Things that should not be kept near Tulsi plant: ಹಿಂದೂ ಧರ್ಮದಲ್ಲಿ, ದೇವಾನುದೇವತೆಗಳು ವಾಸಿಸುವ ಅನೇಕ ಮರಗಳು ಮತ್ತು ಸಸ್ಯಗಳ ಬಗ್ಗೆ ಹೇಳಲಾಗಿದೆ. ಈ ಸಸ್ಯಗಳಲ್ಲಿ ತುಳಸಿ ಕೂಡ ಒಂದು. ಇನ್ನು ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಪೂಜ್ಯ ಸ್ಥಾನವಿದೆ. ತುಳಸಿ ಗಿಡದಲ್ಲಿ ಲಕ್ಷ್ಮಿ ದೇವಿ ನೆಲೆಸಿದ್ದಾಳೆ ಎಂದು ಹೇಳಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಹಿಂದೂ ಧರ್ಮದಲ್ಲಿ, ದೇವಾನುದೇವತೆಗಳು ವಾಸಿಸುವ ಅನೇಕ ಮರಗಳು ಮತ್ತು ಸಸ್ಯಗಳ ಬಗ್ಗೆ ಹೇಳಲಾಗಿದೆ. ಈ ಸಸ್ಯಗಳಲ್ಲಿ ತುಳಸಿ ಕೂಡ ಒಂದು. ಇನ್ನು ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಪೂಜ್ಯ ಸ್ಥಾನವಿದೆ. ತುಳಸಿ ಗಿಡದಲ್ಲಿ ಲಕ್ಷ್ಮಿ ದೇವಿ ನೆಲೆಸಿದ್ದಾಳೆ ಎಂದು ಹೇಳಲಾಗುತ್ತದೆ. ತುಳಸಿಯನ್ನು ಪೂಜಿಸುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹವನ್ನು ಪಡೆಯುತ್ತಾರೆ ಎಂಬ ನಂಬಿಕೆಯೂ ಇದೆ. ಆದರೆ ತುಳಸಿ ಗಿಡವನ್ನು ಪೂಜಿಸುವಾಗ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ.
ತುಳಸಿಯ ಬಳಿ ಈ ವಸ್ತುಗಳನ್ನು ಇಡುವುದರಿಂದ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ ಮತ್ತು ಇದು ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ತುಳಸಿ ಗಿಡದ ಬಳಿ ಇಡಬಾರದ ವಸ್ತುಗಳು ಯಾವುವು ಎಂದು ತಿಳಿಯೋಣ.
ಪೊರಕೆ ಮತ್ತು ಕಸದ ಬುಟ್ಟಿ: ತುಳಸಿ ಗಿಡದ ಬಳಿ ಯಾವತ್ತೂ ಕಸದ ಬುಟ್ಟಿ ಅಥವಾ ಪೊರಕೆ ಇತ್ಯಾದಿಗಳನ್ನು ಇಡಬೇಡಿ. ತುಳಸಿ ಗಿಡವನ್ನು ಇಡುವ ಸ್ಥಳದಲ್ಲಿ ಯಾವುದೇ ರೀತಿಯ ಕೊಳಕು ಇರಬಾರದು ಎಂಬುದನ್ನು ನೆನಪಿನಲ್ಲಿಡಿ.
ಪುರಾಣಗಳ ಪ್ರಕಾರ ಗಣೇಶ ಮತ್ತು ತುಳಸಿಗೆ ಆಗಿಬರುವುದಿಲ್ಲ. ಇವರಿಬ್ಬರ ವೈಮನಸ್ಸಿನ ಕಾರಣ, ತುಳಸಿಯ ಬಳಿ ಗಣಪತಿಯ ಚಿತ್ರ ಅಥವಾ ವಿಗ್ರಹವನ್ನು ಇಡಬಾರದು ಎಂದು ಹೇಳಲಾಗುತ್ತದೆ.
ಶಿವಲಿಂಗ ಅಥವಾ ಶಿವನ ಮೂರ್ತಿ ಇತ್ಯಾದಿಗಳನ್ನು ತುಳಸಿ ಗಿಡದ ಬಳಿ ಅಥವಾ ತುಳಸಿ ಪಾತ್ರೆಯಲ್ಲಿ ಇಡಬಾರದು. ಇದರ ಹಿಂದಿನ ನಂಬಿಕೆಯೆಂದರೆ ತುಳಸಿಯು ಹಿಂದಿನ ಜನ್ಮದಲ್ಲಿ ಜಲಂಧರನ ಹೆಂಡತಿಯಾಗಿದ್ದಳು. ಆ ಜಲಂಧರನ ಕ್ರೌರ್ಯವು ಹೆಚ್ಚಾದಾಗ, ಶಿವನು ಅವನನ್ನು ಸಂಹಾರ ಮಾಡಿದ್ದನು. ಇದೇ ಕಾರಣದಿಂದ ಶಿವನ ಯಾವುದೇ ಪೂಜೆಯಲ್ಲಿ ತುಳಸಿಯನ್ನು ಬಳಸದೇ ಇರಲು ಕಾರಣ.
ಪಾದರಕ್ಷೆ ಮತ್ತು ಚಪ್ಪಲಿ: ತುಳಸಿ ಗಿಡ ಇರುವ ಜಾಗದಲ್ಲಿ ಪಾದರಕ್ಷೆ ಮತ್ತು ಚಪ್ಪಲಿಯನ್ನು ಇಡಬಾರದು. ಹೀಗೆ ಮಾಡುವುದರಿಂದ ಆರ್ಥಿಕ ಬಿಕ್ಕಟ್ಟು ಉಂಟಾಗಬಹುದು.
ತುಳಸಿ ಬಳಿ ಯಾವುದೇ ಮುಳ್ಳಿನ ಗಿಡಗಳು ಇರಬಾರದು. ತುಳಸಿ ಬಳಿ ಮುಳ್ಳಿನ ಗಿಡಗಳಿದ್ದರೆ ಮನೆಯಲ್ಲಿ ಬಹುಬೇಗ ನೆಗೆಟಿವಿಟಿ ಹರಡುತ್ತದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)