Weight Loss Remedies: ಈ ಐದು ಅಭ್ಯಾಸಗಳ ಮೂಲಕ ಸೊಂಟ ಮತ್ತು ಹೊಟ್ಟೆ ಭಾಗದಲ್ಲಿ ಜೋತುಬಿದ್ದ ಬೊಜ್ಜನ್ನು ಕೆಲವೇ ದಿನಗಳಲ್ಲಿ ಕಡಿಮೆ ಮಾಡಿಕೊಳ್ಳ ಬಹುದು!

Healthy Habits For Weight Loss: ತೂಕ ಹೆಚ್ಚಳ ಅಥವಾ ಸ್ಥೂಲಕಾಯತೆಯ ಸಮಸ್ಯೆ ಇಂದಿನ ಕಾಲದಲ್ಲಿ ಒಂದು ಸಾಮಾನ್ಯ ಜೀವನಶೈಲಿ ಸಮಸ್ಯೆಯಾಗಿಯೇ ಮಾರ್ಪಟ್ಟಿದೆ. ಇದು ಅನೇಕ ಕಾಯ್ಲೆಗಳಿಗೆ ಮೂಲವೆಂದು ಪರಿಗಣಿಸಲಾಗಿದೆ, ಹೀಗಾಗಿ ಅದರ ಮೇಲೆ ನಮ್ಮ ಹಿಡಿತವನ್ನು ಸಾಧಿಸಲು, ನಾವು ನಮ್ಮ ಕೆಲವು ಅಭ್ಯಾಸಗಳನ್ನು ಬದಲಾಯಿಸಬೇಕು (Lifestyle News In Kannada).
 

Weight Loss Home Remedies: ಭಾರತ ಸೇರಿದಂತೆ ವಿಶ್ವಾದ್ಯಂತೆ ಹಲವು ಜನರು ಸ್ಥೂಲಕಾಯತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ  ಮತ್ತು ನಿರಂತರ ಪ್ರಯತ್ನಗಳ ಬಳಿಕವೂ ಕೂಡ, ಅವರು ತಮ್ಮ ಹೆಚ್ಚುತ್ತಿರುವ ತೂಕಕ್ಕೆ ಬ್ರೇಕ್ ಹಾಕಲು ವಿಫಲರಾಗುತ್ತಿದ್ದಾರೆ. ಹೊಟ್ಟೆಯ ಕೊಬ್ಬು ನಿಮ್ಮ ಒಟ್ಟಾರೆ ಸೌಂದರ್ಯವನ್ನು ಹಾಳುಮಾಡುತ್ತದೆ, ಆದರೆ ಇದು ಹೆಚ್ಚಿನ ಕೊಲೆಸ್ಟ್ರಾಲ್ (High Cholesterol), ಮಧುಮೇಹ (Diabetes), ಅಧಿಕ ರಕ್ತದೊತ್ತಡ (High BP) ಮತ್ತು ಹೃದ್ರೋಗದ (Heart Disease) ಅಪಾಯವನ್ನು ಹೆಚ್ಚಿಸುತ್ತದೆ, ಇದು ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ. ನಿಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳುವ ಮೂಲ್ಲಕ ನೀವು ಹೊಟ್ಟೆ ಮತ್ತು ಸೊಂಟ ಸುತ್ತಲಿನ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.  (Lifestyle News In Kannada)

 

ಇದನ್ನೂ ಓದಿ-Marriage Tips: ವಿವಾಹಕ್ಕೆ ಸಿದ್ಧರಾಗಿದ್ದೀರಾ? ಹಾಗಾದರೆ ಭಾವೀ ಸಂಗಾತಿಗೆ ಚಾಚು ತಪ್ಪದೆ ಈ ವಿಷಯಗಳನ್ನು ಕೇಳಿ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /6

1. ಪೌಷ್ಟಿಕ ಆಹಾರ ಸೇವಿಸಿ- ಆಹಾರ ಸೇವನೆ ನಮ್ಮ ಜೀವನದ ಒಂದು ಪ್ರಮುಖ ಭಾಗವಾಗಿದ್ದರೂ ಕೂಡ ನಾವು ಏನನ್ನು ತಿನ್ನುತ್ತಿದ್ದೇವೆ ಎಂಬುದು ತುಂಬಾ ಮಹತ್ವದ್ದಾಗಿದೆ. ತೂಕ ನಿಯಂತ್ರಣದಲ್ಲಿಡಲು () ದೈನಂದಿನ ಆಹಾರದಲ್ಲಿ ಧಾನ್ಯಗಳು, ತಾಜಾ ಹಣ್ಣುಗಳು, ತರಕಾರಿಗಳು ಮತ್ತು ನೇರ ಪ್ರೋಟೀನ್‌ಗಳನ್ನು ಒಳಗೊಂಡಿರುವ ಸಮತೋಲಿತ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಬೇಕು.   

