ಸುನೀಲ್ ಶೆಟ್ಟಿ ನಟ ಮಾತ್ರವಲ್ಲ. ಖ್ಯಾತ ಉದ್ಯಮಿ ಕೂಡ ಹೌದು. ಮೂವತ್ತು ವರ್ಷಗಳಲ್ಲಿ ಸುನೀಲ್ ದೊಡ್ಡ ನಟನಾಗಿ ಹೊರಹೊಮ್ಮಿದ್ದಾರೆ. ವಿಶೇಷವೆಂದರೆ 30 ವರ್ಷಗಳ ನಂತರವೂ ಇಂಡಸ್ಟ್ರಿಯಲ್ಲಿ ಅಧಿಪತ್ಯ ಸಾಧಿಸಿದ್ದಾರೆ. ಇನ್ನು ಸುನೀಲ್ ಕೇವಲ ನಟನೆ ಮಾತ್ರವಲ್ಲದೆ ಅನೇಕ ವ್ಯವಹಾರಗಳನ್ನು ನಡೆಸುವ ಮೂಲಕ ತಮ್ಮ ಆದಾಯವನ್ನು ಬಹುಪಟ್ಟು ಹೆಚ್ಚಿಸಿಕೊಂಡಿದ್ದಾರೆ.
ಸುನೀಲ್ ಶೆಟ್ಟಿ ಕೇವಲ ನಟನೆಗೆ ಮಾತ್ರ ಪ್ರಾಮುಖ್ಯತೆ ನೀಡಿದೆ, ವ್ಯಾಪಾರದಲ್ಲಿಯೂ ಪಾರುಪತ್ಯ ಸಾಧಿಸಿದ್ದಾರೆ. ಸುನೀಲ್ ಶೆಟ್ಟಿ ಒಂದಲ್ಲ ಹಲವು ಉದ್ಯಮಗಳನ್ನು ನಡೆಸುತ್ತಿದ್ದಾರೆ.
ರೆಸ್ಟೊರೆಂಟ್ನಿಂದ ಶೋರೂಮ್ವರೆಗೆ ಹವಾ ಸಾಧಿಸಿರುವ ಸುನೀಲ್ ಶೆಟ್ಟಿ ರಿಯಲ್ ಎಸ್ಟೇಟ್ ವ್ಯವಹಾರಕ್ಕೂ ಕಾಲಿಟ್ಟಿದ್ದಾರೆ. ಈ ವ್ಯವಹಾರಗಳಿಂದಲೇ ಅವರು ಕೋಟಿಗಟ್ಟಲೆ ಹಣ ಸಂಪಾದಿಸುತ್ತಾರೆ. ರೆಸ್ಟೋರೆಂಟ್ ಕುರಿತು ಮಾತನಾಡೋದಾದ್ರೆ, ಅವರು ಮಿಸ್ಚೀಫ್ ಡೈನಿಂಗ್ ಬಾರ್ ಮತ್ತು ಕ್ಲಬ್ H2Oನ ಮಾಲೀಕರಾಗಿದ್ದು ಅದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.
ಮುಂಬೈನ ಐಷಾರಾಮಿ ಪ್ರದೇಶದಲ್ಲಿ ಮಾತ್ರವಲ್ಲ, ದಕ್ಷಿಣ ಭಾರತದಲ್ಲಿಯೂ ಅವರು ತಮ್ಮ ಜನಪ್ರಿಯ ರೆಸ್ಟೋರೆಂಟ್ಗಳನ್ನು ಹೊಂದಿದ್ದಾರೆ. ಇದಲ್ಲದೆ, ಅವರು ಅಡ್ವೆಂಚರಸ್ ಪಾರ್ಕ್ನಲ್ಲಿ ಪಾಲುದಾರಿಕೆಯನ್ನು ಸಹ ಇಟ್ಟುಕೊಂಡಿದ್ದಾರೆ. ಇದರಿಂದ ಅವರು ಸಾಕಷ್ಟು ಹಣ ಗಳಿಸುತ್ತಾರೆ.
ಸುನೀಲ್ ಶೆಟ್ಟಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲೂ ಕೈ ಹಾಕಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಸುನೀಲ್ ಈ ವ್ಯವಹಾರದಿಂದಲೇ 100 ಕೋಟಿಗೂ ಹೆಚ್ಚು ಗಳಿಸುತ್ತಾರೆ. ಆದರೆ, ಈ ವಿಷಯಗಳಲ್ಲಿ ಎಷ್ಟರಮಟ್ಟಿಗೆ ಸತ್ಯವಿದೆ ಎನ್ನುವುದನ್ನು ಸುನೀಲ್ ಮಾತ್ರ ಹೇಳಬಲ್ಲರು.
ಸುನಿಲ್ ಶೆಟ್ಟಿ ಜೊತೆಗೆ ಅವರ ಪತ್ನಿ ಮಾನ ಶೆಟ್ಟಿ ಕೂಡ ಅವರ ವ್ಯವಹಾರಕ್ಕೆ ಬೆಂಬಲ ನೀಡಿ ನಿಭಾಯಿಸುತ್ತಿದ್ದಾರೆ. ಆರ್ ಹೌಸ್ ಹೆಸರಿನ ಐಷಾರಾಮಿ ಪೀಠೋಪಕರಣಗಳ ಶೋರೂಮ್ ಅನ್ನು ಹೊಂದಿದ್ದಾರೆ.
ಅವರ ಕಠಿಣ ಪರಿಶ್ರಮ ಮತ್ತು ಅಪಾರ ಸಂಪತ್ತಿನಿಂದಾಗಿ, ಮುಂಬೈನಲ್ಲಿ ಸುಂದರವಾದ ಬಂಗಲೆ ಮತ್ತು ಖಂಡಾಲಾ ಹಿಲ್ ಸ್ಟೇಷನ್ನಲ್ಲಿ ಐಷಾರಾಮಿ ಫಾರ್ಮ್ ಹೌಸ್ ಹೊಂದಿದ್ದಾರೆ. ಇದಲ್ಲದೇ ಸುನೀಲ್ ಶೆಟ್ಟಿ ಹಲವು ರಾಜ್ಯಗಳಲ್ಲಿ ಹೂಡಿಕೆ ಮಾಡಿದ್ದಾರೆ.