Chandra Grahan 2021: 2021 ರ ಮೊದಲ ಚಂದ್ರ ಖಂಡಗ್ರಾಸ ಚಂದ್ರ ಗ್ರಹಣವಾಗಲಿದೆ. ಇದು ಯಾವ ದಿನ ಸಂಭವಿಸಲಿದೆ. ಭಾರತದಲ್ಲಿ ಗ್ರಹಣ ಗೋಚರಿಸಲಿದೆಯೋ ಇಲ್ಲವೋ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ನವದೆಹಲಿ: ಅಂದಹಾಗೆ, ಚಂದ್ರ ಗ್ರಹಣ, ಸೂರ್ಯಗ್ರಹಣಗಳು ಖಗೋಳದಲ್ಲಿ ಸಂಭವಿಸುವ ಘಟನೆಯಾಗಿದೆ. ವಿಜ್ಞಾನದ ಪ್ರಕಾರ, ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಚಂದ್ರ ಗ್ರಹಣ ಸಂಭವಿಸುತ್ತದೆ. ಖಗೋಳ ವಿದ್ಯಮಾನಗಳ ಹೊರತಾಗಿ, ಜ್ಯೋತಿಷ್ಯದಲ್ಲಿ ಚಂದ್ರ ಗ್ರಹಣಕ್ಕೆ ಬಹಳ ಪ್ರಾಮುಖ್ಯತೆ ಇದೆ. ವರ್ಷದ ಮೊದಲ ಚಂದ್ರಗ್ರಹಣ ಯಾವ ದಿನ ನಡೆಯುತ್ತಿದೆ, ಅದು ಭಾರತದಲ್ಲಿ ಗೋಚರಿಸುತ್ತದೆಯೋ ಇಲ್ಲವೋ ಅದರ ಪರಿಣಾಮ ಎಷ್ಟಿರಲಿದೆ ತಿಳಿಯಿರಿ .
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಹಿಂದೂ ಕ್ಯಾಲೆಂಡರ್ ಮತ್ತು ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, 2021 ರ ಮೊದಲ ಚಂದ್ರಗ್ರಹಣವು ಮೇ 26 ರ ಬುಧವಾರ ವೈಶಾಕ ಪೂರ್ಣಿಮಾ ದಿನದಂದು ಸಂಭವಿಸಲಿದೆ. ಭಾರತೀಯ ಸಮಯದ ಪ್ರಕಾರ ಚಂದ್ರ ಗ್ರಹಣವು ಮೇ 26 ರಂದು ಮಧ್ಯಾಹ್ನ 2.17 ಕ್ಕೆಗ್ರಹಣ ಆರಂಭವಾಗಲಿದ್ದು, ಸಂಜೆ 7.19 ಕ್ಕೆ ಗ್ರಹಣಕ್ಕ ಕೊನೆಯಾಗಲಿದೆ.
ಭಾರತದ ಸಮಯದ ಪ್ರಕಾರ, ಈ ಚಂದ್ರ ಗ್ರಹಣ ಹಗಲಿನಲ್ಲಿ ನಡೆಯುತ್ತದೆ. ಆದ್ದರಿಂದ ಇದು ಭಾರತದಲ್ಲಿ ಗೋಚರಿಸುವುದಿಲ್ಲ. ಈ ಚಂದ್ರ ಗ್ರಹಣವು ಇಡೀ ಭಾರತದಲ್ಲಿ ಗೋಚರವಾಗುವುದಿಲ್ಲ. ಹಾಗಾಗಿ ಈ ಗ್ರಹಣದ ಸೂತಕ ಕೂಡಾ ಇರುವುದಿಲ್ಲ. ದೇವಾಲಯದ ಬಾಗಿಲುಗಳನ್ನು ಗ್ರಹಣ ಕಾಲದಲ್ಲಿ ಮುಚ್ಚಲಾಗುವುದಿಲ್ಲ ಮತ್ತು ಶುಭ ಕಾರ್ಯಗಳು ಕೂಡಾ ಎಂದಿನಂತೆ ನಡೆಯುತ್ತವೆ.
ಮೇ 26 ರಂದು ಚಂದ್ರ ಗ್ರಹಣ ಜಪಾನ್, ಸಿಂಗಾಪುರ್, ಬಾಂಗ್ಲಾದೇಶ, ದಕ್ಷಿಣ ಕೊರಿಯಾ, ಬರ್ಮಾ, ಉತ್ತರ ಮತ್ತು ದಕ್ಷಿಣ ಅಮೆರಿಕಾ, ಫಿಲಿಪೈನ್ಸ್, ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರ, ಆಸ್ಟ್ರೇಲಿಯಾ ಮತ್ತು ಉತ್ತರ ಯುರೋಪಿನ ಕೆಲವು ಪ್ರದೇಶಗಳಲ್ಲಿ ಕಂಡುಬರುತ್ತದೆ.
ಹಿಂದೂ ಕ್ಯಾಲೆಂಡರ್ ಪ್ರಕಾರ, ಮೇ 26 ರಂದು ಸಂಭವಿಸಲಿರುವ ವರ್ಷದ ಮೊದಲ ಚಂದ್ರಗ್ರಹಣವು ವೃಶ್ಚಿಕ ರಾಶಿಯಲ್ಲಿ ಘಟಿಸಲಿದೆ. ಹಾಗಾಗಿ ಈ ರಾಶಿಯವರ ಮೇಲೆ ಸ್ವಲ್ಪ ಮಟ್ಟಿನ ಪ್ರಭಾವ ಇರಲಿದೆ. ವೃಶ್ಚಿಕ ರಾಶಿಯವರು ಈ ಗ್ರಹಣ ಸಮಯದಲ್ಲಿ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