ಅಪ್ಪಿತಪ್ಪಿಯೂ ಮೊಟ್ಟೆಯೊಂದಿಗೆ ಈ 4 ಆಹಾರಗಳನ್ನು ತಿನ್ನಲೇಬೇಡಿ..!

Things to Avoid Consuming with Eggs : ಮೊಟ್ಟೆಯಲ್ಲಿ ಪ್ರೋಟೀನ್ ಸಮೃದ್ಧವಾಗಿದ್ದು, ಅನೇಕ ಜನರು ಬೆಳಗಿನ ಉಪಾಹಾರದಲ್ಲಿ ಇದನ್ನು ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ. ವರ್ಕ್ ಔಟ್ ಮಾಡುವವರೂ ಮೊಟ್ಟೆ ತಿನ್ನುವ ಅಭ್ಯಾಸ ಹೊಂದಿರುತ್ತಾರೆ. ಆದರೆ ಎಗ್‌ ಅನ್ನು ಕೆಲವು ಆಹಾರಗಳ ಜೊತೆ ತಿನ್ನಬಾರದು ಗೊತ್ತೆ..? ಬನ್ನಿ ತಿಳಿಯೋಣ..

Foods should not eat with eggs : ಅನೇಕ ಜನರು ಬೆಳಗಿನ ಉಪಾಹಾರದಲ್ಲಿ ಮೊಟ್ಟೆಗಳನ್ನು ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ. ಮೊಟ್ಟೆಯಲ್ಲಿ ಪ್ರೋಟೀನ್ ಸಮೃದ್ಧವಾಗಿದ್ದು, ದೇಹದಾಢ್ಯ ಪಟುಗಳು ಇವುಗಳನ್ನು ಹೆಚ್ಚಾಗಿ ಸೇವಿಸತ್ತಾರೆ. ಎಗ್‌ನಲ್ಲಿ ಫೈಬರ್, ವಿಟಮಿನ್ ಮತ್ತು ಮಿನರಲ್‌ಗಳೂ ಇವೆ. ಆದರೆ ಮೊಟ್ಟೆಯೊಂದಿಗೆ ತಿನ್ನಬಾರದ ಕೆಲವು ಆಹಾರಗಳಿವೆ. ಅವು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತವೆ. 
 

1 /6

ಕೆಲವು ರೀತಿಯ ಆಹಾರಗಳನ್ನು ಮಿಶ್ರಣ ಮಾಡಿ ತಿನ್ನುವುದರಿಂದ ಅವುಗಳ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಆರೋಗ್ಯದ ಲಾಭವೂ ಇದೆ. ಆದರೆ ಕೆಲವು ರೀತಿಯ ಆಹಾರಗಳನ್ನು ಒಟ್ಟಿಗೆ ತಿನ್ನಬಾರದು. ಹಾಗೆಯೇ ಮೊಟ್ಟೆಯ ಜೊತೆಗೆ ತಿನ್ನಬಾರದ ಆಹಾರಗಳೂ ಇವೆ. ಅಪ್ಪಿತಪ್ಪಿಯೂ ಒಟ್ಟಿಗೆ ತಿನ್ನಬಾರದು.   

2 /6

ಸೋಯಾ ಹಾಲು : ಮೊಟ್ಟೆಯ ಜೊತೆಗೆ ತಿನ್ನಬಾರದ ಆಹಾರಗಳ ಪಟ್ಟಿಯಲ್ಲಿ ಸೋಯಾ ಹಾಲು ಮೊದಲ ಸ್ಥಾನದಲ್ಲಿದೆ. ಇದರಲ್ಲಿ ಪ್ರೊಟೀನ್ ಅಧಿಕವಾಗಿದೆ. ಮೊಟ್ಟೆ ಮತ್ತು ಸೋಯಾ ಹಾಲನ್ನು ಒಟ್ಟಿಗೆ ಸೇವಿಸುವುದರಿಂದ ಪ್ರೋಟೀನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ.  

