ಎಲ್ಲೆಲ್ಲೂ ಸುದೀಪ್ ಅಭಿನಯದ ಬಹುನಿರೀಕ್ಷಿತ ವಿಕ್ರಾಂತ ರೋಣದ್ದೇ ಹವಾ

  • May 27, 2022, 23:37 PM IST

ಕಿಚ್ಚ ಸುದೀಪ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ.ಪ್ರತಿಯೊಬ್ಬರೂ ಕೂಡ  ಸುದೀಪ್ ರನ್ನ ಇಷ್ಟಪಡುತ್ತಾರೆ. ಅವರ ಅವರ ನಟನೆ ವ್ಯಕ್ತಿತ್ವ ಎಲ್ಲರಿಗೂ ತಟ್ಟನೆ ಇಷ್ಟವಾಗುತ್ತೆ. ಒಂದು ಸಮಾಜಸೇವೆಯನ್ನು ಕೂಡ ಮಾಡ್ತಾರೆ.ಬರೀ ಕರ್ನಾಟಕವಷ್ಟೇ ಅಲ್ಲದೆ ಎಲ್ಲೆಡೆ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಕಿಚ್ಚ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ವಿಕ್ರಾಂತ್‌ ರೋಣ' ಸಿನಿಮಾ ಹವಾ ಎಲ್ಲೆಲ್ಲೂ ಹಬ್ಬಿದ್ದು, ವಿಕ್ರಾಂತ್‌ ರೋಣ ಮೊದಲ ಸಾಂಗ್‌ ಈಗಾಗಲೇ ಹಲವು ಭಾಷೆಗಳಲ್ಲಿ ರಿಲೀಸ್‌ ಆಗಿ ಯುಟ್ಯೂಬ್‌ ಟ್ರೆಂಡ್‌ ಆಗಿದೆ.

2 /6

 'ವಿಕ್ರಾಂತ್‌ ರೋಣ' ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದ್ದು, ದಿನಕ್ಕೊಂದು ಸರ್ಪ್ರೈಸ್‌ ಮೂಲಕ  'ವಿಕ್ರಾಂತ್‌ ರೋಣ' ಟೀಂ ಅಭಿಮಾನಿಗಳ ಮನರಂಜಿಸುತ್ತಿದೆ.

3 /6

ಇನ್ನೇನು ಕಿಚ್ಚ ಸುದೀಪ್‌ ನಟನೆಯ 'ವಿಕ್ರಾಂತ್‌ ರೋಣ' ರಿಲೀಸ್‌ಗೆ ರೆಡಿಯಾಗಿದ್ದು, ಈ ಹೊತ್ತಲ್ಲೇ ದೊಡ್ಡ ಸರ್ಪ್ರೈಸ್‌ ನೀಡಿದ್ದಾರೆ ಅಭಿಮಾನಿಗಳ ಪಾಲಿನ ಪ್ರೀತಿಯ ಅಭಿನಯ ಚಕ್ರವರ್ತಿ.

4 /6

ನಟ ಸುದೀಪ್‌ ಅಂದ್ರೆ ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ಪ್ರೀತಿ. ಅದೆಷ್ಟೋ ಸಿನಿ ಮಂದಿ ಪಾಲಿಗೂ ಕಿಚ್ಚ ಸುದೀಪ್‌ ಅವರೇ ಗಾಡ್‌ ಫಾದರ್.‌ ಸ್ಯಾಂಡಲ್‌ವುಡ್‌ನಿಂದ ಹಿಡಿದು ಹಾಲಿವುಡ್‌ ತನಕ ಈಗ ಕಿಚ್ಚ ಸುದೀಪ್‌ ಅವರದ್ದೇ ಸದ್ದು.

5 /6

ಮೊನ್ನೆಮೊನ್ನೆಯಷ್ಟೇ ರಿಲೀಸ್ ಆದ "ರಾ ರಾ ರಕ್ಕಮ್ಮ" ಹಾಡು ನಿದ್ದೆಯಲ್ಲಿದ್ದರೂ ಎಚ್ಚರಿಸಿ ಕುಣಿಸುವಂತೆ ಮಾಡಿಬಿಟ್ಟಿದೆ. ಪ್ರತಿಯೊಬ್ಬರ ಬಾಯಲ್ಲೂ ರಾ ರಾ ರಕ್ಕಮ್ಮ ಹಾಡು ಓಡಾಡುತ್ತಿದೆ.

6 /6

ವಿಕ್ರಾಂತ್ ರೋಣ' ಕಿಚ್ಚ ಸುದೀಪ್ ಅಭಿನಯದ ಬಹುನೀರಿಕ್ಷೆಯ ಸಿನಿಮಾ. ಜೂಲೈ 28 ರಂದು ಈ ಸಿನಿಮಾ ಭರ್ಜರಿಯಾಗಿ ತೆರೆಮೇಲೆ ಅಪ್ಪಳಿಸೋಕೆ ಸಕಲ ರೀತಿಯಲ್ಲಿ ಸಜ್ಜಾಗಿದೆ