆಲಸದ ಸ್ಥಳದಲ್ಲಿ ಈ ಮೂರು ದೇವತೆಗಳ ಖಡ್ಗಾಸನ (ನಿಂತಿರುವ ಭಂಗಿ) ರೂಪವನ್ನು ಪೂಜಿಸುವುದರಿಂದ ಕಾರ್ಯಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ, ಸಂಪತ್ತು ಮತ್ತು ಏಳಿಗೆ ಆಗಲಿದೆ ಎಂಬ ನಂಬಿಕೆ ಇದೆ. ಇದನ್ನೂ ಓದಿ- Vastu Tips: ಮನೆಯಲ್ಲಿನ ಗಣೇಶನ ವಿಗ್ರಹಕ್ಕೆ ಸಂಬಂಧಿಸಿದ ಈ ಸಂಗತಿ ನಿಮಗೆ ತಿಳಿದಿದೆಯೇ?

4 /5

ಕೆಲಸದ ಸ್ಥಳದ (Workplace) ಪೂಜಾ ಕೋಣೆಯಲ್ಲಿ ಎಂದಿಗೂ ತೇವ ಅಥವಾ ಕತ್ತಲೆ ಇರಬಾರದು ಎಂಬುದನ್ನು ಯಾವಾಗಲೂ ನೆನಪಿನಲ್ಲಿಡಿ. ರಾತ್ರಿಯ ಸಮಯದಲ್ಲಿಯೂ ಅಲ್ಲಿ ಮಂದ ಬೆಳಕನ್ನು ಚೆಲ್ಲುವ ಲೈಟ್ ಇರಲಿ. ಇದನ್ನೂ ಓದಿ- Kitchen Hacks: ದೀರ್ಘ ಕಾಲದವರೆಗೆ ಪನ್ನೀರ್ ಅನ್ನು ಫ್ರೆಶ್ ಆಗಿಡಲು ಈ ವಿಧಾನ ಅನುಸರಿಸಿ

5 /5

ಕೆಲಸದ ಸ್ಥಳದ ಋಣಾತ್ಮಕ ಶಕ್ತಿಯನ್ನು (Negative Energy) ತೊಡೆದುಹಾಕಲು, ಪ್ರತಿ ದಿನ ಸಂಜೆ ಪೂಜಾ ಕೋಣೆಯಲ್ಲಿ/ ಪೂಜೆ ಮಾಡುವ ಸ್ಥಳದಲ್ಲಿ ಕರ್ಪೂರವನ್ನು ಬೆಳಗಿಸಬೇಕು. ಹಾಗೆಯೇ ಪ್ರತಿದಿನ ತುಪ್ಪದ ದೀಪವನ್ನು ಹಚ್ಚುವುದರಿಂದ ಒಳ್ಳೆಯದಾಗುತ್ತೆ ಎಂದು ಹೇಳಲಾಗುತ್ತದೆ. (ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)