3 /6

ಸಕ್ಕರೆ : ಸಕ್ಕರೆಯೊಂದಿಗೆ ಮೊಟ್ಟೆಗಳನ್ನು ಬೇಯಿಸುವುದು ಅಥವಾ ತಿನ್ನುವುದು ಥಿಯೋಅಮಿನೋ ಆಮ್ಲವನ್ನು ಬಿಡುಗಡೆ ಮಾಡುತ್ತದೆ. ಸಕ್ಕರೆ ಮತ್ತು ಮೊಟ್ಟೆಗಳನ್ನು ಒಟ್ಟಿಗೆ ಸೇವಿಸುವುದರಿಂದ, ಅದರಲ್ಲಿರುವ ಪ್ರೋಟೀನ್ ರಾಸಾಯನಿಕ ರಚನೆಯು ಸಂಪೂರ್ಣವಾಗಿ ಬದಲಾಗುತ್ತದೆ. ಅದಕ್ಕಾಗಿಯೇ ಮೊಟ್ಟೆ ಮತ್ತು ಸಕ್ಕರೆಯನ್ನು ಯಾವುದೇ ಸಂದರ್ಭದಲ್ಲಿ ಒಟ್ಟಿಗೆ ತಿನ್ನಬಾರದು..  

4 /6

ಚಹಾ : ನಾವು ಪ್ರತಿದಿನ ಬೆಳಿಗ್ಗೆ ಚಹಾ ಕುಡಿಯುತ್ತೇವೆ. ಹಾಗೆಯೇ ಬೆಳಗಿನ ತಿಂಡಿಯಲ್ಲಿ ಮೊಟ್ಟೆ ತಿನ್ನುತ್ತೆವೆ. ಆದರೆ ಈ ಎರಡನ್ನೂ ಒಟ್ಟಿಗೆ ತೆಗೆದುಕೊಳ್ಳುವುದರಿಂದ ಗಂಭೀರ ಹೊಟ್ಟೆಯ ಕಾಯಿಲೆಗಳು ಉಂಟಾಗಬಹುದು. ಕೆಲವರು ಈ ಆಹಾರ ಸಂಯೋಜನೆಯನ್ನು ಇಷ್ಟಪಡುತ್ತಾರೆ. ಚಹಾದೊಂದಿಗೆ ಮೊಟ್ಟೆಯನ್ನು ಸೇವಿಸುವುದರಿಂದ ಪ್ರೋಟೀನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಅಸಿಡಿಟಿ ಮತ್ತು ಹೊಟ್ಟೆ ನೋವಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ.  

5 /6

ಮಾಂಸ : ಮೊಟ್ಟೆ ಜೊತೆಗೆ ಮಾಂಸ ತಿನ್ನಬೇಡಿ. ಏಕೆಂದರೆ ಈ ಸಂಯೋಜನೆಯು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮೊಟ್ಟೆಯಲ್ಲಿ ಹೆಚ್ಚಿನ ಶೇಕಡಾವಾರು ಪ್ರೋಟೀನ್ ಮತ್ತು ಕೊಬ್ಬು ಇರುತ್ತದೆ. ಮಾಂಸವೂ ಸಹ ಇದೇ ಗುಣಗಳನ್ನು ಹೊಂದಿದೆ. ಹೀಗಾಗಿ ಇವೆರಡನ್ನು ಒಟ್ಟಿಗೆ ಸೇವಿಸಿದರೆ, ಜೀರ್ಣವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಇದು ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.   

6 /6

ಬಾಳೆಹಣ್ಣು : ಬಾಳೆಹಣ್ಣಿನಲ್ಲಿ ಪೋಷಕಾಂಶಗಳು ಹೇರಳವಾಗಿವೆ. ಆದರೆ, ಮೊಟ್ಟೆಗಳೊಂದಿಗೆ ಬಾಳೆಹಣ್ಣು ತಿನ್ನುವಾಗ ಸ್ವಲ್ಪ ಜಾಗರೂಕರಾಗಿರಿ. ಎಕೆಂದರೆ ಇವೆರಡನ್ನೂ ಒಟ್ಟಿಗೆ ತೆಗೆದುಕೊಂಡು ಸೇವಿಸುವುದು ಒಳ್ಳೆಯದಲ್ಲ. ಏಕೆಂದರೆ ಮೊಟ್ಟೆಯಲ್ಲಿ ಹೆಚ್ಚಿನ ಶೇಕಡಾವಾರು ಪ್ರೋಟೀನ್ ಇರುತ್ತದೆ. ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ.  0