2 /6

2. ಅತಿಯಾಗಿ ತಿನ್ನುವುದನ್ನು ತಪ್ಪಿಸಿ- ಕೆಲವರಿಗೆ ಊಟ-ಕುಡಿತದ ಮೇಲೆ ಹಿಡಿತವೆ ಇರುವುದಿಲ್ಲ, ಏನಾದರೂ ಕಂಡ ತಕ್ಷಣ ತಿನ್ನಲು ಶುರು ಮಾಡುತ್ತಾರೆ. ಮದುವೆ, ಪಾರ್ಟಿಗಳಲ್ಲಿ ಅತಿಯಾಗಿ ತಿನ್ನಲು ಶುರುಮಾಡುತ್ತಾರೆ. ಆರೋಗ್ಯಕರ ಆಹಾರವನ್ನು ಸೇವಿಸುವುದರೆ ಜೊತೆಗೆ ನಾವು ಜಾಗ್ರತೆಯಿಂದ ತಿನ್ನುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು ಮತ್ತು ಅತಿಯಾಗಿ ತಿನ್ನುವುದನ್ನು ತಪ್ಪಿಸಬೇಕು, ಇಲ್ಲದಿದ್ದರೆ ಹೊಟ್ಟೆ ಮತ್ತು ಸೊಂಟದ ಸುತ್ತಲೂ ಅನಗತ್ಯವಾಗಿ ಕೊಬ್ಬು ಸಂಗ್ರಹವಾಗುತ್ತದೆ.  

3 /6

3. ದೈಹಿಕ ಚಟುವಟಿಕೆಗಳ ಮೇಲೆ ಗಮನ ಕೇಂದ್ರೀಕರಿಸಿ- ತೂಕ ಇಳಿಕೆ ಅಥವಾ ಕೊಬ್ಬು ನಿಯಂತ್ರಣಕ್ಕೆ ನಾವು ಕೇವಲ ಆರೋಗ್ಯಕರ ಆಹಾರ ಸೇವಿಸುವುದು ಸಾಕಾಗುವುದಿಲ್ಲ. ಅದರ ಜೊತೆಗೆ ನಾವು ಎಷ್ಟು ವ್ಯಾಯಾಮ ಅಥವಾ ದೈಹಿಕ ಚಟುವಟಿಕೆಗಳನ್ನು ಮಾಡುತ್ತಿದ್ದೇವೆ ಎಂಬುದು ಕೂಡ ಮಹತ್ವದ್ದಾಗಿದೆ. ನೀವು ವಾರಕ್ಕೆ 150 ನಿಮಿಷ ಅಥವಾ ಅದಕ್ಕಿಂತ ಹೆಚ್ಚು ಕಾಲ ವ್ಯಾಯಾಮ ಮಾಡಿದರೆ, ನಿಮ್ಮ ತೂಕವನ್ನು ನೀವು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಜಿಮ್‌ಗೆ ಹೋಗಲು ನಿಮಗೆ ಸಾಧ್ಯವಾಗದಿದ್ದರೆ, ವಾಕ್ ಮಾಡಿ, ಸೈಕಲ್ ಓಡಿಸಿ ಅಥವಾ ಮೆಟ್ಟಿಲುಗಳನ್ನು ಹತ್ತಿರಿ.  

4 /6

4. ನೆಮ್ಮದಿಯಿಂದ ನಿದ್ದೆ ಮಾಡಿ- ಸಾಮಾನ್ಯವಾಗಿ, ಆರೋಗ್ಯವಂತ ವಯಸ್ಕರಿಗೆ ದಿನಕ್ಕೆ 7 ರಿಂದ 9 ಗಂಟೆಗಳ ಕಾಲ ನಿದ್ರೆ ಮಾಡಲು ಸಲಹೆ ನೀಡಲಾಗುತ್ತದೆ, ನೀವು ಕಡಿಮೆ ಪ್ರಮಾಣದಲ್ಲಿ ನಿದ್ರೆ ಮಾಡಿದರೆ ಅದು ನಿಮ್ಮ ದೇಹದ ಚಯಾಪಚಯ ಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು ಅದು ತೂಕ ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತದೆ.   

5 /6

5. ಸಾಕಷ್ಟು ನೀರು ಕುಡಿಯಿರಿ: ಸರಿಯಾದ ಆಹಾರದ ಜೊತೆಗೆ, ನಿಮ್ಮ ದೇಹವು ಸಾಕಷ್ಟು ಪ್ರಮಾಣದಲ್ಲಿ ನೀರು ಹೊಂದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಸಾಮಾನ್ಯವಾಗಿ ದಿನಕ್ಕೆ 7 ರಿಂದ 8 ಗ್ಲಾಸ್ ನೀರನ್ನು ಕುಡಿಯಲು ಸಲಹೆ ನೀಡಲಾಗುತ್ತದೆ, ಇದು ಕ್ಯಾಲೊರಿಗಳನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಒಟ್ಟಾರೆ ಆರೋಗ್ಯಕ್ಕೆ ತುಂಬಾ ಲಾಭದಾಯಕವಾಗಿದೆ.   

6 /6

(ಹಕ್ಕುತ್ಯಾಗ- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)