ಖಾಲಿ ಹೊಟ್ಟೆಯಲ್ಲಿ ಈ ಎಲೆ ತಿಂದರೆ ಮಧುಮೇಹ, ಹೃದಯ ಸಮಸ್ಯೆ ದೂರ..!

Curry leaves health benefits : ಆರೋಗ್ಯ ರಕ್ಷಣೆ ಬಹಳ ಮುಖ್ಯ.. ಅದಕ್ಕಾರಿ ಹೆಚ್ಚು ಹಣ ಖರ್ಚು ಮಾಡುವ ಅಗತ್ಯವಿಲ್ಲ.. ನಮ್ಮ ಸುತ್ತ ಮುತ್ತ ಸಿಗುವ ಅನೇಕ ತರಕಾರಿ, ಸೊಪ್ಪುಗಳನ್ನ ತಿಂದರೆ ಸಾಕು.. ಉತ್ತಮ ಆರೋಗ್ಯ ಪಡೆಯಬಹುದು.. ಈ ಪೈಕಿ ಈ ಕೆಳಗೆ ನೀಡಿರುವ ಸಸ್ಯದ ಎಲೆಯನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ಸಾಕಷ್ಟು ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು..
 

1 /9

ಆಹಾರಕ್ಕೆ ಪರಿಮಳ ಬರಲಿ, ಮಕ್ಕಳ ಆರೋಗ್ಯ ಗಟ್ಟಿಯಾಗಿರಲಿ ಅಂತ ಅಮ್ಮ ಅಡುಗೆಗೆ ಕರಿಬೇವಿನ ಎಲೆಗಳನ್ನ ಹಾಕುತ್ತಾರೆ.. ನಾವು ಅದನ್ನು ಅಜಾಗರೂಕತೆಯಿಂದ ಊಟದಿಂದ ತೆಗೆದು ಪಕ್ಕಕ್ಕೆ ಇಡುತ್ತೇವೆ. ಆದರೆ ನೀವು ಈ ಸುದ್ದಿಯನ್ನ ಓದಿದ ಮೇಲೆ ಎಂದಿಗೂ ಈ ತಪ್ಪನ್ನ ಮಾಡುವುದಿಲ್ಲ..   

2 /9

ಕರಿಬೇವಿನ ಎಲೆಗಳ ಪ್ರಯೋಜನಗಳ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಈ ಎಲೆಗಳನ್ನು ಅನೇಕ ಕಾಯಿಲೆಗಳಿಗೆ ಪರಿಹಾರವಾಗಿ ಬಳಸಬಹುದು. ಖಾಲಿ ಹೊಟ್ಟೆಯಲ್ಲಿ ಇದನ್ನು ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಆಯುರ್ವೇದದಲ್ಲಿ ಕರಿಬೇವಿನ ಎಲೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.   

3 /9

ಆಹಾರಕ್ಕೆ ಸುವಾಸನೆ ಮತ್ತು ಪರಿಮಳವನ್ನು ತರುವ ಕರಿಬೇವಿನ ಎಲೆಗಳು ದಕ್ಷಿಣ ಭಾರತದ ಅಡುಗೆಗಳಲ್ಲಿ ಅತ್ಯಗತ್ಯ ಅಂಶ. ಕರಿಬೇವಿನ ಎಲೆ ಇಲ್ಲದ ಆಹಾರ ರುಚಿಕರವಾಗಿರುವುದಿಲ್ಲ. ಇದಕ್ಕೆ ಕಾರಣ ಈ ಎಲೆಯಲ್ಲಿ ಅಸಂಖ್ಯಾತ ಪೋಷಕಾಂಶಗಳಿವೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳು, ಬೀಟಾ-ಕ್ಯಾರೋಟಿನ್, ವಿಟಮಿನ್ ಸಿ ರೋಗಗಳಿಂದ ನಮ್ಮನ್ನು ಸುರಕ್ಷಿತವಾಗಿರಿಸುತ್ತವೆ.   

4 /9

ಸಕ್ಕರೆ ಮಟ್ಟವು ನಿಯಂತ್ರಣದಲ್ಲಿರುತ್ತದೆ : ಮಧುಮೇಹವನ್ನು ನಿಯಂತ್ರಿಸುವಲ್ಲಿ ಕರಿಬೇವಿನ ಎಲೆಗಳು ಪರಿಣಾಮಕಾರಿ. ಅತಿ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಕರಿಬೇವಿನ ಎಲೆಗಳು ಇನ್ಸುಲಿನ್ ಸ್ರವಿಸುವಿಕೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದರಲ್ಲಿ ನಾರಿನಂಶ ಹೆಚ್ಚಿರುವುದರಿಂದ ಬೆಳವಣಿಗೆಯನ್ನು ಸುಧಾರಿಸುತ್ತದೆ ಮತ್ತು ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ.  

5 /9

ಜೀರ್ಣಕಾರಿ ಸಮಸ್ಯೆ ನಿವಾರಣೆ : ಗ್ಯಾಸ್ ಮತ್ತು ಎದೆಯುರಿ ಮುಂತಾದ ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿರುವವರು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಗಳನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಕರುಳು ಆರೋಗ್ಯವಾಗಿರುತ್ತದೆ.   

6 /9

ಹೃದಯದ ಆರೋಗ್ಯ  : ಕರಿಬೇವಿನ ಎಲೆಗಳಲ್ಲಿರುವ ಫೈಬರ್ ಕೆಟ್ಟ LDL ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಪೊಟ್ಯಾಸಿಯಮ್ ಕೂಡ ಸಮೃದ್ಧವಾಗಿದೆ, ಇದು ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.  

7 /9

ರೋಗ ನಿರೋಧಕ ಶಕ್ತಿ ಹೆಚ್ಚಳ : ಕರಿಬೇವಿನ ಎಲೆಯಲ್ಲಿ ಆ್ಯಂಟಿ ಫಂಗಲ್ ಗುಣಲಕ್ಷಣಗಳು, ಬ್ಯಾಕ್ಟೀರಿಯಾ ವಿರೋಧಿ ಗುಣಗಳು, ಆ್ಯಂಟಿ ಆಕ್ಸಿಡೆಂಟ್‌ಗಳು ಇತ್ಯಾದಿಗಳು ಹೇರಳವಾಗಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಫ್ರೀ ರ್ಯಾಡಿಕಲ್ಸ್ ರೋಗಗಳ ವಿರುದ್ಧ ಹೋರಾಡಲು ಸಹ ಸಹಾಯ ಮಾಡುತ್ತದೆ.  

8 /9

ಕಣ್ಣಿನ ಆರೋಗ್ಯ ಸುಧಾರಣೆ : ಕರಿಬೇವಿನ ಎಲೆಯಲ್ಲಿ ವಿಟಮಿನ್ ಎ ಹೇರಳವಾಗಿರುವುದರಿಂದ ತ್ವಚೆಯ ಆರೋಗ್ಯ ಚೆನ್ನಾಗಿರುತ್ತದೆ. ಇದರಲ್ಲಿರುವ ಬೀಟಾ-ಕ್ಯಾರೋಟಿನ್ ಕಣ್ಣಿನ ಸಮಸ್ಯೆಗಳನ್ನು ಮತ್ತು ಕಣ್ಣಿನ ಪೊರೆಗಳನ್ನು ತಡೆಯುವ ಮೂಲಕ ಕಣ್ಣುಗಳನ್ನು ರಕ್ಷಿಸುತ್ತದೆ.  

9 /9

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee Kannada News ಈ ಮಾಹಿತಿಗೆ ಜವಾಬ್ದಾರನಾಗಿರುವುದಿಲ್ಲ.)