Vastu Tips: ವಾಸ್ತು ಪ್ರಕಾರ, ಮನೆಯ ಮುಖ್ಯ ದ್ವಾರದಲ್ಲಿ ಕೆಲವು ವಸ್ತುಗಳನ್ನು ಇಡುವುದರಿಂದ ಅಂತಹ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಪ್ರವೇಶಿಸುತ್ತವೆ. ಮಾತ್ರವಲ್ಲ, ಆ ಮನೆಯಲ್ಲಿ ಸುಖ-ಸಂತೋಷಕ್ಕೆ ಎಂದಿಗೂ ಕೊರತೆ ಆಗುವುದಿಲ್ಲ ಎಂದು ಹೇಳಲಾಗುತ್ತದೆ.
Vastu Tips: ಮನೆಯ ಮುಖ್ಯ ದ್ವಾರ ಮಹತ್ವದ್ದಾಗಿದೆ. ಯಾರೇ ಆದರೂ ಮನೆಯ ಮುಖ್ಯ ದ್ವಾರದ ಮೂಲಕ ಮನೆಯನ್ನು ಪ್ರವೇಶಿಸುತ್ತಾರೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಸಂಪತ್ತಿನ ದೇವತೆಯಾದ ತಾಯಿ ಲಕ್ಷ್ಮಿ ಕೂಡ ಮನೆಯ ಮುಖ್ಯ ದ್ವಾರದ ಮೂಲಕವೇ ಪ್ರವೇಶಿಸುತ್ತಾಳೆ. ಹಾಗಾಗಿಯೇ, ಮನೆಯ ಮುಖ್ಯ ದ್ವಾರಕ್ಕೆ ಸಂಬಂಧಿಸಿದಂತೆ ವಾಸ್ತುವಿನಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ. ವಾಸ್ತು ಪ್ರಕಾರ, ಮನೆಯ ಮುಖ್ಯ ದ್ವಾರದಲ್ಲಿ ಕೆಲವು ವಸ್ತುಗಳನ್ನು ಇಡುವುದರಿಂದ ಅಂತಹ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಪ್ರವೇಶಿಸುತ್ತವೆ. ಮಾತ್ರವಲ್ಲ, ಆ ಮನೆಯಲ್ಲಿ ಸುಖ-ಸಂತೋಷಕ್ಕೆ ಎಂದಿಗೂ ಕೊರತೆ ಆಗುವುದಿಲ್ಲ ಎಂದು ಹೇಳಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಮುಖ್ಯ ದ್ವಾರಕ್ಕೆ ಸಂಬಂಧಿಸಿದಂತೆ ವಾಸ್ತು ಸಲಹೆ: ಮುಖ್ಯ ದ್ವಾರಕ್ಕೆ ಸಂಬಂಧಿಸಿದಂತೆ ವಾಸ್ತು ಸಲಹೆಗಳನ್ನು ಅನುಸರಿಸುವುದರಿಂದ ಅಂತಹ ಮನೆಯಲ್ಲಿ ಸುಖ-ಸಮೃದ್ಧಿಯ ಬಾಗಿಲು ತೆರೆಯಬಹುದು ಎಂದು ಹೇಳಲಾಗುತ್ತದೆ. ಹಾಗಾದರೆ ಮುಖ್ಯ ಬಾಗಿಲಿಗೆ ಸಂಬಂಧಿಸಿದ ವಾಸ್ತು ಸಲಹೆಗಳು ಯಾವುವು, ಮುಖ್ಯ ದ್ವಾರದ ಬಳಿ ಯಾವ ವಸ್ತುಗಳನ್ನು ಇಡುವುದರಿಂದ ಭಾಗ್ಯೋದಯವಾಗುತ್ತದೆ ಎಂದು ತಿಳಿಯೋಣ-
ಮುಖ್ಯ ದ್ವಾರ ಈ ದಿಕ್ಕಿಗಿದ್ದರೆ ಶುಭ: ವಾಸ್ತು ಶಾಸ್ತ್ರದ ಪ್ರಕಾರ ಉತ್ತರ, ಈಶಾನ್ಯ, ಪೂರ್ವ ಅಥವಾ ಪಶ್ಚಿಮ ದಿಕ್ಕಿನಲ್ಲಿ ಮುಖ್ಯ ದ್ವಾರವಿದ್ದರೆ ಶುಭ. ಮುಖ್ಯ ಬಾಗಿಲು ಮನೆಯ ಉಳಿದ ಬಾಗಿಲುಗಳಿಗಿಂತ ದೊಡ್ಡದಾಗಿರಬೇಕು. ಅಲ್ಲದೆ ಬಾಗಿಲು ಪ್ರದಕ್ಷಿಣಾಕಾರವಾಗಿ ತೆರೆಯಬೇಕು. ಮನೆಯಲ್ಲಿ ಸಮೃದ್ಧಿಗಾಗಿ, ಗಣಪತಿ ಬಪ್ಪನ ವಿಗ್ರಹವನ್ನು ಮನೆಯ ಮುಖ್ಯ ದ್ವಾರದಲ್ಲಿ ಇಡುವುದು ಮಂಗಳಕರವಾಗಿದೆ.
