ತಮ್ಮ ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಾರೆ ಈ ರಾಶಿಯವರು ! ನಿಭಾಯಿಸುವುದು ಬಲು ಕಷ್ಟ

 ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 4 ರಾಶಿಯ ಜನರು ಪ್ರತಿ ಕೆಲಸವನ್ನು ತಮ್ಮ ಇಚ್ಛೆಗೆ ಅನುಗುಣವಾಗಿಯೇ ಮಾಡುತ್ತಾರೆ. 

ನವದೆಹಲಿ : ಜ್ಯೋತಿಷ್ಯದಲ್ಲಿ, ಎಲ್ಲಾ 12 ರಾಶಿಗಳ ಜನರ ಸ್ವಭಾವದ ಕೆಲವು ಗುಣಲಕ್ಷಣಗಳನ್ನು ಹೇಳಲಾಗಿದೆ. ರಾಶಿಗನುಗುನವಾಗಿ ವ್ಯಕ್ತಿಯ ಸಾಮರ್ಥ್ಯಗಳು ಮತ್ತು ನ್ಯೂನತೆಗಳನ್ನು ಕೂಡಾ ಹೇಳಲಾಗಿದೆ.  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 4 ರಾಶಿಯ ಜನರು ಪ್ರತಿ ಕೆಲಸವನ್ನು ತಮ್ಮ ಇಚ್ಛೆಗೆ ಅನುಗುಣವಾಗಿಯೇ ಮಾಡುತ್ತಾರೆ. ತಮ್ಮ ಮನಸ್ಸಿಗೆ ಯಾವುದು ಇಷ್ಟವೋ ಹಾಗೆಯೇ ನಡೆದುಕೊಳ್ಳುತ್ತಾರೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಕರ್ಕ ರಾಶಿಯ ಜನರು ನಿರ್ಭೀತರು. ಅವರು ತಮ್ಮ ಪ್ರೀತಿಪಾತ್ರರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ ಮತ್ತು ಅವರಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಾಗಿದ್ದಾರೆ. ಆದರೆ ಈ ಜನರಿಗೆ ಕೆಲವು ಕೆಲಸ ಮಾಡುವಂತೆ ಹೇಳಿದಾಗ ಮಾತ್ರ ಸಿಟ್ಟುಗೊಳ್ಳುತ್ತಾರೆ. ಅವರು ತಮ್ಮ ಇಷ್ಟದಂತೆಯೇ ನಡೆದುಕೊಳ್ಳುತ್ತಾರೆ.   

2 /4

ಈ ರಾಶಿಚಕ್ರದ ಜನರು ಬಲವಾದ ಆತ್ಮವಿಶ್ವಾಸವುಲ್ಲವರು ಮಾತ್ರವಲ್ಲ ಹಠಮಾರಿ ಸ್ವಭಾವದವರು. ಈ ರಾಶಿಯವರು ಕೂಡಾ ಉತ್ತಮ ನಾಯಕರಾಗಿರುತ್ತಾರೆ. ಸ್ವಂತ ಇಚ್ಛೆಯಂತೆಯೇ ನಡೆದುಕೊಳ್ಳುತ್ತಾರೆ. ಅವರ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುವುದು ಮೂರ್ಖತನ. ಅವರು ಏನು ಮಾಡಬೇಕೋ ಅದನ್ನೇ  ಮಾಡುತ್ತಾರೆ. ಕೆಲವೊಮ್ಮೆ ತಮ್ಮ ಸ್ವೇಚ್ಛಾಚಾರದಿಂದ ನಷ್ಟವನ್ನು ಅನುಭವಿಸಬೇಕಾಗುತ್ತದೆ.

3 /4

ಶನಿಯು ಮಕರ ರಾಶಿಯ ಜನರ ಮೇಲೆ ಪ್ರಭಾವ ಬೀರುತ್ತಾನೆ. ಅವರು ಪ್ರಾಮಾಣಿಕರು, ಶ್ರಮಜೀವಿಗಳು ಮತ್ತು ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಾರೆ. ಇದಲ್ಲದೆ, ಅವರು ಹಠಮಾರಿ ಮತ್ತು ಸ್ವಾಭಿಮಾನಿಗಳೂ ಆಗಿರುತ್ತಾರೆ.  ಮಾಡಲು ನಿರ್ಧರಿಸಿದ ಕೆಲಸವನ್ನು ಮಾಡಿಯೇ ತೀರುತ್ತಾರೆ. 

4 /4

ಮೀನ ರಾಶಿಯ ಜನರು ತುಂಬಾ ನಿರ್ಭೀತರು ಮತ್ತು ಪ್ರತಿ ಸವಾಲನ್ನು ಎದುರಿಸಲು ಧೈರ್ಯಶಾಲಿಗಳು. ಅವರು ಎಂದಿಗೂ ಯಾರಿಗೂ ತಲೆಬಾಗುವುದಿಲ್ಲ. ಅವರು ತಮ್ಮ ಸ್ವಂತ ನಿಯಮಗಳ ಮೇಲೆ ಜೀವನವನ್ನು ನಡೆಸುತ್ತಾರೆ. ತಮ್ಮ ಸ್ವಾಭಿಮಾನದ ಮೇಲೆ ರಾಜಿ ಮಾಡಿಕೊಳ್ಳುವುದಿಲ್ಲ.