Tips To Lower Blood Sugar: ಇತ್ತೀಚಿನ ದಿನಗಳಲ್ಲಿ ತುಂಬಾ ಹೆಚ್ಚಾಗಿ ಬೆಳೆಯುತ್ತಿರುವ ಕಾಯಿಲೆ ಎಂದರೆ 'ಮಧುಮೇಹ'. ಮೊದಲೆಲ್ಲಾ 40ವರ್ಷ ತುಂಬಿದ ಮೇಲೆ ಬರುತ್ತಿದ್ದ ಈ ಕಾಯಿಲೆ ಇದೀಗ ಚಿಕ್ಕ ವಯಸ್ಸಿನವರಲ್ಲೂ ಕಾಣಿಸಿಕೊಳ್ಳುತ್ತಿದೆ.
ಬೆಂಗಳೂರು: ಮಧುಮೇಹ ನಿಯಂತ್ರಣಕ್ಕೆ ಆಹಾರದ ವಿಷಯದಲ್ಲಿ ವಿಶೇಷ ಕಾಳಜಿ ಅಗತ್ಯವಾಗಿದೆ. ನೀವು ತಿನ್ನುವ ಆಹಾರದಿಂದಲೇ ಶುಗರ್ ಲೆವೆಲ್ ಅನ್ನು ಕೂಡ ಸುಲಭವಾಗಿ ನಿಯಂತ್ರಿಸಬಹುದು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಮಧುಮೇಹ ರೋಗಿಗಳಲ್ಲಿ ಶುಗರ್ ಲೆವೆಲ್ ಆಗಾಗ್ಗೆ ಹೆಚ್ಚಾಗುತ್ತದೆ. ಆದರೆ, ನಿಮ್ಮ ದೈನಂದಿನ ಆಹಾರಗಳಲ್ಲಿ ಕೆಲವು ತರಕಾರಿಗಳನ್ನು ತಿನ್ನುವುದರಿಂದ ಬ್ಲಡ್ ಶುಗರ್ ಎಷ್ಟೇ ಹೈ ಆಗಿದ್ದರೂ ಕೂಡ ಸುಲಭವಾಗಿ ಕಂಟ್ರೋಲ್ ಮಾಡಬಹುದು. ನೈಸರ್ಗಿಕವಾಗಿ ಶುಗರ್ ಕಂಟ್ರೋಲ್ ಮಾಡಬಲ್ಲ ತರಕಾರಿಗಳೆಂದರೆ...
ಹಾಗಲಕಾಯಿ: ರುಚಿಯಲ್ಲಿ ಕಹಿ ಎಂಬ ಕಾರಣಕ್ಕೆ ಕೆಲವರು ಹಾಗಲಕಾಯಿ ಹೆಸರು ಕೇಳಿದ್ರೆ ಮೂಗು ಮುರಿತಾರೆ. ಆದರೆ, ಇದರಲ್ಲಿ ಚರಂಟಿನ್ ಮತ್ತು ಪಾಲಿಪೆಪ್ಟೈಡ್-ಪಿ ಸಂಯುಕ್ತಗಳಿದ್ದು ಇದರ ಸೇವನೆಯಿಂದ ಶುಗರ್ ನಿಯಂತ್ರಣದಲ್ಲಿರುತ್ತದೆ.
ಪಾಲಕ್ ಸೊಪ್ಪು: ಪಾಲಕ್ ಸೊಪ್ಪು ಮೆಗ್ನೀಸಿಯಮ್ ಮತ್ತು ಫೈಬರ್ನಲ್ಲಿ ಹೆರಳವಾಗಿರುವುದರಿಂದ ಇದರ ಸೇವನೆಯಿಂದ ದೇಹದಲ್ಲಿ ಶುಗರ್ ಲೆವೆಲ್ ಸ್ಥಿರತೆಗೊಳ್ಳುತ್ತದೆ. ಜೊತೆಗೆ ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಕೂಡ ಸುಧಾರಿಸುತ್ತದೆ.
ಬೆಂಡೆಕಾಯಿ: ಕರಗುವ ಫೈಬರ್ನಲ್ಲಿ ಪ್ಯಾಕ್ ಮಾಡಲಾಗಿರುವ ಬೆಂಡೆಕಾಯಿ ದೇಹವು ಗ್ಲೂಕೋಸ್ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸಿ ಬ್ಲಡ್ ಶುಗರ್ ಸ್ಪೈಕ್ ತಡೆಯುತ್ತದೆ. ಹಾಗಾಗಿ ಮಧುಮೆಹಿಗಳಿಗೆ ಇದೊಂದು ಅತ್ಯುತ್ತಮವಾದ ತರಕಾರಿ ಆಗಿದೆ.
ಬ್ರೊಕೊಲಿ: ಬ್ರೊಕೊಲಿಯಲ್ಲಿ ಸಲ್ಫೋರಾಫೇನ್ ಎಂಬ ಸಂಯುಕ್ತವಿದ್ದು ಇದು ಇನ್ಸುಲಿನ್ ಪ್ರತಿರೋಧವನ್ನು ಸುಧಾರಿಸಿ ಬ್ಲಡ್ ಶುಗರ್ ಹೆಚ್ಚಾಗುವುದನ್ನು ನಿಯಂತ್ರಿಸುತ್ತದೆ. ಹಾಗಾಗಿ, ಮಧುಮೇಹಿಗಳು ಈ ತರಕಾರಿಯನ್ನು ನಿಯಮಿತವಾಗಿ ಸೇವಿಸುವುದು ಒಳ್ಳೆಯದು.
ಸಿಹಿಗೆಣಸು: ಸಿಹಿಗೆಣಸಿನಲ್ಲಿ ಅಡಕವಾಗಿರುವ ಕಡಿಮೆ-ಗ್ಲೈಸೆಮಿಕ್ ಸೂಚ್ಯಂಕವು ಬ್ಲಡ್ ಶುಗರ್ ಸ್ಥಿರವಾಗಿರುವಂತೆ ಮಾಡುತ್ತದೆ. ಹಾಗಾಗಿ, ಮಧುಮೆಹಿಗಳಿಗೆ ಈ ತರಕಾರಿ ವರದಾನವಿದ್ದಂತೆ ಎನ್ನಲಾಗುತ್ತದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.