ಕಳೆದ 4 ತಿಂಗಳಿಂದ ರಷ್ಯಾ-ಉಕ್ರೇನ್ ಯುದ್ಧ ನಡೆಯುತ್ತಿದೆ. ಇದರಲ್ಲಿ ಸಾವಿರಾರು ಜನರು ತಮ್ಮ ಪ್ರಾಣ ಕಳೆದಿಕೊಂಡಿದ್ದಾರೆ. ಭೂಮಿ ಮೇಲಿನ ಜನರಿಗೆ ಮಾತ್ರವಲ್ಲದೆ ಈ ಯುದ್ಧ ಸಾಗದ ಜೀವಿಗಳಿಗೂ ಕೆಟ್ಟ ಪರಿಣಾಮವನ್ನುಂಟು ಮಾಡಿದೆ. ಉಕ್ರೇನ್ ಮೇಲೆ ರಷ್ಯಾ ನಡೆಸಿದ ದಾಳಿ ಬಳಿಕ ಅನೇಕ ಡಾಲ್ಫಿನ್ಗಳು ಸಾವನ್ನಪ್ಪಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಈ ಡಾಲ್ಫಿನ್ಗಳ ಕಳೆಬರದ ಮೇಲೆ ಬಾಂಬ್ ದಾಳಿಯಿಂದ ಉಂಟಾದ ಗಾಯಗಳ ಗುರುತು ಕಂಡುಬಂದಿದೆ ಎನ್ನಲಾಗುತ್ತಿದೆ. ಕೆಲವು ಸತ್ತ ಡಾಲ್ಫಿನ್ಗಳ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ಉಕ್ರೇನ್, ಬಲ್ಗೇರಿಯಾ, ಟರ್ಕಿ ಮತ್ತು ರೊಮೇನಿಯಾ ಸೇರಿದಂತೆ ಹಲವಾರು ದೇಶಗಳ ಗಡಿಯ ಕಪ್ಪು ಸಮುದ್ರದ ಕರಾವಳಿಯಲ್ಲಿ ಸಮುದ್ರ ಸಸ್ತನಿ (ಡಾಲ್ಫಿನ್) ಸತ್ತಿದೆ ಎಂದು ಉಕ್ರೇನ್ನ ತುಜ್ಲಾ ಎಸ್ಟ್ಯೂರೀಸ್ ನ್ಯಾಷನಲ್ ನೇಚರ್ ಪಾರ್ಕ್ನ ಸಂಶೋಧನಾ ನಿರ್ದೇಶಕ ಇವಾನ್ ರುಸೆವ್ ಫೇಸ್ಬುಕ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಡೈಲಿ ಸ್ಟಾರ್ ವರದಿಯ ಪ್ರಕಾರ, ಯುದ್ಧದ ಕಾರಣದಿಂದಾಗಿ ಡಾಲ್ಫಿನ್ಗಳಿಗೆ ಗಾಯಗಳಾಗಿವೆ. ಬಾಂಬ್ನಿಂದ ಸುಟ್ಟ ಗಾಯಗಳ ಗುರುತುಗಳು ಡಾಲ್ಫಿನ್ಗಳ ಮೇಲೆ ಕಂಡುಬಂದಿದೆ. ಇದರಿಂದಾಗಿ ಡಾಲ್ಫಿನ್ಗಳು ಸಾವನ್ನಪ್ಪಿದೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.
ಕಪ್ಪು ಸಮುದ್ರದ ಅನೇಕ ಡಾಲ್ಫಿನ್ಗಳು ಈಗಾಗಲೇ ಸತ್ತಿವೆ ಎಂದು ರುಸೆವ್ ಹೇಳಿದ್ದಾರೆ.
ರುಸೆವ್ ಅವರ ತಂಡ ಮತ್ತು ಯುರೋಪಿನಾದ್ಯಂತದ ಇತರ ಸಂಶೋಧಕರು ಸಂಗ್ರಹಿಸಿದ ದತ್ತಾಂಶವನ್ನು ಆಧರಿಸಿ, ಉಕ್ರೇನ್ನಲ್ಲಿನ ಯುದ್ಧದ ಮಧ್ಯೆ ಹಲವಾರು ಸಾವಿರ ಡಾಲ್ಫಿನ್ಗಳು ಈಗಾಗಲೇ ಸತ್ತಿವೆ ಎಂದು ಹೇಳಿದ್ದಾರೆ.
"ಸುಮಾರು 400,000 ಹೆಕ್ಟೇರ್ಗಳು ಮತ್ತು 14 ರಾಮ್ಸಾರ್ ಸೈಟ್ಗಳು (ಅಂತಾರಾಷ್ಟ್ರೀಯ ಪ್ರಾಮುಖ್ಯತೆಗಾಗಿ ಯುನೆಸ್ಕೋನಿಂದ ಗೊತ್ತುಪಡಿಸಿದ ಜೌಗು ಪ್ರದೇಶಗಳು) ಕರಾವಳಿ ಮತ್ತು ಡ್ನಿಪ್ರೊ ನದಿಯ ಕೆಳಭಾಗವು ಅಪಾಯದಲ್ಲಿದೆ" ಎಂದು ಉಕ್ರೇನ್ನ ಪರಿಸರ ಸಂರಕ್ಷಣೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಉಪ ಮಂತ್ರಿ ಒಲೆಕ್ಸಾಂಡರ್ ಕ್ರಾಸ್ನೊಲುಟ್ಸ್ಕಿ ಹೇಳಿದ್ದಾರೆ.