ಸ್ವಸ್ತಿಕ: ಮನೆಯ ಮುಖ್ಯ ಬಾಗಿಲಿನಲ್ಲಿ ಸ್ವಸ್ತಿಕ ಚಿಹ್ನೆ ಇರುವುದನ್ನು ತುಂಬಾ ಮಂಗಳಕರ ಎಂದು ಪರಿಗಣಿಸಲಾಗಿದೆ. ಈ ಚಿಹ್ನೆಯು ವಾಸ್ತು ದೋಷಗಳನ್ನು ತೆಗೆದುಹಾಕುವಲ್ಲಿ ಸಹಾಯಕವಾಗಿದೆ. ವಿಶೇಷವಾಗಿ ಕೆಂಪು ಬಣ್ಣದಿಂದ ಮಾಡಿದ ಸ್ವಸ್ತಿಕವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ತುಳಸಿ ಗಿಡ: ಮುಖ್ಯ ದ್ವಾರದ ಬಳಿ ತುಳಸಿ ಗಿಡವನ್ನು ಇಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ತುಳಸಿಯನ್ನು ವಿಷ್ಣುವಿಗೆ ಪ್ರಿಯವೆಂದು ಪರಿಗಣಿಸಲಾಗುತ್ತದೆ, ತುಳಸಿಯನ್ನು ಬಾಗಿಲಲ್ಲಿ ಇಟ್ಟರೆ ತಾಯಿ ಲಕ್ಷ್ಮಿಯು ಪ್ರಸನ್ನಳಾಗುತ್ತಾಳೆ. ತುಳಸಿ ಸಸ್ಯವು ಸಕಾರಾತ್ಮಕತೆಯ ಸಂಕೇತವಾಗಿದೆ.
ಮಂಗಳ ಕಲಶ: ಪ್ರತಿದಿನ ಮನೆಯ ಮುಖ್ಯದ್ವಾರದಲ್ಲಿ ನೀರು ತುಂಬಿದ ಮಂಗಳ ಕಲಶವನ್ನು ಇಡುವುದು ಕಷ್ಟವಾಗುತ್ತದೆ. ಹಬ್ಬ ಹರಿದಿನಗಳಲ್ಲಿ ಇದನ್ನು ಮಾಡಬಹುದು. ವಿಶೇಷವಾಗಿ, ಮನೆಯ ಮುಖ್ಯದ್ವಾರದಲ್ಲಿ ನೀರು ತುಂಬಿದ ಮಂಗಳ ಕಲಶವನ್ನು ಇಡುವುದು ಮಂಗಳಕರ. ಮಂಗಳ ಕಲಶವು ನಕಾರಾತ್ಮಕ ಶಕ್ತಿಯನ್ನು ಮನೆಯಿಂದ ಹೊರಗಿಡುತ್ತದೆ ಮತ್ತು ಸಕಾರಾತ್ಮಕ ಶಕ್ತಿ ಮನೆಯನ್ನು ಪ್ರವೇಶಿಸುವಂತೆ ಮಾಡುತ್ತದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.