Shukra Gochar: ಈ ರಾಶಿಯವರ ಹಣೆ ಬರಹವನ್ನೇ ಬದಲಿಸುವ ಶುಕ್ರ.. ಅಪಾರ ಧನಾಗಮನ, ವೈಭವದ ಜೀವನ

Venus Transit: ಸಂಪತ್ತು ಮತ್ತು ಐಷಾರಾಮಿ ಜೀವನವನ್ನು ನೀಡುವ ಶುಕ್ರನು ಸಿಂಹ ರಾಶಿಯನ್ನು ಪ್ರವೇಶಿಸಲಿದ್ದಾನೆ. ಶುಕ್ರ ಸಂಕ್ರಮಣದ ನಂತರ ಎಲ್ಲಾ 12 ರಾಶಿಗಳ ಜೀವನ, ಆರ್ಥಿಕ ಸ್ಥಿತಿ ಮತ್ತು ಸಂತೋಷದ ಮೇಲೆ ಪರಿಣಾಮ ಬೀರುತ್ತದೆ. 
 

Shukra Gochar 2023: ಶುಕ್ರ ದೇವನನ್ನು ಸಂಪತ್ತು, ವೈಭವ, ಐಷಾರಾಮಿ, ದೈಹಿಕ ಸಂತೋಷ, ಪ್ರೀತಿ, ಇಂದ್ರಿಯತೆ ಮತ್ತು ಐಶ್ವರ್ಯವನ್ನು ಕೊಡುವವ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಗಣಿಸಲಾಗಿದೆ. ಅದಕ್ಕಾಗಿಯೇ ಶುಕ್ರನ ರಾಶಿ ಬದಲಾವಣೆಯು ಜೀವನದ ಈ ಎಲ್ಲಾ ಅಂಶಗಳ ಮೇಲೆ ಪರಿಣಾಮ ಬೀರುತ್ತದೆ. 

1 /5

ಸಿಂಹ ರಾಶಿಗೆ ಶುಕ್ರ ಸಂಚಾರ : ಶುಕ್ರವು ಪ್ರಸ್ತುತ ಕರ್ಕಾಟಕ ರಾಶಿಯಲ್ಲಿದ್ದು ಜುಲೈ 7 ರಂದು ಸಿಂಹ ರಾಶಿಗೆ ಪ್ರವೇಶಿಸುತ್ತಾನೆ. ಶುಕ್ರನ ಸಂಕ್ರಮವು ಎಲ್ಲಾ 12 ರಾಗಳ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಮತ್ತೊಂದೆಡೆ, 3 ರಾಶಿಗಳ ಜನರಿಗೆ, ಶುಕ್ರನ ಸಿಂಹ ರಾಶಿ ಪ್ರವೇಶವು ತುಂಬಾ ಶುಭ ಫಲಿತಾಂಶಗಳನ್ನು ನೀಡುತ್ತದೆ.   

2 /5

ಶುಕ್ರ ಗೋಚಾರ : ಈ ಜನರು ಇದ್ದಕ್ಕಿದ್ದಂತೆ ಹಣವನ್ನು ಪಡೆಯಬಹುದು. ಅದೃಷ್ಟ ಬೆಳಗಬಹುದು. ಜೀವನದಲ್ಲಿ ನೆಮ್ಮದಿ ಹೆಚ್ಚಾಗಬಹುದು. ಶುಕ್ರನ ಸಂಚಾರದಿಂದ ಬಲವಾದ ಲಾಭಗಳನ್ನು ಪಡೆಯುವ ಅದೃಷ್ಟದ ರಾಶಿ ಗಳು ಯಾವುವು ಎಂದು ತಿಳಿಯೋಣ.

3 /5

ಮಿಥುನ: ಈ ಜನರು ತಮ್ಮ ಮಕ್ಕಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ನವವಿವಾಹಿತರ ಜೀವನದಲ್ಲಿ ಮಕ್ಕಳನ್ನು ಪಡೆಯುವ ಅವಕಾಶ ಹೆಚ್ಚಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಉಳಿತಾಯ ಮಾಡುವಲ್ಲಿ ಯಶಸ್ವಿಯಾಗುತ್ತೀರಿ. ಕಚೇರಿಯಲ್ಲಿ ಮೆಚ್ಚುಗೆ ಪಡೆಯುವಿರಿ. ಉದ್ಯಮಿಗಳಿಗೂ ಲಾಭವಾಗಲಿದೆ.

4 /5

ತುಲಾ: ಈ ರಾಶಿಯ ಅಧಿಪತಿ ಶುಕ್ರ. ಹೀಗಾಗಿ ಶುಕ್ರ ಸಂಚಾರ ಇವರಿಗೆ ತುಂಬಾ ಶುಭ ಫಲ ನೀಡುತ್ತದೆ. ಆದಾಯ ಹದ್ವಿಗುಣಗೊಳ್ಳಲಿದೆ. ಎಲ್ಲಿಂದಲಾದರೂ ಇದ್ದಕ್ಕಿದ್ದಂತೆ ಹಣ ಸಿಗುತ್ತದೆ. ಉದ್ಯೋಗಸ್ಥರು ಪ್ರಗತಿ ಹೊಂದುವರು. ಬಹಳ ದಿನಗಳಿಂದ ಕಾಯುತ್ತಿದ್ದ ಬಡ್ತಿ ಅಥವಾ ಹೊಸ ಕೆಲಸ ಸಿಗುವ ಸಾಧ್ಯತೆ ದಟ್ಟವಾಗಿದೆ. ಹೊಸ ವ್ಯವಹಾರ ಪ್ರಾರಂಭಿಸಲು ಉತ್ತಮ ಸಮಯ. ಹೂಡಿಕೆಯಿಂದ ಲಾಭ, ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ.

5 /5

ಕುಂಭ: ಇವರಿಗೆ ಬಹಳಷ್ಟು ಲಾಭವನ್ನು ಶುಕ್ರ ನೀಡುತ್ತಾನೆ. ಹೊಸ ಮನೆ, ಕಾರು, ಐಷಾರಾಮಿ ವಸ್ತುಗಳನ್ನು ಖರೀದಿಸಬಹುದು. ನಿಮ್ಮ ಅದೃಷ್ಟದ ದಯೆಯಿಂದ ಆದಾಯದಲ್ಲಿ ಹೆಚ್ಚಳವಾಗಬಹುದು. ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ವ್ಯಾಪಾರ ಚೆನ್ನಾಗಿ ನಡೆಯುತ್ತದೆ. ಆರ್ಥಿಕ ಸ್ಥಿತಿಯ ಬಲಗೊಳ್ಳಲಿದೆ. ವೈವಾಹಿಕ ಜೀವನದಲ್ಲಿ ಸಂತೋಷ ತುಂಬಿರುತ್ತದೆ.