ವಿರಾಟ್ ಕೊಹ್ಲಿಗೆ ಈ ನಟ ಅಂದ್ರೆ ತುಂಬಾ ಇಷ್ಟ, ಆ ನಟನ ಹಾಡು ಕೇಳಿದ್ರೆ ತಮಗರಿವಿಲ್ಲದೇ ಡಾನ್ಸ್‌ ಮಾಡ್ತಾರೆ..!

Virat Kohli favourite actor : ವಿರಾಟ್‌ ಕೊಹ್ಲಿ.... ಈ ನಟನಿಗೆ ಅದೇಷ್ಟು ಅಭಿಮಾನ ಬಳಗ ಇದೆ ಅಂತ ಎಲ್ಲರಿಗೂ ಗೊತ್ತಿದೆ... ಕಿಂಗ್‌ ಭಾರತವಷ್ಟೇ ಅಲ್ಲ, ವಿದೇಶದ ಕ್ರಿಕೆಟ್‌ ಪ್ರಿಯರಿಗೂ ಬಲು ಇಷ್ಟ... ಆ ಕೊಹ್ಲಿಗೆ ಈ ಸೌತ್‌ ಸಿನಿ ಸೂಪರ್‌ ಸ್ಟಾರ್‌ ಅಂದ್ರೆ ತುಂಬಾ ಇಷ್ಟವಂತೆ.. ಅಷ್ಟೇ ಅಲ್ಲ.. ಟಿವಿಲಿ ಅವರ ಸಾಂಗ್‌ ಬಂದ್ರೆ ಡಾನ್ಸ್‌ ಫಿಕ್ಸ್‌... 
 

1 /7

ಆರ್‌ಸಿಬಿ ಅಭಿಮಾನಿಗಳ ದೇವರು, ಭಾರತೀಯ ಕ್ರಿಕೆಟ್‌ ಜಗತ್ತಿನ ಕಿಂಗ್‌ ಕೊಹ್ಲಿ ಬಗ್ಗೆ ಹೆಚ್ಚಿಗೆ ಹೇಳುವ ಅಗತ್ಯವಿಲ್ಲ.. ಎಲ್ಲರಿಗೂ ವಿರಾಟ್‌ ಬಗ್ಗೆ ಗೊತ್ತಿದೆ... ಆದ್ರೆ ಈ ಸ್ಟಾರ್‌ ಕ್ರಿಕೆಟಿಗರ ನೆಚ್ಚಿನ ಸಿನಿ ತಾರೆ ಯಾರು..? ಅನ್ನೋದು ಕೆಲವರಿಗೆ ಗೊತ್ತಿ... ವಿಚಿತ್ರ ಅಂದ್ರೆ, ಕೊಹ್ಲಿಗೆ ಬಾಲಿವುಡ್‌ ಮತ್ತು ಹಾಲಿವುಡ್‌ ಸ್ಟಾರ್‌ ಅಲ್ಲ, ಟಾಲಿವುಡ್‌ ಸ್ಟಾರ್‌ ಕಂಡ್ರೆ ತುಂಬಾ ಇಷ್ಟ...  

2 /7

ಹೌದು... ವಿರಾಟ್‌ ಫೇವರಿಟ್‌ ಆಕ್ಟರ್‌.. ಮೆಗಾಸ್ಟಾರ್ ಚಿರಂಜೀವಿ.. ಟಾಲಿವುಡ್ ಚಿತ್ರರಂಗದ ಇತಿಹಾಸದಲ್ಲಿ ಚಿರು ಒಂದು ದೊಡ್ಡ ಮೈಲಿಗಲ್ಲು.. ಯಾವುದೇ ಹಿನ್ನೆಲೆ ಇಲ್ಲದೆ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟು ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ ಹೆಗ್ಗಳಿಕೆ ಇವರದು.   

3 /7

ಇಂಡಸ್ಟ್ರಿಗೆ ಅನೇಕ ಸ್ಟಾರ್‌ಗಳು ಬಂದು ಹೋಗುತ್ತಾರೆ. ಆದರೆ ಕೆಲವರ ಹೆಸರು ಮಾತ್ರ ಇತಿಹಾಸದಲ್ಲಿ ಉಳಿಯುತ್ತಾರೆ. ಚಿರಂಜೀವಿ ಅಂತಹ ಹೆಸರು ಮತ್ತು ಖ್ಯಾತಿಯನ್ನು ಗಳಿಸಿದವರ ಪೈಕಿ. ಚಿರಂಜೀವಿ ಒಂದು ಬ್ರಾಂಡ್ ಅಂದ್ರೆ ತಪ್ಪಾಗಲಾರದು.. ಈಗೀನ ಯುವ ಪೀಳಿಗೆಗೆ ಅವರ ಕುರಿತು ಹೆಚ್ಚಿಗೆ ತಿಳಿದಿಲ್ಲ ಅಂದ್ರೂ ಸಹ ಒಂದು ಕಾಲದಲ್ಲಿ, ಸೌತ್‌ ಸಿನಿರಂಗದಲ್ಲಿ ಚಿರಂಜೀವಿ ಎಂಬ ಚಿರಪರಿಚಿತವಾಗಿತ್ತು..  

