ಕೆಲ ದೇಶಗಳಲ್ಲಿ ಲೀಟರ್ ಪೆಟ್ರೋಲ್ ಬೆಲೆ ಕುಡಿಯುವ ನೀರಿಗಿಂತಲೂ ಕಡಿಮೆ. ಸಾರ್ಕ್ ರಾಷ್ಟ್ರಗಳಲ್ಲಿ ಪೆಟ್ರೋಲ್ ಗೆ ಅತಿ ಹೆಚ್ಚು ಬೆಲೆ ಇರುವುದು ಭಾರತದಲ್ಲಿ..
ನವದೆಹಲಿ : ಪೆಟ್ರೋಲಿಯಂ ಕಂಪನಿಗಳು (Petroleum companies) ಭಾನುವಾರ ಪೆಟ್ರೋಲ್ (Petrol) ಮತ್ತು ಡೀಸೆಲ್ (Diesel) ಬೆಲೆಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 84.20 ರೂ. ಮತ್ತು ಡೀಸೆಲ್ ಲೀಟರ್‌ಗೆ 74.38 ರೂ ಇದೆ. ಕರ್ನಾಟಕದಲ್ಲಿ ಪೆಟ್ರೋಲ್ ಬೆಲೆ 86 ರೂ ಆಗಿದ್ದು, ಡಿಸೇಲ್ ಬೆಲೆ 78.10 ಇದೆ. ಆದರೆ, ರಾಜಸ್ಥಾನದ ಶ್ರೀಗಂಗನಗರದಲ್ಲಿ ಪೆಟ್ರೋಲ್ ಬೆಲೆ ಶತಕ ತಲುಪಿದೆ. ಇಲ್ಲಿ ಪೆಟ್ರೋಲ್ ಬೆಲೆ 95.50 ರೂ. ಮತ್ತು ಡೀಸೆಲ್ 87.46 ರೂ ಇದೆ. ನೀರಿಗಿಂತ ಪೆಟ್ರೋಲ್ ಅಗ್ಗವಾಗಿರುವ ದೇಶದ ಬಗ್ಗೆ ನಿಮಗೆ ತಿಳಿದಿದೆಯೇ? ಆ ದೇಶಗಳ ಬಗ್ಗೆ ನಾವು ಹೇಳುತ್ತೇವೆ.
ಪೆಟ್ರೋಲ್ ಮತ್ತು ಡೀಸೆಲ್ ಖರೀದಿಸಲು ಒಂದು ಲೀಟರ್ ನೀರಿಗಿಂತ ಕಡಿಮೆ ಹಣವನ್ನು ಪಾವತಿಸಬೇಕಾದ ಅನೇಕ ದೇಶಗಳು ಪ್ರಪಂಚದಲ್ಲಿವೆ. ವಿಶ್ವದ ಮೂರು ದೇಶಗಳಾದ ವೆನೆಜುವೆಲಾ, ಇರಾನ್ ಮತ್ತು ಅಂಗೋಲಾಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 20 ರೂಪಾಯಿಗಳಿಗಿಂತ ಕಡಿಮೆಯಿದೆ. ವೆನೆಜುವೆಲಾದ ಪೆಟ್ರೋಲ್ ಬೆಲೆ ಜನವರಿ 4 ರಂದು ಪ್ರತಿ ಲೀಟರ್‌ಗೆ 1.46 ರೂ., ಇರಾನ್‌ನಲ್ಲಿ 4.24 ರೂ. ಮತ್ತು ಅಂಗೋಲಾದಲ್ಲಿ 17.88 ರೂ. ದಾಖಲಾಗಿದೆ.
ಇನ್ನು, ಗ್ಲೋಬಲ್ ಪೆಟ್ರೋಲ್ ಡೀಸೆಲ್ ಪ್ರೈಸ್.ಕಾಂನ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಹಾಂಗ್ ಕಾಂಗ್‌ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ169.21 ರೂ., ಮಧ್ಯ ಆಫ್ರಿಕಾದ ಗಣರಾಜ್ಯದಲ್ಲಿ 150.29 ರೂ., ಸಿರಿಯಾದಲ್ಲಿ 149.08, ನೆದರ್‌ಲ್ಯಾಂಡ್‌ನಲ್ಲಿ 140.90 ರೂ. 135.38 ರೂಪಾಯಿ ಮತ್ತು ಫಿನ್‌ಲ್ಯಾಂಡ್‌ನಲ್ಲಿ 133.90 ರೂಪಾಯಿ ದರವನ್ನು ಹೊಂದಿದೆ. ಇದಲ್ಲದೆ, ಇಂಗ್ಲೆಂಡ್‌ನಲ್ಲಿ 116 ರೂ, ಸ್ವಿಟ್ಜರ್‌ಲ್ಯಾಂಡ್‌ನಲ್ಲಿ 115 ರೂ., ಜರ್ಮನಿಯಲ್ಲಿ 116 ರೂ., ಜಪಾನ್‌ನಲ್ಲಿ 93.62 ರೂ., ಆಸ್ಟ್ರೇಲಿಯಾದಲ್ಲಿ 68.91 ರೂ., ಯುಎಸ್‌ನಲ್ಲಿ 50.13 ರೂ. ಮತ್ತು ರಷ್ಯಾದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 42.69 ರೂ.ಯಷ್ಟಿದೆ.
ಈ ಪೆಟ್ರೋಲ್ ಬೆಲೆಯನ್ನು ನಮ್ಮ ನೆರೆಯ ರಾಷ್ಟ್ರಗಳ ಬೆಲೆಯೊಂದಿಗೆ ಹೋಲಿಸಿದರೆ ಭಾರತದಲ್ಲಿ ಪೆಟ್ರೋಲ್ ಗೆ ಬೆಲೆ ಅತಿ ಹೆಚ್ಚ ದರ ಇದೆ. ನೆರೆಯ ರಾಷ್ಟ್ರಗಳಾದ ಚೀನಾದಲ್ಲಿ 72.62 ರೂ., ನೇಪಾಳದಲ್ಲಿ 67.41 ರೂ., ಅಫ್ಘಾನಿಸ್ತಾನದಲ್ಲಿ 36.34 ರೂ., ಬರ್ಮಾದಲ್ಲಿ 43.53 ರೂ., ಪಾಕಿಸ್ತಾನದಲ್ಲಿ 48.19 ರೂ., ಭೂತಾನ್‌ನಲ್ಲಿ 49.56 ರೂ. ಮತ್ತು ಶ್ರೀಲಂಕಾದಲ್ಲಿ 62.79 ರೂ. ದರವನ್ನು ನಿಗದಿಪಡಿಸಲಾಗಿದೆ.