Virat Kohli : ಗ್ರೌಂಡ್ ಆಚೆಗೂ ಹೊಸ ದಾಖಲೆ ಬರೆದ ವಿರಾಟ್ ಕೊಹ್ಲಿ!

ಈ ಬಗ್ಗೆ ಕೊಹ್ಲಿ ಫೋಟೋಗಳ ಮಾಂಟೇಜ್ ವಿಡಿಯೋ ಹಂಚಿಕೊಂಡು "200 ಮಿಲ್ ಸ್ಟ್ರಾಂಗ್ ನಿಮ್ಮ ಎಲ್ಲಾ ಬೆಂಬಲಕ್ಕಾಗಿ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ. 

ಮೈದಾನದ ಒಳಗೆ ಅಥವಾ ಹೊರಗೆ, ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ದಾಖಲೆಗಳನ್ನು ಬರೆಯುವಲ್ಲಿ ಹೆಸರುವಾಸಿಯಾಗಿದ್ದಾರೆ. ಕಿಂಗ್ ಕೊಹ್ಲಿ ಇತ್ತೀಚೆಗೆ, ಇನ್‌ಸ್ಟಾಗ್ರಾಮ್‌ ನಲ್ಲಿ 200 ಮಿಲಿಯನ್ ಫಾಲೋವರ್ ಗಳನ್ನು ಗಳಿಸುವ ಮೂಲಕ ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್ ಗಳನ್ನು ಹೊಂದಿರುವ ಏಕೈಕ ಭಾರತೀಯ ಕ್ರೀಡಾಪಟು ಎನಿಸಿಕೊಂಡಿದ್ದಾರೆ.

ಈ ಬಗ್ಗೆ ಕೊಹ್ಲಿ ಫೋಟೋಗಳ ಮಾಂಟೇಜ್ ವಿಡಿಯೋ ಹಂಚಿಕೊಂಡು "200 ಮಿಲ್ ಸ್ಟ್ರಾಂಗ್ ನಿಮ್ಮ ಎಲ್ಲಾ ಬೆಂಬಲಕ್ಕಾಗಿ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ. 

ಆದರೆ, ಕೊಹ್ಲಿ ಸಾಧಿಸಿದ ಈ ಮೈಲಿಗಲ್ಲು ಇದೊಂದೇ ಅಲ್ಲ, ಹಾಗಿದ್ರೆ, ಬೇರೆ ಬೇರೆ ಯಾವವು? ಇಲ್ಲಿದೆ ನೋಡಿ

 

1 /5

ವಿಶ್ವದಲ್ಲಿ 17ನೇ ಸ್ಥಾನದಲ್ಲಿದ್ದಾರೆ ವಿರಾಟ್ ಕೊಹ್ಲಿ : ಒಟ್ಟಾರೆಯಾಗಿ, ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಶ್ವದ 17 ನೇ ಅತಿ ಹೆಚ್ಚು ಅಫಾಲೋವರ್ ಗಳನ್ನು ಹೊಂದಿರುವ ಆಟಗಾರನಾಗಿದ್ದರೆ.

2 /5

ವಿಶ್ವದ ಮೂರನೇ ಅಥ್ಲೀಟ್ ವಿರಾಟ್ ಕೊಹ್ಲಿ : ಅತಿ ಹೆಚ್ಚು ಅಫಾಲೋವರ್ ಗಳನ್ನು ಹೊಂದಿರುವ ಮೂರನೇ ವೃತ್ತಿಪರ ಅಥ್ಲೀಟ್ ವಿರಾಟ್ ಕೊಹ್ಲಿ ಆಗಿದ್ದಾರೆ. ಕ್ರಿಸ್ಟಿಯಾನೋ ರೊನಾಲ್ಡೊ (450M) ಮತ್ತು ಲಿಯೋನೆಲ್ ಮೆಸ್ಸಿ (333M) ಅಫಾಲೋವರ್ ಗಳನ್ನು ಹೊಂದಿದ್ದಾರೆ.  

3 /5

ಏಷ್ಯದ ಇಕೈಕ ಆಟಗಾರ ವಿರಾಟ್ ಕೊಹ್ಲಿ : ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ 200 ಮಿಲಿಯನ್ ಅಫಾಲೋವರ್ ಗಳನ್ನು ಹೊಂದಿರುವ ವಿಶ್ವದ ಮೊದಲ ಮತ್ತು ಏಕೈಕ ಏಷ್ಯನ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

4 /5

ಏಕ ಮಾತ್ರ ಕ್ರಿಕೆಟಿಗ ವಿರಾಟ್ ಕೊಹ್ಲಿ : ವಿಶ್ವದ ಅತಿ ಹೆಚ್ಚು ಫಾಲೋವರ್ ಗಳನ್ನು ಹೊಂದಿರುವ ಕ್ರಿಕೆಟಿಗರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಇದ್ದಾರೆ. ಇತರ ಕ್ರಿಕೆಟ್ ಆಟಗಾರರೆಂದರೆ ಎಂಎಸ್ ಧೋನಿ (38.6 ಮಿಲಿಯನ್) ಮತ್ತು ಸಚಿನ್ ತೆಂಡೂಲ್ಕರ್ (34.7 ಮಿಲಿಯನ್) ಫಾಲೋವರ್ ಗಳನ್ನು ಹೊಂದಿದ್ದಾರೆ. 

5 /5

ಈ ಸಾಧನೆ ಮಡಿದ ಇಕೈಕ ಭಾರತೀಯ ವಿರಾಟ್ ಕೊಹ್ಲಿ : ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸ್ಟಾರ್ 200 ಮಿಲಿಯನ್ ಫಾಲೋವರ್ ಗಳನ್ನು ಹೊಂದಿರುವ ಏಕೈಕ ಭಾರತೀಯ ಆಟಗಾರ. ನಂತರದ ಸ್ಥಾನದಲ್ಲಿ ಬಾಲಿವುಡ್/ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ 78.68 ಮಿಲಿಯನ್ ಫಾಲೋವರ್ ಗಳನ್ನು ಹೊಂದಿದ್ದಾರೆ.