4 /7

ಟಾಲಿವುಡ್ ಮಾತ್ರವಲ್ಲದೆ ಭಾರತದಲ್ಲೂ ಚಿರು ಹೆಸರು ಫೇಮಸ್. ಬಾಲಿವುಡ್ ನ ಖ್ಯಾತ ಮ್ಯಾಗಜಿನ್ ಕಂಪನಿಯೊಂದು ಚಿರು ಬಗ್ಗೆ ‘ಬಚ್ಚನ್ ಗಿಂತ ದೊಡ್ಡವರು’ ಎಂದು ಮುಖಪುಟದಲ್ಲಿಯೇ ಬರೆದುಕೊಂಡು ಪ್ರಸಾರ ಮಾಡಿದ್ದರು.. ಇದರಿಂದ ಅವರ ರೇಂಜ್ ಎಂಥದ್ದು ಎಂಬುದು ಅರ್ಥವಾಗುತ್ತದೆ.   

5 /7

ಘರಾನಾ ಮೊಗುಡು ಇಂಡಸ್ಟ್ರಿ ಹಿಟ್ ನಂತರ, ಚಿರಂಜೀವಿ ಪ್ರತಿ ಚಿತ್ರಕ್ಕೆ 1.25 ಲಕ್ಷ ಸಂಭಾವನೆ ತೆಗೆದುಕೊಂಡರು. ಒಂದು ಕೋಟಿಗೂ ಹೆಚ್ಚು ಸಂಭಾವನೆ ಪಡೆದ ಭಾರತದ ಮೊದಲ ನಾಯಕ ಚಿರಂಜೀವಿ. ಆ ಕಾಲದಲ್ಲಿ ಚಿರುಗೆ ಅಷ್ಟೊಂದು ಕ್ರೇಜ್ ಇತ್ತು. ಹೀರೋಗಳಿಗೆ ಸಾಮಾನ್ಯವಾಗಿ ಅಭಿಮಾನಿಗಳಿರುತ್ತಾರೆ. ಆದರೆ ಹೀರೋಗಳೂ ಸಹ ಚಿರಂಜೀವಿ ಅಭಿಮಾನಿಗಳು.  

6 /7

ಸ್ಟಾರ್‌ ನಟರಷ್ಟೇ ಅಲ್ಲ ಕೆಲವು ಕ್ರಿಕೆಟಿಗರಿಗೂ ಚಿರು ಅಂದ್ರೆ ತುಂಬಾ ಅಭಿಮಾನ. ಸ್ಟಾರ್ ಬ್ಯಾಟ್ಸ್ ಮನ್ ಕೊಹ್ಲಿ ಕೂಡ ಮೆಗಾಸ್ಟಾರ್ ಅಭಿಮಾನಿ. ತೆಲುಗು ಕ್ರಿಕೆಟಿಗ ದ್ವಾರಕಾ ರವಿತೇಜಾ ಇತ್ತೀಚೆಗೆ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಅಂಡರ್-16 ಮತ್ತು ಅಂಡರ್-19 ಆಡುವಾಗ ಕೊಹ್ಲಿ ದ್ವಾರಕಾ ರೂಮ್ ಮೇಟ್ಸ್... ಆಗ ಟಿವಿಯಲ್ಲಿ ಚಿರಂಜೀವಿ ಹಾಡನ್ನು ನೋಡಿದ್ರೆ ಸಾಕು. ಕೊಹ್ಲಿ ತಮ್ಮ ಕಾಲುಗಳನ್ನು ಚಲಿಸುತ್ತಿದ್ದರು ಎಂದು ಹೇಳಿದ್ದಾರೆ... ಜೊತೆಗೆ ಈ ಇಬ್ಬರು ಚಿರಂಜೀವಿ ಅವರ ಹಾಡುಗಳಿಗೆ ಡಾನ್ಸ್‌ ಮಾಡುತ್ತಿದ್ದರಂತೆ..  

7 /7

ಆರು ವರ್ಷಗಳ ನಂತರ ಕೊಹ್ಲಿಯನ್ನು ಇತ್ತೀಚೆಗೆ ಭೇಟಿಯಾದೆ. ನಗುನಗುತ್ತಲೇ ಸ್ವಾಗತಿಸಿದ ಕೊಹ್ಲಿ ಹೇಗಿದ್ದೀರಿ ಅಂತ ಕೇಳಿದರು. ಕೊಹ್ಲಿ ಜೊತೆ ತುಂಬಾ ಹೊತ್ತು ಮಾತನಾಡಿದ್ದೇನೆ. ರವಿತೇಜ ನಗುನಗುತ್ತಲೇ ಕೊಹ್ಲಿ ಕುರಿತು ಕೆಲವು ಇಟ್ರಸ್ಟಿಂಗ್‌ ವಿಚಾರಗಳನ್ನು ಹೇಳಿದರು.. ರವಿತೇಜಾ ಅವರ ಈ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ..