Wedding Loan: ಮದುವೆಗೂ ಸಾಲ ಪಡೆಯಬಹುದು, ಈ ದಾಖಲೆಗಳು ನಿಮ್ಮ ಬಳಿ ಇರಬೇಕು

Personal Loan: ಕೆಲ ಕುಟುಂಬಗಳು ಸುಲಭವಾಗಿ ಮದುವೆಯ ಬಜೆಟ್ ಅನ್ನು ಹೊಂದಾಣಿಕೆ ಮಾಡಿಕೊಳ್ಳುತ್ತವೆ. ಇನ್ನೊಂದೆಡೆ ಕೆಲ ಜನರಿಗೆ ವಿವಾಹದ ಖರ್ಚು ಮ್ಯಾನೆಜ್ ಮಾಡುವುದು ಸ್ವಲ್ಪ ಕಷ್ಟಸಾಧ್ಯವೇ ಹೌದು. ಮದುವೆಗಾಗಿ ನೀವೂ ಕೂಡ ಹಣಕಾಸಿನ ವ್ಯವಸ್ಥೆಯನ್ನು ಮಾಡುತ್ತಿದ್ದರೆ, ಬ್ಯಾಂಕುಗಳು ಕೂಡ ನಿಮಗೆ ಸಾಲವನ್ನು ನೀಡುತ್ತವೆ.
 

Personal Loan:  ಕೆಲ ಕುಟುಂಬಗಳು ಸುಲಭವಾಗಿ ಮದುವೆಯ ಬಜೆಟ್ ಅನ್ನು ಹೊಂದಾಣಿಕೆ ಮಾಡಿಕೊಳ್ಳುತ್ತವೆ. ಇನ್ನೊಂದೆಡೆ ಕೆಲ ಜನರಿಗೆ ವಿವಾಹದ ಖರ್ಚು ಮ್ಯಾನೆಜ್ ಮಾಡುವುದು ಸ್ವಲ್ಪ ಕಷ್ಟಸಾಧ್ಯವೇ ಹೌದು. ಮದುವೆಗಾಗಿ ನೀವೂ ಕೂಡ ಹಣಕಾಸಿನ ವ್ಯವಸ್ಥೆಯನ್ನು ಮಾಡುತ್ತಿದ್ದರೆ, ಬ್ಯಾಂಕುಗಳು ಕೂಡ ನಿಮಗೆ ಸಾಲವನ್ನು ನೀಡುತ್ತವೆ.

 

ಇದನ್ನೂ ಓದಿ-Kajal Remedies: ಕಾಡಿಗೆ ದಾನ ಮಾಡುವುದರ ಈ ಲಾಭಗಳು ನಿಮಗೆ ತಿಳಿದಿವೆಯೇ?

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಪ್ರಸ್ತುತ ದೇಶಾದ್ಯಂತ ಮದುವೆಯ ಸುಗ್ಗಿ ಆರಂಭವಾಗಿದೆ. ಪ್ರತಿಯೊಬ್ಬರೂ ತಮ್ಮ ಮದುವೆಯನ್ನು ಬಹಳ ಅವಿಸ್ಮರಣೀಯವಾಗಿಸಬೇಕು ಎಂದು ಬಯಸುತ್ತಾರೆ. ಹೀಗಾಗಿ ಜನರು ತುಂಬಾ ವಿಜೃಂಭಣೆಯಿಂದ ಮದುವೆಯನ್ನು ಮಾಡಿಕೊಳ್ಳುತ್ತಾರೆ. ಭಾರತದಲ್ಲಿ ಪ್ರತಿ ವರ್ಷ ಮದುವೆಗೆ ಕೋಟ್ಯಂತರ ರೂ.ವೆಚ್ಚ ಮಾಡಲಾಗುತ್ತದೆ. ಮದುವೆಗೆ ಬೇಕಾಗುವ ಬಜೆಟ್ ಅನ್ನು ಸುಲಭವಾಗಿ ನಿರ್ವಹಿಸುವ ಅಳವು ಕುಟುಂಬಗಳಿವೆ, ಆದರೆ ಕೆಲ ಜನರಿಗೆ ಮದುವೆಯ ಖರ್ಚುಗಳನ್ನು ನಿರ್ವಹಿಸಲು ಮತ್ತು ಸಾಲವನ್ನು ತೆಗೆದುಕೊಳ್ಳಲು ಸಾಧ್ಯವಿರುವುದಿಲ್ಲ. ನೀವು ಕೂಡ ಹೇಗಾದರೂ ಮಾಡಿ ಮದುವೆಗೆ ಹಣವನ್ನು ಹೊಂದಿಸಲು ಬಯಸುತ್ತಿದ್ದರೆ, ಬ್ಯಾಂಕ್ ನಿಮಗೆ ಹಣವನ್ನು ನೀಡಬಹುದು.  

2 /5

2. ವಾಸ್ತವದಲ್ಲಿ, ಬ್ಯಾಂಕ್‌ಗಳಿಂದ ಜನರಿಗೆ ಮದುವೆಗಾಗಿ ಸಾಲಗಳನ್ನು ನೀಡುತ್ತವೆ. ಮದುವೆಗೆ ಸಾಲ ಬೇಕಾದರೂ ಬ್ಯಾಂಕ್ ನಲ್ಲಿ ಮದುವೆ ಸಾಲಕ್ಕೆ ಅರ್ಜಿ ಸಲ್ಲಿಸಬಹುದು . ಬ್ಯಾಂಕ್‌ಗಳಲ್ಲಿ ಹಲವು ರೀತಿಯ ಸಾಲ ನೀಡಲಾಗುತ್ತದೆ. ವೈಯಕ್ತಿಕ ಸಾಲ ಅವುಗಳಲ್ಲಿ ಒಂದು. ಈ ಪರ್ಸನಲ್ ಲೋನ್ ವಿಭಾಗದಲ್ಲಿ ವೆಡ್ಡಿಂಗ್ ಲೋನ್ ಅನ್ನು ಸಹ ಸೇರಿಸಲಾಗಿದೆ.  

3 /5

3. ನೀವೂ ಕೂಡ ಯಾವುದೇ ಬ್ಯಾಂಕಿನಲ್ಲಿ ಪರ್ಸನಲ್ ಲೋನ್/ವಿವಾಹ ಸಾಲಕ್ಕೆ ಅರ್ಜಿ ಸಲ್ಲಿಸಲು ಬಯಸಿದರೆ, ನಿಮಗೆ ಕೆಲ ದಾಖಲೆಗಳು ಬೇಕಾಗಬಹುದು. ಅನೇಕ ಬ್ಯಾಂಕುಗಳು ಪೂರ್ವ-ಅನುಮೋದಿತ ಸಾಲಗಳ ಸೌಲಭ್ಯವನ್ನು ಸಹ ಒದಗಿಸುತ್ತವೆ, ಇದರಲ್ಲಿ ದಾಖಲೆಗಳಿಲ್ಲದೆಯೂ ಸಾಲವನ್ನು ಪಡೆಯಬಹುದು. ಆದರೆ ನೀವು ಪೂರ್ವ ಅನುಮೋದಿತ ಸಾಲ ಯೋಜನೆಯನ್ನು ಹೊಂದಿಲ್ಲದಿದ್ದರೆ, ಬ್ಯಾಂಕ್ ಅನ್ನು ನೇರವಾಗಿ ಸಂಪರ್ಕಿಸಿ ಸಾಲವನ್ನು ತೆಗೆದುಕೊಳ್ಳಬಹುದು.  

4 /5

4. ಬ್ಯಾಂಕಿನಿಂದ ಸಾಲ ಪಡೆಯಲು ಕೆಲ ದಾಖಲೆಗಳು ತುಂಬಾ ಅಗತ್ಯವಾಗಿವೆ. ಈ ದಾಖಲೆಗಳಿಲ್ಲದೆ, ಬ್ಯಾಂಕ್ ನಿಮ್ಮ ಸಾಲದ ಅರ್ಜಿಯನ್ನು ಸಹ ತಿರಸ್ಕರಿಸಬಹುದು. ನೀವು ಬ್ಯಾಂಕಿನಿಂದ ವೈಯಕ್ತಿಕ ಸಾಲ / ವಿವಾಹ ಸಾಲವನ್ನು ಪಡೆಯಲು ಬಯಸಿದರೆ, ನೀವು ಗುರುತಿನ ಚೀಟಿಯನ್ನು (ಪಾಸ್‌ಪೋರ್ಟ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್ ಇತ್ಯಾದಿ) ಸಲ್ಲಿಸಬೇಕಾಗುತ್ತದೆ.

5 /5

5. ಇದಲ್ಲದೆ, ವಿಳಾಸ ಪುರಾವೆ (ಪಾಸ್‌ಪೋರ್ಟ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್ ಇತ್ಯಾದಿ) ಸಹ ನೀಡಬೇಕು. ಇನ್ನೊಂದೆಡೆ, ಕಳೆದ ಮೂರು ತಿಂಗಳ ನಿಮ್ಮ ಖಾತೆಯ ಬ್ಯಾಂಕ್ ಸ್ಟೇಟ್ ಮೆಂಟ್, ಕಳೆದ 2-3 ತಿಂಗಳ ಸಂಬಳದ ಚೀಟಿ, ನಮೂನೆ-16 ಇತ್ಯಾದಿ ವಿವರಗಳನ್ನು ನೀಡಬೇಕು. ಆಗ ನಿಮ್ಮ ಸಾಲದ ಅರ್ಜಿಯನ್ನು ಮುಂದಕ್ಕೆ ಪ್ರಕ್ರಿಯೆಗೊಳಿಸಲಾಗುತ್ತದೆ ಮತ್ತು ಅದನ್ನು ಅನುಮೋದಿಸಲಾಗಿದೆಯೇ ಅಥವಾ ತಿರಸ್ಕರಿಸಲಾಗಿದೆಯೇ ಎಂದು ನಿಮಗೆ ತಿಳಿಸಲಾಗುತ್ತದೆ.